ಟೊರಂಟೊ: ಭಾರತದಲ್ಲಿ ನರೇಂದ್ರ ಮೋದಿ ಸರಕಾರ ಜಾರಿಗೆ ತಂದಿರುವ ಶಾಸನಗಳನ್ನು ವಿರೋಧಿಸುವ ಎರಡು ಪ್ರತಿಭಟನೆಗಳನ್ನು ವಿವರಿಸುವ ಸಾಕ್ಷ್ಯಚಿತ್ರಗಳು ಕೆನಡಾದ ಟೊರಂಟೋದಲ್ಲಿ ನಡೆಯುತ್ತಿರುವ ಸಾಕ್ಷ್ಯಚಿತ್ರೋತ್ಸವ `ಹಾಟ್ ಡಾಕ್ಸ್' ಉತ್ಸವಕ್ಕೆ ಆಯ್ಕೆಗೊಂಡಿರುವ ಭಾರತದ ಕಿರುಚಿತ್ರಗಳಲ್ಲಿ ಸೇರಿವೆ.

ಹಾಟ್ ಡಾಕ್ಸ್‍ನ 31ನೇ ಆವೃತ್ತಿ ಗುರುವಾರ ಆರಂಭಗೊಂಡಿದ್ದು ಮೇ 5ರವರೆಗೆ ನಡೆಯುತ್ತದೆ. ಈ ಸಾಕ್ಷ್ಯಚಿತ್ರೋತ್ಸವದಲ್ಲಿ ಭಾರತದಿಂದ ಪ್ರದರ್ಶನಗೊಳ್ಳಲಿರುವ ಸಾಕ್ಷ್ಯಚಿತ್ರಗಳಲ್ಲಿ ಮೋದಿ ಸರಕಾರ ಜಾರಿಗೆ ತಂದ ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರು ನಡೆಸಿದ ಪ್ರತಿಭಟನೆಯನ್ನು ವಿವರಿಸುವ `ಫಾರ್ಮಿಂಗ್ ದಿ ರೆವೊಲ್ಯುಷನ್' ಸಾಕ್ಷ್ಯಚಿತ್ರ ಸೇರಿದೆ. ನಿಷಿತಾ ಜೈನ್ ನಿರ್ದೇಶನ, ಆಕಾಶ್ ಬಸುಮತರಿ ಸಹ ನಿರ್ದೇಶನದ ಈ ಸಾಕ್ಷ್ಯಚಿತ್ರ 2020ರಲ್ಲಿ ಪ್ರತಿಭಟನೆ ಆರಂಭಗೊಂಡಂದಿನಿಂದ ಸರಕಾರವು ಶಾಸನಗಳನ್ನು ರದ್ದುಗೊಳಿಸುವವರೆಗಿನ ಬೆಳವಣಿಗೆಯ ಮೇಲೆ ಬೆಳಕು ಚೆಲ್ಲಿದೆ. `ಈ ಪ್ರತಿಭಟನೆಗಳ ಪ್ರಮಾಣವು ಭಾರತದ ಸ್ವಾತಂತ್ರ್ಯ ಚಳವಳಿಯ ಉತ್ಸಾಹವನ್ನು ಪ್ರತಿಧ್ವನಿಸಿತು. ಅನಿರೀಕ್ಷಿತ, ವಿಜಯಶಾಲಿ ಫಲಿತಾಂಶದಲ್ಲಿ ಕೊನೆಗೊಂಡಿತು' ಎಂದು ಹಾಟ್ ಡಾಕ್ಸ್ ಹೇಳಿದೆ.
ಮತ್ತೊಂದು ಸಾಕ್ಷ್ಯಚಿತ್ರ ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ) ವಿರೋಧಿಸಿ ನಡೆದ ಪ್ರತಿಭಟನೆಯನ್ನು ವಿವರಿಸಿದೆ. ನೌಶೀನ್ ಖಾನ್ ನಿರ್ದೇಶನದ ಈ ಸಿನೆಮ ಶಾಹೀನ್ ಬಾಗ್‍ನ ಪ್ರತಿಭಟನೆಯನ್ನು ಕೇಂದ್ರೀಕರಿಸಿದೆ. ` ಈ ಸಿನೆಮ ಶಾಹೀನ್‍ಬಾಗ್ ಮಹಿಳೆಯರ ಶಕ್ತಿ ಮತ್ತು ಚೇತರಿಸಿಕೊಳ್ಳುವ ಸಾಮಥ್ರ್ಯವನ್ನು ಪ್ರದರ್ಶಿಸಿದೆ. ಬಹಿಷ್ಕಾರ(ಹೊರಗಿಡುವಿಕೆ), ಧ್ರುವೀಕರಣ ಮತ್ತು ದಬ್ಬಾಳಿಕೆಯ ಮಾನವ ಅನುಭವವನ್ನು ಪರಿಶೋಧಿಸುತ್ತದೆ. ಅವರ ಕಥೆಯು ಆಧುನಿಕ ಭಾರತದಲ್ಲಿ ಸಾರ್ವಜನಿಕ ಭಿನ್ನಾಭಿಪ್ರಾಯದ ಹೊಸ ರೂಪದ ಪ್ರಬಲ ಪೂರ್ವನಿದರ್ಶನವನ್ನು ಒದಗಿಸಿದೆ' ಎಂದು ಹಾಟ್ ಡಾಕ್ಸ್ ಹೇಳಿದೆ.