ಕಾಸರಗೋಡು: 2024 ರ ಸಾರ್ವತ್ರಿಕ ಚುನಾವಣೆಯಲ್ಲಿ ತಪ್ಪಾದ ಮಾಹಿತಿಗಳ ಮತ್ತು ಸುಳ್ಳು ಸುದ್ದಿಗಳ ಪ್ರಚಾರವನ್ನು ತಪ್ಪಿಸಲು "ಮಿಥ್ ವರ್ಸಸ್ ರಿಯಾಲಿಟಿ ರಿಜಿಸ್ಟರ್"ನ್ನು ಭಾರತೀಯ ಚುನಾವಣಾ ಆಯೋಗ ಪ್ರಕಟಿಸಿದೆ.
ಚುನಾವಣಾ ಪ್ರಕ್ರಿಯೆಯ ಸಮಗ್ರತೆಯನ್ನು ಖಚಿತಪಡಿಸಿ ಸಮಯದಲ್ಲಿನ ಪಾರದರ್ಶಕತೆ, ಕರ್ತವ್ಯ ನಿಷ್ಠೆ ಮತ್ತು ಜವಾಬ್ದಾರಿಯುತವಾದ ಆಶಯ ವಿನಿಮಯ ಎಂಬಿವುಗಳನ್ನು ಉತ್ತೇಜಿಸುವ ಗುರಿಯೊಂದಿಗೆ ಈ ದಾಖಲೆಯನ್ನು ಪ್ರಕಟಿಸಿದೆ.
ಪರಿಶೀಲಿಸಲಾದ, ಸೂಕ್ತ ಮಾಹಿತಿಯನ್ನು ತಿಳಿಯಲು ಮತ್ತು ಮತದಾರರನ್ನು ದಾರಿ ತಪ್ಪಿಸುವಂತಹ ತಪ್ಪು ಮಾಹಿತಿ ಖಚಿತಪಡಿಸುವಲ್ಲಿ ಸಾರ್ವಜನಿಕರಿಗೆ ಮತ್ತು ಪತ್ರಕರ್ತರಿಗೆ ಇದು ಸಹಕಾರಿಯಾಗಲಿದೆ.
"ಮಿಥ್ ವರ್ಸಸ್ ರಿಯಾಲಿಟಿ ರಿಜಿಸ್ಟರ್" ದೇಶದಲ್ಲಿ ನಡೆಯುತ್ತಿರುವ ಚುನಾವಣೆಗೆ ಸಂಬಂಧಿಸಿದ ನಕಲಿ ಸುದ್ದಿ ಭಂಡಾರವಾಗಿ ಕಾರ್ಯನಿರ್ವಹಿಸುತ್ತದೆ. ಚುನಾವಣಾ ಸಂದರ್ಭದಲ್ಲಿ ಪ್ರಸಾರವಾಗುವ ಚುನಾವಣಾ ಪ್ರಕ್ರಿಯೆಯ ಮಾಹಿತಿಯ ಸತ್ಯಾಸತ್ಯತೆಯನ್ನು ತಿಳಿಯಲಿರುವ ದಾಖಲೆಯಾಗಿದೆ.
ಸರಿ ಮಾಡಲಾದ ನಕಲಿ ಸುದ್ದಿಗಳನ್ನು ಉದಾಹರಣೆಯಾಗಿ ದಾಖಲಿಸಿ, ಪಟ್ಟಿ ಮಾಡುವ ಮೂಲಕ, ಈ ದಾಖಲಾತಿಯು ಒಂದು ಉಲ್ಲೇಖ ಮಾರ್ಗದರ್ಶಿಯಾಗಿಯೂ ಕಾರ್ಯನಿರ್ವಹಿಸುತ್ತದೆ. ವಿವಿಧ ಮಾಧ್ಯಮಗಳಲ್ಲಿ ಪ್ರಸಾರವಾಗುವ ವಿವಿಧ ವಿಷಯಗಳ ದೃಢೀಕರಣವನ್ನು ಪರಿಶೋಧಿಸಿ ವಿಶ್ಲೇಷಿಸಿದ ಬಳಿಕ ಈ ದಾಖಲೆಯನ್ನು ಅಪೆÇ್ಲೀಡ್ ಮಾಡಲಾಗುತ್ತದೆ.