HEALTH TIPS

ಕೇರಳದ ಇತಿಹಾಸದಲ್ಲಿ ಅತ್ಯಂತ ಕೆಟ್ಟ ಆರ್ಥಿಕ ವರ್ಷ-ಪ್ರತಿಪಕ್ಷ ಮುಖಂಡ ವಿ.ಡಿ ಸತೀಶನ್

                    ಕಾಸರಗೋಡು: ಎಡರಂಗ ಆಡಳಿತಾವಧಿಯಲ್ಲಿ ಕೇರಳ ರಾಜ್ಯದ ಇತಿಹಾಸದಲ್ಲಿಯೇ ಅತ್ಯಂತ ಕೆಟ್ಟ ಆರ್ಥಿಕ ವರ್ಷವಾಗಿ ಬದಲಾಗಿದೆ ಎಂಬುದಾಗಿ ಪ್ರತಿಪಕ್ಷ ಮುಖಂಡ ವಿ.ಡಿ ಸತೀಶನ್ ತಿಳಿಸಿದ್ದಾರೆ. ಅವರು ಕಾಸರಗೋಡು ಪ್ರೆಸ್ ಕ್ಲಬ್ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಆಯೋಜಿಸುತ್ತಿರುವ'ಜನಸಭಾ'ಕಾರ್ಯಕ್ರಮದ ಅಂಗವಾಗಿ ಆಯೋಜಿಸುತ್ತಿರುವ ಮೀಟ್ ದಿ ಪ್ರೆಸ್ ಕಾರ್ಯಕ್ರಮದಲ್ಲಿ ಮಾತನಾಡಿದರು.    

                 ಇತಿಹಾಸದಲ್ಲೇ ಅತ್ಯಂತ ಕಡಿಮೆ ಯೋಜನಾ ವೆಚ್ಚ ಕಳೆದಿದ್ದು, ಕಳೆದ ವರ್ಷದ ಯೋಜನಾ ವೆಚ್ಚ ಎಷ್ಟು ಎಂದು ಹೇಳಲು ಸಿಎಂ ಮುಂದಾಗಬೇಕು. ಯೋಜನೆ ಹಂಚಿಕೆಯ ಶೇ. 35ರಷ್ಟು ಖರ್ಚು ಮಾಡಲು ಸಾಧ್ಯವಾಗದಿರುವುದು ಎಡರಂಗ ಸರ್ಕಾರದ ಮಹಾನ್ ವೈಫಲ್ಯವಾಗಿದೆ. ಒಟ್ಟಿನಲ್ಲಿ ರಾಜ್ಯದ ಹಿತ ಮರೆತಿರುವ ಪಿಣರಾಯಿ ವಿಜಯನ್ ಸರ್ಕಾರ ಪೌರತ್ವ ಕಾಯ್ದೆ ಎಂದು ದಿನಕ್ಕೊಂದು ಹೇಳಿಕೆ ನೀಡುವ ಮೂಲಕ ಜನರ ಹಾದಿ ತಪ್ಪಿಸಲು ಯತ್ನಿಸುತ್ತಿದೆ.

              ಪೌರತ್ವ ಕಾಯ್ದೆ ಬಗ್ಗೆ ಕಾಂಗ್ರೆಸ್‍ನ ಪ್ರಾಮಾಣಿಕತೆ ಬಗ್ಗೆ ಪ್ರಶ್ನಿಸುತ್ತಿರುವ ಮುಖ್ಯಮಂತ್ರಿ, ಎಡರಂಗದ ನಿಲುವನ್ನು ಸ್ಪಷ್ಟಪಡಿಸಬೇಕಾಗಿದೆ. ಕಳೆದ ಒಂದು ತಿಂಗಳಿಂದ ಪ್ರತಿ ಸಭೆಯಲ್ಲಿ ಸುಳ್ಳನ್ನು ಆವರ್ತಿಸುತ್ತಿರುವ ಮುಖ್ಯಮಂತ್ರಿ ಕಾಂಗ್ರೆಸ್ ಪಕ್ಷ ಹಾಗೂ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸುವ ಮೂಲಕ ತಮ್ಮ ಹತಾಶೆಯ ಮನೋಭಾವ ಹೊರ ಹಾಕುತ್ತಿದ್ದಾರೆ. ಮಣಿಪುರದ ವಿಷಯದಲ್ಲೂ ಕಾಂಗ್ರೆಸ್ ಬಗ್ಗೆ ಸುಳ್ಳು ಹೇಳಿಕೆ ನೀಡುತ್ತಿರುವ ಮುಖ್ಯಮಂತ್ರಿ, ತಮ್ಮ ರಾಜಕೀಯ ಮುಖಪತ್ರಗಳು ಬಿತ್ತರಿಸುವ ಸುದ್ದಿಗಳ ಹೊರತಾಗಿ   ಮುಖ್ಯವಾಹಿನಿಯ ಮಾಧ್ಯಮಗಳತ್ತ ಕಣ್ಣು ಹಾಯಿಸಲಿ ಎಂದು ತಿಳಿಸಿದರು.

                  ಎಸ್‍ಡಿಪಿಐ ಕಾಂಗ್ರೆಸ್‍ಗೆ ಬೆಂಬಲ  ಘೋಷಿಸಿರುವ ಬಗ್ಗೆ ಪತ್ರಕರ್ತರ ಪ್ರಶ್ನೆಗೆ, ಹಲವು ಸಂಘಟನೆಗಳು ಯುಡಿಎಫ್‍ಗೆ ಬೆಂಬಲ ನೀಡಲು ಮುಂದಾಗಿದೆ. ಎಸ್‍ಡಿಪಿಐ ಜೊತೆ ಇದುವರೆಗೂ ಮಾತುಕತೆ ನಡೆಸಿಲ್ಲ ಅಥವಾ ಒಪ್ಪಂದವನ್ನೂ ಮಾಡಿಕೊಂಡಿಲ್ಲ. ರಾಷ್ಟ್ರಮಟ್ಟದಲ್ಲಿ ಕೋಮುವಾದ, ಫ್ಯಾಸಿಸಂ ನಿರ್ನಾಮಗೊಳಿಸಬೇಕು,  ಸಂಘಪರಿವಾರವನ್ನು ಕಿತ್ತೊಗೆಯಬೇಕು ಎಂಬ ಭಾವನೆ ಎಲ್ಲರಲ್ಲೂ ಇದೆ. ಕಳೆದ ಬಾರಿ ಎಸ್‍ಡಿಪಿಐ ಬೆಂಬಲ ನೀಡದಿದ್ದರೂ ಯುಡಿಎಫ್ ಎಲ್ಲ 19 ಸ್ಥಾನಗಳನ್ನು ಗೆದ್ದಿತ್ತು. ಕೇರಳದಲ್ಲಿ ಐಎನ್‍ಡಿಐಎ ಒಕ್ಕೂಟದಿಂದ ಬೇರ್ಪಟ್ಟು ಐಕ್ಯರಂಗ ಚುನಾವಣೆ ಎದುರಿಸುತ್ತಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಇದು ರಾಷ್ಟ್ರಮಟ್ಟದಲ್ಲಿ ಹೈಕಮಾಂಡ್ ನಡೆಸಿರುವ ಒಪ್ಪಂದವಾಗಿದ್ದು, ಕೇರಳದಲ್ಲಿ ಇದು ಬಾಧಕವಾಗದು ಎಂದು ನುಣುಚಿಕೊಮಡರು.

            ಮೀಟ್ ದಿ ಪ್ರೆಸ್ ಕಾರ್ಯಕ್ರಮದಲ್ಲಿ ಪ್ರೆಸ್‍ಕ್ಲಬ್ ಅಧ್ಯಕ್ಷ ಮಹಮ್ಮದ್ ಹಾಶಿಂ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಕೆ.ವಿ ಪದ್ಮೇಶ್ ಸ್ವಾಗತಿಸಿದರು. ಡಿಸಿಸಿ ಅಧ್ಯಕ್ಷ ಪಿ.ಎ ಫೈಸಲ್, ಕೆ.ಪಿ ಕುಞÂಕಣ್ಣನ್ ಉಪಸ್ಥಿತರಿದ್ದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries