HEALTH TIPS

ನಾಳೆ ಮಂಗಳೂರಿಗೆ ಮೋದಿ: ರೋಡ್‌ ಶೋ: ಕೆಲವೆಡೆ ವಾಹನ ಸಂಚಾರ ನಿರ್ಬಂಧ

 ಮಂಗಳೂರು: ಪ್ರಧಾನಿ ನರೇಂದ್ರ ಮೋದಿ ಇದೇ 14ರಂದು ಭಾನುವಾರ ಸಂಜೆ ನಗರದ ನಾರಾಯಣಗುರು ವೃತ್ತದಿಂದ ನವಭಾರತ್‌ ಸರ್ಕಲ್‌ ವರೆಗೆ ರೋಡ್‌ ಶೋ ನಡೆಸಲಿದ್ದು, ಪೊಲೀಸರು ಕೆಲ ರಸ್ತೆಗಳಲ್ಲಿ ವಾಹನ ಸಂಚಾರಕ್ಕೆ ನಿರ್ಬಂಧ ಹೇರಿದ್ದಾರೆ.

ಅಂದು ಮಧ್ಯಾಹ್ನ 2ರಿಂದ ಕಾರ್ಯಕ್ರಮ ಮುಗಿಯುವವರೆಗೆ ಮಂಗಳೂರು ನಗರದಲ್ಲಿ ವಾಹನಗಳ ಸಂಚಾರಕ್ಕಾಗಿ ಪರ್ಯಾಯ ವ್ಯವಸ್ಥೆ ಮಾಡಲಾಗಿದೆ ಎಂದು ನಗರ ಪೊಲೀಸ್‌ ಕಮಿಷನರ್‌ ಅನುಪಮ್‌ ಅಗ್ರವಾಲ್‌ ತಿಳಿಸಿದ್ದಾರೆ.

ವಾಹನಗಳ ಸಂಚಾರದ/ನಿಲುಗಡೆಯ ನಿಷೇಧಿತ ಸ್ಥಳ ಹಾಗೂ ವಾಹನಗಳ ಪಾರ್ಕಿಂಗ್ ಸ್ಥಳಗಳ ವಿವರ.

ವಾಹನ ಸಂಚಾರ ನಿಷೇಧಿತ ಮಾರ್ಗಗಳು

* ಪ್ರಧಾನಮಂತ್ರಿ ಅವರ ರೋಡ್ ಶೋ ನಡೆಯುವ ಲೇಡಿಹಿಲ್ ಬಳಿಯ ಶ್ರೀ ನಾರಾಯಣಗುರು ವೃತ್ತ - ಲಾಲ್‌ಬಾಗ್ - ಬಲ್ಲಾಳ್‌ಬಾಗ್ - ಕೊಡಿಯಾಲ್ ಗುತ್ತು - ಬಿ.ಜಿ ಸ್ಕೂಲ್ ಜಂಕ್ಷನ್ - ಪಿ.ವಿ.ಎಸ್ - ನವಭಾರತ ವೃತ್ತ - ಹಂಪನಕಟ್ಟೆ ವರೆಗೆ ಮಧ್ಯಾಹ್ನದಿಂದ ಪ್ರಧಾನ ಮಂತ್ರಿ ಕಾರ್ಯಕ್ರಮ ಮುಗಿಯುವ ವರೆಗೆ ಎಲ್ಲಾ ತರಹದ ವಾಹನಗಳ ಸಂಚಾರ ನಿಷೇಧಿಸಲಾಗಿದೆ.

* ಕಾರ್ ಸ್ಟ್ರೀಟ್ - ಕುದ್ರೋಳಿ - ಕೂಳೂರು ಫೆರ್ರಿ ರಸ್ತೆ ಕಡೆಯಿಂದ ಅಡ್ಡ ರಸ್ತೆ ಮೂಲಕ ಎಂ.ಜಿ ರಸ್ತೆ ಪ್ರವೇಶಿಸುವ ಎಲ್ಲಾ ವಾಹನಗಳ ಸಂಚಾರ ನಿಷೇಧಿಸಿದೆ.

* ಕೆ.ಎಸ್.ಅರ್.ಟಿ.ಸಿ, ಶ್ರೀದೇವಿ ಕಾಲೇಜು ರಸ್ತೆ, ಕೊಡಿಯಾಲ್ ಗುತ್ತು ರಸ್ತೆ, ಜೈಲು ರಸ್ತೆ ಹಾಗೂ ಬಿಜೈ ಚರ್ಚ್ ರಸ್ತೆ ಮೂಲಕ ಎಂ.ಜಿ ರಸ್ತೆಗೆ ಬರುವ ಅಡ್ಡ ರಸ್ತೆ ಹಾಗೂ ಬಂಟ್ಸ್ ಹಾಸ್ಟೆಲ್ ಮೂಲಕ ಪಿ.ವಿ.ಎಸ್ ಕಡೆಗೆ ಎಲ್ಲಾ ವಾಹನಗಳ ಸಂಚಾರವನ್ನು ನಿಷೇಧಿಸಿದೆ.

*ಕೊಟ್ಟಾರ ಚೌಕಿ, ಉರ್ವಾ ಸ್ಟೋರ್, ಕೋಟೆಕಣಿ ಕ್ರಾಸ್‌ನಿಂದ (ಲೇಡಿಹಿಲ್) ನಾರಾಯಣಗುರು ವೃತ್ತದ ಕಡೆಗೆ ಬರುವ ಎಲ್ಲಾ ತರಹದ ವಾಹನ ಸಂಚಾರವನ್ನು ನಿಷೇಧಿಸಿದೆ.

* ಮಣ್ಣಗುಡ್ಡ ಜಂಕ್ಷನ್ ನಿಂದ ನಾರಾಯಣ ಗುರು ವೃತ್ತ (ಲೇಡಿಹಿಲ್) ದ ಕಡೆಗೆ ಎಲ್ಲಾ ತರಹದ ವಾಹನ ಸಂಚಾರ ನಿಷೇಧಿಸಿದೆ.

* ಉರ್ವಾ ಮಾರ್ಕೆಟ್ ಕಡೆಯಿಂದ ನಾರಾಯಣ ಗುರು ವೃತ್ತ (ಲೇಡಿಹಿಲ್)ದ ಕಡೆಗೆ ಎಲ್ಲಾ ತರಹದ ವಾಹನ ಸಂಚಾರವನ್ನು ನಿಷೇಧಿಸಿದೆ.

* ಕೆ.ಎಸ್.ಆರ್.ಟಿ.ಸಿ ಯಿಂದ ಲಾಲ್‌ಬಾಗ್ ಮುಖಾಂತರ ನಾರಾಯಣ ಗುರು ವೃತ್ತ (ಲೇಡಿಹಿಲ್), ಪಿವಿಎಸ್ ಕಡೆಗೆ ಎಲ್ಲಾ ತರಹದ ವಾಹನ ಸಂಚಾರ ನಿಷೇಧಿಸಿದೆ.

*ಬಂಟ್ಸ್ ಹಾಸ್ಟೆಲ್, ಕರಂಗಲ್ಪಾಡಿ, ಕೋರ್ಟ್ ಕ್ರಾಸ್ ರಸ್ತೆಯಿಂದ ಪಿವಿಎಸ್, ಎಂ.ಜಿ. ರೋಡ್ ಗೆ ಬರುವ ಎಲ್ಲಾ ವಾಹನದ ಸಂಚಾರ ನಿಷೇಧಿಸಿದೆ.

*ಕೆ.ಎಸ್.ರಾವ್ ರೋಡ್, ಡೊಂಗರಕೇರಿ ರಸ್ತೆ, ಗದ್ದೆಕೇರಿ ರೋಡ್, ವಿ.ಟಿ. ರೋಡ್, ಶಾರದಾ ವಿದ್ಯಾಲಯ ರಸ್ತೆ ಯಿಂದ ನವಭಾರತ್ ಸರ್ಕಲ್ ಕಡೆಗೆ ಬರುವ ಎಲ್ಲಾ ವಾಹನದ ಸಂಚಾರ ನಿಷೇಧಿಸಿದೆ.

* ಎಂ.ಜಿ ರಸ್ತೆಯಿಂದ ಜೈಲ್ ರೋಡ್ ಮುಖಾಂತರ ಬಿಜೈ ಚರ್ಚ್ ರೋಡ್ ಕಡೆಗೆ ಬರುವ ಎಲ್ಲಾ ವಾಹನದ ಸಂಚಾರ ನಿಷೇಧಿಸಿದೆ.

ವಾಹನ ಪಾರ್ಕಿಂಗ್ ನಿಷೇಧಿತ ಸ್ಥಳಗಳು

* ಪ್ರಧಾನಿ ಸಂಚರಿಸುವ ಬಜಪೆ ವಿಮಾನ ನಿಲ್ದಾಣದಿಂದ ಕೆಂಜಾರು - ಮರವೂರು- ಕಾವೂರು- ಬೊಂದೇಲ್- ಮೇರಿಹಿಲ್ - ಕೆ.ಪಿ.ಟಿ - ಕೊಟ್ಟಾರ ಚೌಕಿ - ಉರ್ವ ಸ್ಟೋರ್ - ಶ್ರೀ ನಾರಾಯಣ ಗುರು ವೃತ್ತ (ಲೇಡಿಹಿಲ್) ಹಾಗೂ ಅವರು ವಾಪಸು ತೆರಳುವ ಹಂಪನಕಟ್ಟ - ಎಲ್.ಎಚ್.ಎಚ್ - ಬಾವುಟಗುಡ್ಡ - ಡಾ.ಅಂಬೇಡ್ಕರ್ ವೃತ್ತ - ಬಂಟ್ಸ್ ಹಾಸ್ಟೆಲ್ - ಭಾರತ್ ಬೀಡಿ - ಕದ್ರಿ ಕಂಬಳ - ಭಟ್ಟಗುಡ್ಡೆ ರಸ್ತೆಯ ಎರಡೂ ಬದಿಯಲ್ಲಿ ವಾಹನಗಳ ನಿಲುಗಡೆಯನ್ನು ಅವರ ಕಾರ್ಯಕ್ರಮ ಮುಗಿಯುವವರೆಗೆ ನಿಷೇಧಿಸಲಾಗಿದೆ.

ವಾಹನ ಸಂಚಾರದ ಪರ್ಯಾಯ ವ್ಯವಸ್ಥೆ

*ಉಡುಪಿ ಕಡೆಯಿಂದ ಮಂಗಳೂರು ನಗರಕ್ಕೆ ಬರುವ ಎಲ್ಲಾ ಬಸ್ಸು ಹಾಗೂ ಎಲ್ಲಾ ರೀತಿಯ ವಾಹನಗಳು ಕೊಟ್ಟಾರ ಚೌಕಿ ಜಂಕ್ಷನ್ - ಕೆಪಿಟಿ ಜಂಕ್ಷನ್ - ನಂತೂರು ಜಂಕ್ಷನ್ - ಶಿವಭಾಗ್ ಜಂಕ್ಷನ್ - ಸೆಂಟ್ ಆಗ್ನೇಸ್ - ಹಾರ್ಟಿಕಲ್ಚರ್ ಜಂಕ್ಷನ್ - ಲೋವರ್ ಬೆಂದೂರು - ಕರಾವಳಿ ಜಂಕ್ಷನ್ - ಕಂಕನಾಡಿ ಜಂಕ್ಷನ್ - ಅವೇರಿ ಜಂಕ್ಷನ್ - ಮಿಲಾಗ್ರಿಸ್ ಜಂಕ್ಷನ್ - ಹಂಪನಕಟ್ಟ ಜಂಕ್ಷನ್ - ಕ್ಲಾಕ್ ಟವರ್ ಮೂಲಕ ಚಲಿಸುವುದು ಹಾಗೂ ಮಂಗಳೂರು ನಗರ ಸ್ಟೇಟ್‌ಬ್ಯಾಂಕ್ ಕಡೆಯಿಂದ ಉಡುಪಿ ಕಡೆಗೆ ಹೋಗುವ ವಾಹನಗಳು ಲೇಡಿ ಗೋಷನ್ - ಕ್ಲಾಕ್ ಟವರ್ - ರೈಲ್ವೇ ಸ್ಟೇಷನ್ ಜಂಕ್ಷನ್ - ನಂದಿಗುಡ್ಡ ರೋಡ್ - ಕೋಟಿಚೆನ್ನಯ್ಯ ಸರ್ಕಲ್ - ಕಂಕನಾಡಿ ಜಂಕ್ಷನ್ ಮೂಲಕ ಮುಂದೆ ಸಂಚರಿಸುವುದು.

* ಪಂಪ್‌ವೆಲ್‌ ಕಡೆಯಿಂದ ಮಂಗಳೂರು ನಗರಕ್ಕೆ ಬರುವ ಬಸ್ಸು ಹಾಗೂ ಎಲ್ಲಾ ರೀತಿಯ ವಾಹನಗಳು ಕರಾವಳಿ ಜಂಕ್ಷನ್ - ಕಂಕನಾಡಿ ಜಂಕ್ಷನ್ - ಅವೇರಿ ಜಂಕ್ಷನ್ - ಮಿಲಾಗ್ರಿಸ್ ಜಂಕ್ಷನ್ - ಹಂಪನಕಟ್ಟ ಜಂಕ್ಷನ್ - ಕ್ಲಾಕ್ ಟವರ್ ಮೂಲಕ ಚಲಿಸುವುದು ಹಾಗೂ ಮಂಗಳೂರು ನಗರ ಸ್ಟೇಟ್‌ಬ್ಯಾಂಕ್ ಕಡೆಯಿಂದ ಪಂಪ್‌ವಲ್ ಕಡೆಗೆ ಹೋಗುವ ವಾಹನಗಳು ಲೇಡಿ ಗೋಷನ್ - ಕ್ಲಾಕ್ ಟವರ್ - ರೈಲ್ವೇ ಸ್ಟೇಷನ್ ಜಂಕ್ಷನ್ - ನಂದಿಗುಡ್ಡ ರೋಡ್ - ಕೋಟಿಚೆನ್ನಯ್ಯ ಸರ್ಕಲ್ - ಕಂಕನಾಡಿ ಜಂಕ್ಷನ್ ಮೂಲಕ ಮುಂದೆ ಸಂಚರಿಸುವುದು.

* ಕಾರ್‌ಸ್ಟ್ರೀಟ್ - ಕುದ್ರೋಳಿ ಕಡೆಯಿಂದ ಬರುವ ಎಲ್ಲಾ ವಾಹನಗಳನ್ನು ಮಣ್ಣಗುಡ್ಡೆ, ಉರ್ವಾ ಮಾರ್ಕೆಟ್ ಮುಖಾಂತರ ಅಶೋಕನಗರ ಕೋಡಿಕಲ್ ಕ್ರಾಸ್ ಮೂಲಕ ಸಂಚರಿಸುವುದು.

* ಬಿಜೈ ಚರ್ಚ್ ಕಡೆಯಿಂದ ಬರುವ ವಾಹನಗಳು ಕೆ.ಎಸ್.ಆರ್.ಟಿ.ಸಿ. ಜಂಕ್ಷನ್ ಮುಖಾಂತರ ಕೊಟ್ಟಾರ ಕ್ರಾಸ್/ ಕುಂಟಿಕಾನದ ಕಡೆಗೆ ಸಂಚರಿಸುವುದು.

*ಕುಂಟಿಕಾನ ಕೊಟ್ಟಾರ ಕ್ರಾಸ್ ಕಡೆಯಿಂದ ಬರುವ ವಾಹನಗಳನ್ನು ಕೆ.ಎಸ್.ಆರ್.ಟಿ.ಸಿ. ಜಂಕ್ಷನ್ ನ ಮುಖಾಂತರ ಬಿಜೈ ಚರ್ಚ್ ಕಡೆಗೆ ಸಂಚರಿಸುವುದು.

* ಕಾರ್ಯಕ್ರಮಕ್ಕೆ ಬರುವ ಸಾರ್ವಜನಿಕರು ಸಂಜೆ 5 ಗಂಟೆಗೆ ಮುಂಚಿತವಾಗಿ ಈ ಕೆಳಕಂಡಂತೆ ಗುರುತಿಸಲಾದ ಪಾರ್ಕಿಂಗ್ ಸ್ಥಳಗಳಲ್ಲಿ ಅವರ ವಾಹನಗಳನ್ನು ನಿಲುಗಡೆಗೊಳಿಸಿ ಪ್ರಧಾನ ಮಂತ್ರಿ ಅವರ ರೋಡ್ ಶೋವನ್ನು ವೀಕ್ಷಣೆ ಮಾಡಲು ನಿಗದಿಪಡಿಸಿದ ಸ್ಥಳಗಳಲ್ಲಿ ಹಾಜರಿರುವುದು.
ಕರಾವಳಿ ಮೈದಾನ, ಲೇಡಿಹಿಲ್ ಶಾಲಾ ಮೈದಾನ, ಲೇಡಿಹಿಲ್ ಚರ್ಚ್ ಮೈದಾನ, ಉರ್ವ ಮಾರ್ಕೆಟ್ ಮೈದಾನ, ಉರ್ವ ಸ್ಟೋರ್ ಮೈದಾನ, ಉರ್ವ ಕೆನರಾ ಶಾಲಾ ಮೈದಾನ, ಕೆನರಾ ಕಾಲೇಜು ಮೈದಾನ, ಡೊಂಗರಕೇರಿ ಕೆನರಾ ಶಾಲಾ ಮೈದಾನ, ಗಣಪತಿ ಶಾಲಾ ಮೈದಾನ, ರಾಮಕೃಷ್ಣ ಶಾಲಾ ಮೈದಾನ, ಬಂಟ್ಸ್ ಹಾಸ್ಟೇಲ್, ಸಿ.ವಿ ನಾಯಕ್ ಹಾಲ್ ಮೈದಾನ, ಟಿ.ಎಂ.ಎ ಪೈ ಹಾಲ್ ಮೈದಾನ, ಬಿ.ಇ.ಎಂ ಶಾಲಾ ಮೈದಾನ, ನೆಹರೂ ಮೈದಾನ, ಪುರಭವನ ಪಾರ್ಕಿಂಗ್ ಸ್ಥಳ, ಕದ್ರಿ ಮೈದಾನ, ಕೆಪಿಟಿ ಕಾಲೇಜು ಮೈದಾನ, ಕೆಟಿಪಿ ಬಳಿಯ ಆರ್.ಟಿ.ಓ ಮೈದಾನ, ಪದುವು ಕಾಲೇಜು ಮೈದಾನ, ಗೋಲ್ಡ್ ಫಿಂಚ್ ಸಿಟಿ ಮೈದಾನ, ಕೂಳೂರು, ಸುಲ್ತಾನ್ ಬತ್ತೇರಿ ಗ್ರೌಂಡ್ಸ್, ಗೋಕರ್ಣಥೇಶ್ವರ ಕಾಲೇಜು ಗ್ರೌಂಡ್, ಎಮ್ಮೆಕರೆ ಮೈದಾನ, ಮಂಗಳೂರು ವಿಶ್ವವಿದ್ಯಾನಿಲಯ ಮೈದಾನ, ಹಂಪನಕಟ್ಟೆ, ಮಿಲಾಗ್ರಿಸ್ ಚರ್ಚ್ ಪಾರ್ಕಿಂಗ್ ಗ್ರೌಂಡ್,. ಮಿಲಾಗ್ರಿಸ್ ಕಾಲೇಜು ಮೈದಾನ, ಬಲ್ಮಠ ಶಾಂತಿ ನಿಲಯ ಮೈದಾನ, ಸೆಂಟ್ ಸೆಬಾಸ್ಟಿನ್ ಹಾಲ್ ಪಾಕಿಂಗ್ (ಸೆಂಟ್ ಅಗ್ನೇಸ್ ಶಾಲೆ).


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries