ಕಾಸರಗೋಡು: ಪ್ರಧಾನಮಂತ್ರಿ ಸ್ಥಾನಕ್ಕೆ ರಾಹುಲ್ ಗಾಂಧಿಯನ್ನು ವಿಪಕ್ಷಗಳ ಒಕ್ಕೂಟವಾದ `ಇಂಡಿಯ' ಪರಿಗಣಿಸಿಲ್ಲವೆಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದರು. ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ನಿರ್ಣಾಯಕ ಹಂತದಲ್ಲಿರುವ ಸಂದರ್ಭದಲ್ಲಿ ಸ್ವಂತ ಪಕ್ಷದ ನೇತೃತ್ವ ಸ್ಥಾನದಿಂದ ನುಣುಚಿಕೊಂಡ ನೇತಾರನಾಗಿರುವ ರಾಹುಲ್ ಗಾಂಧಿ ದೇಶದ ನಾಯಕತ್ವಕ್ಕೆ ಅರ್ಹರಲ್ಲ. ಬಿಜೆಪಿ ಮತ್ತು ಸಂಘ ಪರಿವಾರ ತಮ್ಮ ಬದ್ಧ ಎದುರಾಳಿಯಾಗಿದ್ದಾರೆಂದು ರಾಹುಲ್ ಗಾಂಧಿ ಹೇಳುತ್ತಿದ್ದರೂ ಅವರನ್ನು ಸಮರ್ಥವಾಗಿ ಎದುರಿಸಲು ಅವರಿಗೆ ಸಾಧ್ಯವಾಗುತ್ತಿಲ್ಲ. ಉತ್ತರ `Áರತದಿಂದ ಪಲಾಯನಗೈದು ಎರಡನೇ ಬಾರಿ ವಯನಾಡಿನಲ್ಲಿ ಈಗ ಸ್ಪರ್ಧಿಸುತ್ತಿರುವ ರಾಹುಲ್‍ಗೆ ಜನರನ್ನು ಇನ್ನೂ ಮುಟ್ಠಾಳರನ್ನಾಗಿಸಲು ಸಾಧ್ಯವಾಗದು. ಕೇರಳದ ಮುಖ್ಯಮಂತ್ರಿಯನ್ನು ಯಾಕೆ ಬಂಧಿಸಲಾಗಿಲ್ಲವೆಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕ ವಾದ್ರಾ ಎತ್ತಿರುವ ಪ್ರಶ್ನೆ ಒಂದು ದೊಡ್ಡ ತಮಾಷೆಯಾಗಿದೆ. ಡಿಎಲ್‍ಎಫ್‍ನೊಂದಿಗೆ ಅವರ ಪತಿ ಹೊಂದಿರುವ ನಂಟಾದರೂ ಏನು? 170 ಕೊಟಿ ರೂ.ಗಳ ಇಲೆಕ್ಟರಲ್ ಬಾಂಡ್ ಬಿಜೆಪಿ ಕೈಸೇರಿರುವುದಾದರೂ ಹೇಗೆ ? ಅದಕ್ಕೆ ಸಂಬಂಧಿಸಿ ಬಂಧನಕ್ಕೊಳಗಾಗಬೇಕಾದವರೇ ಇನ್ನೂ ಬಂಧನಕ್ಕೊಳಗಾಗದೇ ಇರುವಾಗ ಅವರನ್ನು ಈ ತನಕ ಬಂಧಿಸದೇ ಇರುವವರಿಗೆ ಧನ್ಯವಾದ ಹೇಳಬೇಕು. ಅದನ್ನು ಬಿಟ್ಟು ಪಿಣರಾಯಿ ವಿಜಯನ್‍ರನ್ನು ಬಂಧಿಸಬೇಕಂದು ಹೇಳುವುದು ಬಾಲಿಶತನ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದರು.