ಕಾಸರಗೋಡು : ನಗರದ ನುಳ್ಳಿಪ್ಪಾಡಿಯ ಕನ್ನಡ ಭವನ ಮತ್ತು ಗ್ರಂಥಾಲಯ (ರಿ.), ಕನ್ನಡ ಭವನ ಪ್ರಕಾಶನ ಹಾಗೂ ಬಿ. ಶಿವಕುಮಾರ್ ಕೋಲಾರ ಸಾರಥ್ಯದ ಸ್ವರ್ಣಭೂಮಿ ಫೌಂಡೇಶನ್ ಕೋಲಾರ ಜಂಟಿಯಾಗಿ ನಡೆಸಲಿರುವ "ಕೇರಳ -ಕರ್ನಾಟಕ ಗಡಿನಾಡು ಕನ್ನಡ ಸಾಂಸ್ಕøತಿಕ ಉತ್ಸವ ಸಂದರ್ಭ ಕೊಡಮಾಡುವ ಸ್ವರ್ಣಭೂಮಿ ಸೇವಾ ರತ್ನ ಪ್ರಶಸ್ತಿಗೆ ಸಾಧಕರನ್ನು ಆಯ್ಕೆ ಮಾಡಲಾಗಿದೆ.
ಸಮಾಜಸೇವೆಗಾಗಿ ಡಾ ರವೀಂದ್ರ ಜೆಪ್ಪು, ಲೇಖಕ, ಪ್ರಕಾಶಕ, ಸಂಘಟನೆಗಾಗಿ ಪಿ ವಿ ಪ್ರದೀಪ್ ಕುಮಾರ್, ಪತ್ರಿಕೋದ್ಯಮ, ಯಕ್ಷಗಾನ ಕಲೆಗಾಗಿ ವೀಜಿ ಕಾಸರಗೋಡು, ಗಾಯಕ, ಸಂಘಟನೆಗಾಗಿ ವಸಂತ ಭಾರಡ್ಕ, ಕವಯತ್ರಿ, ಸಂಘಟನೆಗಾಗಿ ರೇಖಾ ರೋಷನ್ ಅವರನ್ನು ಆಯ್ಕೆ ಮಾಡಲಾಗಿದೆ.
ಇದೇ ಸಂದರ್ಭ ಕನ್ನಡ ಭವನದ ಪ್ರತಿಷ್ಠಿತ "ಕನ್ನಡ ಪಯಸ್ವಿನಿ ಅಂತಾರಾಜ್ಯ ಪ್ರಶಸ್ತಿ-2024'ಕ್ಕೆ ಲಕ್ಷ್ಮಯ್ಯ ಬಂಗಾರಪೇಟೆ, ಟಿ ಸುಬ್ಬರಾಮಯ್ಯ ಕೋಲಾರ, ಡಾ ಶರಣಪ್ಪ ಗಬ್ಬೂರು, ಡಾ ಬಿ ಹೇಮಂತ್ ಕುಮಾರ್ ಬೇಲೂರ್, ಕೆ ವೇಣುಗೋಪಾಲ್ ಶ್ರೀನಿವಾಸಪುರ, ವಿರಾಜಕುಮಾರ್ ಮುಳಬಾಗಿಲು, ಎಂ ಆನಂದ ರೆಡ್ಡಿ ಕೋಲಾರ ಅವರನ್ನು ಆಯ್ಕೆ ಮಾಡಲಾಘಿದೆ. ಏಪ್ರಿಲ್ 11ರಂದು ಕಾಸರಗೋಡು ಕನ್ನಡ ಭವನದಲ್ಲಿ ನಡೆಯಲಿರುವ ಗಡಿನಾಡು ಸಾಂಸ್ಕøತಿಕ ಉತ್ಸವ ವೇದಿಕೆಯಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಕನ್ನಡ ಭವನ ಅಧ್ಯಕ್ಷರ ಪ್ರಕಟನೆ ತಿಳಿಸಿದೆ.