ಪೆರ್ಲ: ಪತ್ನಿಯನ್ನು ಬೆಡ್ ರೂಂನೊಳಗೆ ಕೂಡಿಹಾಕಿದ ಬಳಿಕ ಪತಿ ಮನೆಯ ವರಾಂಡದಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಮುಳ್ಳೇರಿಯದ ಸ್ಟುಡಿಯೋವೊಂದರ ಫೆÇೀಟೊಗ್ರಾಫರ್ ಆಗಿರುವ ಪೆರ್ಲ ಉಕ್ಕಿನಡ್ಕ ಮೆಡಿಕಲ್ ಕಾಲೇಜು ಬಳಿಯ ಕಾರ್ಯಾಡು ನಿವಾಸಿ ಕೆ.ಪ್ರವೀಣ್(22) ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಏ.23 ರಂದು ರಾತ್ರಿ 12 ಗಂಟೆಗೆ ಘಟನೆ ನಡೆದಿದೆ. ಪ್ರವೀಣ್ ಹಾಗು ಮನೆಯವರು ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲೆಂದು ತೆರಳಿದ್ದರು. ಆದರೆ ಪ್ರವೀಣ್ ಅವರ ಪತ್ನಿ ಪೂಜೆಗೆ ಹೋಗಿರಲಿಲ್ಲ. ಪೂಜೆ ನಡೆಯುತ್ತಿದ್ದಂತೆ ಪತ್ನಿಯನ್ನು ಕರೆದುಕೊಂಡು ಬರುವುದಾಗಿ ತಿಳಿಸಿ ಪ್ರವೀಣ್ ಮನೆಗೆ ಹೋಗಿದ್ದರು. ಆದರೆ ಅವರು ಮರಳಿ ಬಂದಿರಲಿಲ್ಲ. ಪೂಜೆ ಮುಗಿದು ಮನೆಯವರು ಮರಳಿ ಬಂದಾಗ ಪ್ರವೀಣ್ ಮನೆಯ ವರಾಂಡದಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾದರು. ಪತ್ನಿ ಮಮತಾ ನಿದ್ದೆ ಮಾಡಿದ್ದ ಕೊಠಡಿ ಹೊರಗಿನಿಂದ ಮುಚ್ಚಗಡೆಗೊಳಿಸಿದ ಸ್ಥಿತಿಯಲ್ಲಿತ್ತು. ಪ್ರವೀಣ್ ಅವರನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಿದರೂ ರಕ್ಷಿಸಲು ಸಾಧ್ಯವಾಗಲಿಲ್ಲ. ಬದಿಯಡ್ಕ ಪೆÇಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.