ಕುಂಬಳೆ : ಸ್ತ್ರೀಸಮೂಹಕ್ಕೆ ಬೆಂಬಲವಾಗಿ ನಿಂತಿರುವ ಮೋದಿ ಮತ್ತೆ ಪ್ರಧಾನಿ ಆಗಬೇಕಾದದ್ದು ಈ ದೇಶದ ಅವಶ್ಯಕತೆಯಾಗಿದೆ. ಮಹಿಳಾ ಮೀಸಲಾತಿ ಈ ದೇಶದ ಸಮಗ್ರ ಅಭಿವೃದ್ಧಿಗೆ ಪ್ರೇರಣೆ ಆಗಲಿದೆ ಎಂದು ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಹೇಳಿದರು.
ಕುಂಬಳೆ ಬ್ಯಾಂಕ್ ಹಾಲ್ ನಲ್ಲಿ ಜರಗಿದ ಮಂಜೇಶ್ವರ ವಿಧಾನಸಭಾ ಕ್ಷೇತ್ರ ಮಹಿಳಾ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.
ಕೇಂದ್ರ ಫಲನುಭವಿಗಳು ಮತ ನೀಡಿದರೆ ಬಿಜೆಪಿ 400 ಸ್ಥಾನ ಗೆಲ್ಲಲಿದೆ ಎಂದು ಅವರು ಹೇಳಿದರು.
ಬಿಜೆಪಿ ಜಿಲ್ಲಾಧ್ಯಕ್ಷ ರವೀಶತಂತ್ರಿ ಕುಂಟಾರು ಅವರು ಕೇಂದ್ರ ಯೋಜನೆಗಳ ವಿವರಣೆ ನೀಡಿದರು. ಪ್ರೇಮಲತಾ ಎಸ್ ಅಧ್ಯಕ್ಷತೆ ವಹಿಸಿದ್ದರು.
ಮುಖಂಡರಾದ ನ್ಯಾಯವಾದಿ ಬಾಲಕೃಷ್ಣ ಶೆಟ್ಟಿ, ಸುಧಾಮ ಗೋಸಾಡ, ಗೋಪಾಲ ಶೆಟ್ಟಿ ಅರಿಬೈಲು, ಆದರ್ಶ ಬಿ.ಎಂ, ಪುಷ್ಪಾ ಗೋಪಾಲನ್, ಸುನಿಲ್ ಅನಂತಪುರ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಆಶಾ ಸ್ವಾಗತಿಸಿ, ಮಮತಾ ಕುಲಾಲ್ ವಂದಿಸಿದರು. ಮುರಳೀಧರ ಯಾದವ್ ನಾಯ್ಕಾಪು ಕಾರ್ಯಕ್ರಮ ನಿರ್ವಹಿಸಿದರು.
ಆಶಾಲತಾ ಪೆಲಪಾಡ್ಡಿ, ಮೀರಾ ಟೀಚರ್, ವಸಂತ ಮಯ್ಯ, ತುಳಸಿ ಕುಮಾರಿ, ಯತೀರಾಜ್ ಶೆಟ್ಟಿ, ಶೋಭಾ ಶೆಟ್ಟಿ, ಶಶಿಕಲಾ ಮಾಡ ನೇತೃತ್ವ ನೀಡಿದ್ದರು.