ನವದೆಹಲಿ: ಭದ್ರತಾ ಬೆದರಿಕೆಗಳ ಹಿನ್ನೆಲೆಯಲ್ಲಿ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್ಎಫ್) ಕೇಂದ್ರ ಸಂಸ್ಥೆಯಾದ ಜಾರಿ ನಿರ್ದೇಶನಾಲಯಕ್ಕೆ ಭದ್ರತೆ ಒದಗಿಸಿದೆ.
ಇಡಿ ತಂಡದ ಮೇಲೆ ದಾಳಿ ನಡೆದಿದ್ದು, ಭದ್ರತಾ ಬೆದರಿಕೆ ಇರುವ ಹಿನ್ನೆಲೆಯಲ್ಲಿ ಭದ್ರತೆ ಒದಗಿಸಲು ಕೇಂದ್ರ ಗೃಹ ಸಚಿವಾಲಯ ಸಿಐಎಸ್‍ಎಫ್ ನೇಮಿಸಿದೆ.
ಸಂದೇಶಖಾಲಿ ಮತ್ತಿತರ ಕಡೆಗಳಲ್ಲಿ ಇಡಿ ತಂಡದ ಮೇಲೆ ಗುಂಪು ದಾಳಿ ನಡೆದಿದೆ. ಇಡಿಯ ತನಿಖೆಗಳು ಮತ್ತು ಕಾರ್ಯಾಚರಣೆಗಳಿಗೆ ಅಡ್ಡಿಯಾಗದಂತೆ ನೋಡಿಕೊಳ್ಳಲು ಸಮಾನಾಂತರ ಸೇನಾ ಭದ್ರತೆಯನ್ನು ಒದಗಿಸಲಾಗಿದೆ. ಇಂಟೆಲಿಜೆನ್ಸ್ ಬ್ಯೂರೋದ ವರದಿಯನ್ನು ಆಧರಿಸಿ ಈ ಕ್ರಮ ಕೈಗೊಳ್ಳಲಾಗಿದೆ. ಆರಂಭದಲ್ಲಿ ಕೋಲ್ಕತ್ತಾ, ರಾಂಚಿ, ರಾಯ್‍ಪುರ, ಮುಂಬೈ, ಜಲಂಧರ್, ಜೈಪುರ ಮತ್ತು ಕೊಚ್ಚಿಯಲ್ಲಿನ ಇಡಿ ಘಟಕಗಳಿಗೆ ವಿಶೇಷ ಭದ್ರತೆ ಒದಗಿಸಲಾಗುವುದು.
ಜನವರಿ 5 ರಂದು ತೃಣಮೂಲ ಕಾಂಗ್ರೆಸ್ ನಾಯಕ ಷಹಜಹಾನ್ ಶೇಖ್ ವಿರುದ್ಧ ಪಡಿತರ ವಿತರಣೆ ಹಗರಣದ ತನಿಖೆಗೆ ಬಂದಿದ್ದ ಕೋಲ್ಕತ್ತಾ ಘಟಕದ ಮೂವರು ಇಡಿ ಅಧಿಕಾರಿಗಳ ಮೇಲೆ ದಾಳಿ ನಡೆಸಲಾಗಿತ್ತು. ಇದಲ್ಲದೇ ಸಂದೇಶಖಾಲಿಯಲ್ಲಿ ತನಿಖೆಗೆ ಬಂದಿದ್ದ ಇಡಿ ತಂಡದ ಮೇಲೂ ಗುಂಪು ದಾಳಿ ನಡೆದಿದೆ.