ಕಾಸರಗೋಡು: "ವುಮೆನ್ ಆನ್ ವೀಲ್ಸ್" ಯೋಜನೆ ಮತ್ತು ಡಿಜಿಟಲ್ ರೂಪಾಂತರ ಯೋಜನೆಯ ಅಂಗವಾಗಿ ಮಹಿಳಾ ಉದ್ಯಮಿಗಳಿಗೆ ದ್ವಿಚಕ್ರ ವಾಹನಗಳು ಪದವಿ ಮತ್ತು ಪಿಜಿ ವಿದ್ಯಾರ್ಥಿಗಳಿಗೆ ಲ್ಯಾಪ್‍ಟಾಪ್ ವಿತರಿಸಲಾಯಿತು.
ಕಾಸರಗೋಡು ನಗರಸಭೆಯ ಸಮ್ಮೇಳನ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಎನ್‍ಜಿಓ ಕಾನ್ಫೆಡರೇಶನ್ ರಾಷ್ಟ್ರೀಯ ಸಂಯೋಜಕ ಅನಂತು ಕೃಷ್ಣನ್ ಸಮಾರಂಭ ಉದ್ಘಾಟಿಸಿದರು. ಜಿಲ್ಲಾಧ್ಯಕ್ಷ ಮೋಹನ ಮಾಙËಡ್ ಅಧ್ಯಕ್ಷತೆ ವಹಿಸಿದ್ದರು. ಡಾ.ಎಸ್.ಆರ್.ನರಹರಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.
ಡಾ.ನಿಲೋಫರ್, ಕಾಸರಗೋಡು ಪ್ರೆಸ್ ಕ್ಲಬ್ ಕಾರ್ಯದರ್ಶಿ ಕೆ.ವಿ.ಪದ್ಮೇಶ್, ಕವಿ ರವೀಂದ್ರನ್ ಪಾಡಿ, ಸುಕುಮಾರನ್ ಕುದ್ರೆಪ್ಪಾಡಿ, ಶ್ರೀಜಾ ಪುರುಷೋತ್ತಮನ್, ರಾಜೀವ್ ಟಿ.ವಿ, ತಂಬಾನ್ ಟಿ, ರಾಮಕೃಷ್ಣನ್ ಮನೋಚಾ, ಶರೀಫ್ ಪಾಲಕ್ಕಾರ್ ಮತ್ತು ರಾಜೇಂದ್ರನ್ ಟಿ ಉಪಸ್ಥಿತರಿದ್ದರು. ಹೆಲ್ತ್‍ಲೈನ್ ಕಾಸರಗೋಡು, ಜೆಇಡಿಎಸ್ ಕಾಞಂಗಾಡ್ ಮತ್ತು ಮೈತ್ರಿ ಮಾರ್ಪನಡ್ಕ ಎಂಬ ಅನುಷ್ಠಾನ ಸಂಸ್ಥೆಗಳ ಮೂಲಕ ಜಿಲ್ಲೆಯಲ್ಲಿ ಈ ಯೋಜನೆ ಜಾರಿಗೊಳಿಸಲಾಗಿದೆ.
ಸ್ವ ಉದ್ಯೋಗವನ್ನು ಉತ್ತೇಜಿಸಲು 62 ಮಹಿಳೆಯರಿಗೆ ದ್ವಿಚಕ್ರ ವಾಹನ ಮತ್ತು 90 ವಿದ್ಯಾರ್ಥಿಗಳಿಗೆ ಲ್ಯಾಪ್‍ಟಾಪ್ ವಿತರಿಸಲಾಯಿತು. ನದಿ ಸಂರಕ್ಷಣಾ ಯಜ್ಞದ ಅಂಗವಾಗಿ ಎನ್‍ಜಿಓ ಒಕ್ಕೂಟ ರಾಷ್ಟ್ರೀಯ ಅಧ್ಯಕ್ಷ ಕೆ.ಎನ್.ಅನಂತಕುಮಾರ್ ನಡೆಸುತ್ತಿರುವ ನದಿ ಸಂರಕ್ಷಣಾ ಯಾತ್ರೆಯ ಅಂಗವಾಗಿ ಜಿಲ್ಲಾ ಮಟ್ಟದ ಸಂಘಟನಾ ಸಮಿತಿ ರಚನಾ ಸಭೆಯೂ ನಡೆಯಿತು.