ಕಾಸರಗೋಡು:ಲೋಕಸಭಾ ಚುನಾವಣೆ ಮಾದರಿ ನೀತಿ ಸಂಹಿತೆ ಜಾರಿ ಅಂಗವಾಗಿ ಜಿಲ್ಲೆಯಲ್ಲಿ ರಚಿಸಲಾಗಿರುವ ಆ್ಯಂಟಿ ಡೀಫೇಸ್‍ಮೆಂಟ್ ದಳದ ನೇತೃತ್ವದಲ್ಲಿ ಸಾರ್ವಜನಿಕ ಹಾಗೂ ಖಾಸಗಿ ಸ್ಥಳಗಳಲ್ಲಿ ಅನಧಿಕೃತವಾಗಿ ಅಳವಡಿಸಲಾಗಿದ್ದ 14,151 ಪ್ರಚಾರ ಸಾಮಗ್ರಿಗಳನ್ನು ತೆರವುಗೊಳಿಸಲಾಗಿದೆ.
ಆ್ಯಂಟಿ ಡಿಫೇಸ್‍ಮೆಂಟ್ ಸ್ಕ್ವಾಡ್‍ಗಳು ಮುಖ್ಯವಾಗಿ ಸಾರ್ವಜನಿಕ ಸ್ಥಳಗಳಲ್ಲಿ ಅಕ್ರಮವಾಗಿ ಇರಿಸಲಾಗಿರುವ ಪ್ರಚಾರ ಸಾಮಗ್ರಿಗಳನ್ನು ತೆರವುಗೊಳಿಸುವ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಿಯಂತ್ರಣದಲ್ಲಿರುವ ಸ್ಥಳಗಳಲ್ಲಿ ಅಲವಡಿಸಲಾಗಿದ್ದ ಬಹುತೇಕ ಪ್ರಚಾರ ಸಾಮಗ್ರಿಗಳನ್ನು ತೆರವುಗೊಳಿಸಲಾಗಿದೆ. ಇದರಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಅಲವಡಿಸಿದ್ದ 1330 ಗೋಡೆಬರಹ, 9837 ಭಿತ್ತಿಪತ್ರಗಳು, 908 ಬ್ಯಾನರ್‍ಗಳು, 1765 ಧ್ವಜಗಳು ಮತ್ತು ಕಂಬಗಳು ಒಳಗೊಂಡಿದೆ. ಅಲ್ಲದೆ, ಮಾಲೀಕರ ಅನುಮತಿಯಿಲ್ಲದೆ ಖಾಸಗಿ ಆವರಣದಲ್ಲಿ ಇರಿಸಲಾದ ಯಾವುದೇ ಪ್ರಚಾರ ಸಾಮಗ್ರಿಗಳನ್ನು ದೂರಿನ ಆಧಾರದ ಮೇಲೆ ತೆಗೆದುಹಾಕಲಾಗುತ್ತಿದ್ದು, ಈ ನಿಟ್ಟಿನಲ್ಲಿ 92 ಪೆÇೀಸ್ಟರ್‍ಗಳು, 11 ಫ್ಲಕ್ಸ್‍ಗಳು, 13 ಬ್ಯಾನರ್‍ಗಳು ಮತ್ತು 116 ಪ್ರಚಾರ ಸಾಮಗ್ರಿಗಳನ್ನು ತೆರವುಗೊಳಿಸಲಾಗಿದೆ.