ನವದೆಹಲಿ: ಯಾವುದೇ ಪ್ರಕರಣಕ್ಕೆ ಮತ್ತೊಂದು ಆಯಾಮವಿರಬಹುದು ಎಂಬ ಏಕೈಕ ಕಾರಣಕ್ಕೆ ಮೇಲ್ಮನವಿ ನ್ಯಾಯಾಲಯವು ಆ ಪ್ರಕರಣದ ಆರೋಪಿಗಳ ಖುಲಾಸೆ ಆದೇಶವನ್ನು ರದ್ದುಪಡಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ ಹೇಳಿದೆ.
ನವದೆಹಲಿ: ಯಾವುದೇ ಪ್ರಕರಣಕ್ಕೆ ಮತ್ತೊಂದು ಆಯಾಮವಿರಬಹುದು ಎಂಬ ಏಕೈಕ ಕಾರಣಕ್ಕೆ ಮೇಲ್ಮನವಿ ನ್ಯಾಯಾಲಯವು ಆ ಪ್ರಕರಣದ ಆರೋಪಿಗಳ ಖುಲಾಸೆ ಆದೇಶವನ್ನು ರದ್ದುಪಡಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ ಹೇಳಿದೆ.
ಕೊಲೆ ಪ್ರಕರಣದಲ್ಲಿ ವಿಚಾರಣಾ ನ್ಯಾಯಾಲಯದಿಂದ ಖುಲಾಸೆಗೊಂಡಿರುವ ಆದೇಶವನ್ನು ಹೈಕೋರ್ಟ್ ರದ್ದುಗೊಳಿಸಿದಕ್ಕೆ ಸಂಬಂಧಿಸಿ ಸಲ್ಲಿಕೆಯಾದ ಅರ್ಜಿ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ಈ ಮಾತು ಹೇಳಿದೆ.
ಈ ಕುರಿತು ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಅಭಯ್ ಎಸ್. ಓಕ ಮತ್ತು ಉಜ್ವಲ್ ಭುಇಯಾಂ ಅವರಿದ್ದ ಪೀಠವು, 'ಖುಲಾಸೆಗೊಳಿಸಿದ ತೀರ್ಪು ತಪ್ಪಿನಿಂದ ಕೂಡಿದೆ ಎಂಬುದಾಗಿ ಮೇಲ್ಮನವಿ ನ್ಯಾಯಾಲಯವು ಕಂಡುಕೊಳ್ಳದ ಹೊರತು, ಯಾವುದೇ ಕಾರಣಕ್ಕೆ ಖುಲಾಸೆ ಆದೇಶದಲ್ಲಿ ಮಧ್ಯಪ್ರವೇಶ ಮಾಡುವಂತಿಲ್ಲ' ಎಂದು ಹೇಳಿದೆ.
1996ರಲ್ಲಿ ಗುಜರಾತ್‌ನಲ್ಲಿ ಪಂಜಾಬಿ ವ್ಯಕ್ತಿಯೊಬ್ಬರನ್ನು ಕೊಲೆ ಮಾಡಿದ ಪ್ರಕರಣದಲ್ಲಿ ತಂದೆ ಮತ್ತು ಮಗ ಶಿಕ್ಷೆಗೆ ಗುರಿಯಾಗಿದ್ದರು. 1998ರಲ್ಲಿ ಈ ಇಬ್ಬರು ವಿಚಾರಣಾ ನ್ಯಾಯಾಲಯದಿಂದ ಖುಲಾಸೆಯಾಗಿದ್ದರು. ಆದರೆ, ಈ ತೀರ್ಪಿನ ವಿರುದ್ಧ ಮೇಲ್ಮನವಿ ಹೋಗಿದ್ದರಿಂದಾಗಿ 2018ರಲ್ಲಿ ಈ ಇಬ್ಬರ ಖುಲಾಸೆ ಆದೇಶವನ್ನು ಹೈಕೋರ್ಟ್ ರದ್ದುಗೊಳಿಸಿತ್ತು.