ಕಾಸರಗೋಡು: 2024ರ ಲೋಕಸಭೆ ಚುನಾವಣೆಗೆ ಮಂಗಳವಾರ ಮೂವರು ಅಭ್ಯರ್ಥಿಗಳು ಚುನಾವಣಾಧಿಕಾರಿ ಕೆ.ಇನ್ಬಾಶೇಖರ್ ಅವರ ಮುಂದೆ ನಾಮಪತ್ರ ಸಲ್ಲಿಸಿದ್ದಾರೆ. ಎಂ.ಸುಕುಮಾರಿ (ಬಹುಜನ ಸಮಾಜ ಪಕ್ಷ), ಟಿ.ಅನಿಶ್ ಕುಮಾರ್ (ಸ್ವತಂತ್ರ), ಕೇಶವ ನಾಯಕ್ (ಸ್ವತಂತ್ರ)ನಾಮಪತ್ರ ಸಲ್ಲಿಸಿದವರು. ಬಿಜೆಪಿ ಅಭ್ಯರ್ಥಿಗಳಾದ ಎಂ.ಎಲ್.ಅಶ್ವಿನಿ ಮತ್ತು ಎ.ವೇಲಾಯುಧನ್ ಈಗಾಗಲೇ ನಾಮಪತ್ರ ಸಲ್ಲಿಸಿದ್ದರು. ಇದರೊಂದಿಗೆ 2024ರ ಸಾರ್ವತ್ರಿಕ ಚುನಾವಣೆಯ ಅಂಗವಾಗಿ ಕಾಸರಗೋಡು ಲೋಕಸಭಾ ಕ್ಷೇತ್ರಕ್ಕೆ ಇದುವರೆಗೆ ಐವರು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ.