ಮಂಜೇಶ್ವರ: ಜಿಲ್ಲೆಯಲ್ಲಿ ಲೋಕಸಭೆ ಚುನಾವಣೆಗೆ ಮತದಾನ ಆರಂಭವಾದ ಮೊದಲ ಗಂಟೆಯಲ್ಲಿಯೇ ಮತಗಟ್ಟೆ ಕೇಂದ್ರಗಳಲ್ಲಿ ಮತದಾರರ ಉದ್ದನೆಯ ಸರತಿ ಸಾಲು ಕಂಡು ಬಂತು. ಕುಂಜತ್ತೂರು, ಉದ್ಯಾವರ, ಮಂಜೇಶ್ವರ, ಉಪ್ಪಳ, ಕುಂಬಳೆ ಕಾಸರಗೋಡು ಸೇರಿದಂತೆ ಎಲ್ಲಾ ಮತಗಟ್ಟೆಗಳಲ್ಲೂ ಉದ್ದನೆಯ ಸರತಿ ಸಾಲು ಕಂಡು ಬಂತು.
ಸುಡುವ ಉರಿ ಬಿಸಿಲಿನಲ್ಲೂ ಮತದಾರರು ಮತವನ್ನು ಚಲಾಯಿಸಲು ಬೆವರೊರೆಸಿಕೊಂಡು ಸೆಕೆಯನ್ನು ಸಹಿಸಿ ಜನರು ಮತವನ್ನು ಚಲಾಯಿಸಿದರು.
ಕೇರಳದ ಮೊದಲ ಮತಗಟ್ಟೆ ಕೇಂದ್ರವಾದ ಬೂತ್ ನಂಬ್ರ ಒಂದು ಕುಂಜತ್ತೂರು ಹೈಯರ್ ಸೆಕಂಡರಿ ಶಾಲೆಯಲ್ಲಿ ಮತದಾರರ ಉದ್ದನೆಯ ಸರದಿ ಸಾಲು ಕಂಡು ಬಂತು.
ಕಾಸರಗೋಡು ಕ್ಷೇತ್ರದ ಎನ್‍ಡಿಎ ಅಭ್ಯರ್ಥಿ ಎಂ.ಎಲ್. ಅಶ್ವಿನಿ ಅವರು ತಮ್ಮ ಸ್ವಂತ ಬೂತ್, ಮಂಜೇಶ್ವರ ಕ್ಷೇತ್ರದ ಬೂತ್ 43 (ಶ್ರೀ ವಾಣಿ ವಿಜಯ ಎಯುಪಿ ಶಾಲೆ, ಕಿಚ್ಚಿನಕಟ್ಟೆ, ಕೊಡ್ಲಮೊಗರು) ನಲ್ಲಿ ಮತ ಚಲಾಯಿಸಿದರು. ಅಶ್ವಿನಿ ಅವರ ಪತಿ ಶಶಿಧರ ಅವರೊಂದಿಗೆ ಮತ ಚಲಾಯಿಸಲು ಆಗಮಿಸಿದ್ದರು. ಯುಡಿಎಫ್ ಅಭ್ಯರ್ಥಿ, ಹಾಲಿ ಸಂಸದ ರಾಜಮೋಹನ್ ಉಣ್ಣಿತ್ತಾನ್ ಅವರು ಪಡನ್ನಕ್ಕಾಡ್ ಎಸ್ ಎನ್ ಟಿ ಟಿ ಸಿ ಯ 170 ನೇ ಮತಗಟ್ಟೆಯಲ್ಲಿ ಪತ್ನಿಯೊಂದಿಗೆ ಆಗಮಿಸಿ ಮತ ಚಲಾಯಿಸಿದರು.
ಎಲ್‍ಡಿಎಫ್ ಅಭ್ಯರ್ಥಿ ಎಂ.ವಿ.ಬಾಲಕೃಷ್ಣನ್ ಮಾಸ್ತರ್ ಮುಜಕೊಂ ಜಿಯುಪಿ ಶಾಲೆಯ 35ನೇ ಬೂತ್‍ನಲ್ಲಿ ಮತ ಚಲಾಯಿಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಈ ಸಲ ಎಲ್ ಡಿ ಎಫ್ ಐತಿಹಾಸಿಕ ಗೆಲುವನ್ನು ಸಾಧಿಸಲಿರುವುದಾಗಿ ಹೇಳಿದರು.
ಬಿಜೆಪಿ ರಾಜ್ಯ ಕಾರ್ಯದರ್ಶಿ ನ್ಯಾಯವಾದಿ ಕೆ.ಶ್ರೀಕಾಂತ್ ಅವರು ಬೇಕಲದ ಜಿ.ಎಫ್.ಎಚ್.ಎಸ್ ಶಾಲೆಯ 105ನೇ ಮತಗಟ್ಟೆಯಲ್ಲಿ ಕುಟುಂಬ ಸಹಿತ ಆಗಮಿಸಿ ಮತ ಚಲಾಯಿಸಿದರು. ಈ ಸಂದರ್ಭ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಕೇರಳದಲ್ಲಿ ಈ ಬಾರಿ ಬಿಜೆಪಿ ಮಹತ್ತರವಾದ ಸಾಧನೆಗೈಯಲಿದೆ ಎಂದರು.
(ಚಿತ್ರ ಮಾಹಿತಿ: ಮಂಜೇಶ್ವರ ಶಾಸಕ ಎಕೆಎಂ ಅಶ್ರಫ್ ಮತಚಲಾಯಿಸಿದರು,2)(3)ಕೆ.ಶ್ರೀಕಾಂತ್ ಕುಟುಂಬ ಸಹಿತ ಆಗಮಿಸಿ ಮತಚಲಾಯಿಸಿದರು,3)ಎನ್ ಡಿ ಎ ಅ|ಭ್ಯರ್ಥಿ ಎಂ.ಎಲ್ ಅಶ|ವನಿ ಮತ ಚಲಾಯಿಸಿದರು)
………………………………………………………………………………………………………………………………………..