ವಾಷಿಂಗ್ಟನ್: ಪ್ರಸಕ್ತ ವರ್ಷ 'ಈಸ್ಟರ್ ಸಂಡೇ' ಆಗಿರುವ ಮಾರ್ಚ್ 31 ಅನ್ನು 'ಲಿಂಗತ್ವ ಅಲ್ಪಸಂಖ್ಯಾತರ ದಿನ' (ಟ್ರಾನ್ಸ್‌ಜೆಂಡರ್ ಡೇ ಆಫ್ ವಿಸಿಬಿಲಟಿ) ಎಂದು ಘೋಷಿಸಿದ್ದ ನಡೆಗೆ ಅಧ್ಯಕ್ಷ ಜೋ ಬೈಡನ್ ತೀವ್ರ ಟೀಕೆಗೆ ಗುರಿಯಾಗಿದ್ದಾರೆ.
ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪರ ಪ್ರಚಾರ ಅಭಿಯಾನದ ತಂಡದವರು ಹಾಗೂ ಅಮೆರಿಕದ ಧಾರ್ಮಿಕ ಸಂಪ್ರದಾಯವಾದಿಗಳು ಬೈಡನ್ ಸರ್ಕಾರದ ಈ ತೀರ್ಮಾನದ ವಿರುದ್ಧ ಧ್ವನಿ ಎತ್ತಿದ್ದಾರೆ.
ದೇಶದಾದ್ಯಂತ ಇರುವ ಲಿಂಗತ್ವ ಅಲ್ಪಸಂಖ್ಯಾತರ ಜೀವನಮಟ್ಟ ಸುಧಾರಣೆ ಹಾಗೂ ಲಿಂಗ ಸಮಾನತೆ ಪರವಾಗಿ ಧ್ವನಿ ಎತ್ತಲು, ಎಲ್ಲ ಅಮೆರಿಕನ್ನರು ಮಾರ್ಚ್ 31ರಂದು ಒಂದುಗೂಡಬೇಕು ಎಂದು ಅಧ್ಯಕ್ಷ ಜೋ ಬೈಡನ್ ಶುಕ್ರವಾರ ಕರೆ ನೀಡಿದ್ದರು.
ಮಾರ್ಚ್ 31 ಈ ವರ್ಷ 'ಈಸ್ಟರ್ನ್ ಸಂಡೆ' ಆಗಿತ್ತು. ಇದು, ಕ್ರೈಸ್ತರ ಪ್ರಮುಖ ಧಾರ್ಮಿಕ ಆಚರಣೆ ದಿನ. ಧರ್ಮ ಸೂಕ್ಷ್ಮತೆ ಇಲ್ಲದ, ರೋಮನ್ ಕ್ಯಾಥೋಲಿಕ್ ಆದ ಬೈಡನ್ ಅವರ ನಿರ್ಧಾರ ಖಂಡನೀಯ. ಅವರು ಕ್ಷಮೆ ಕೇಳಬೇಕು' ಎಂದು ಟ್ರಂಪ್ ಪ್ರಚಾರ ತಂಡ ಆಗ್ರಹಿಸಿದೆ.
'ಅಮೆರಿಕದ ಲಕ್ಷಾಂತರ ಕ್ಯಾಥೋಲಿಕ್‌ಗಳು, ಕ್ರೈಸ್ತರು 'ಈಸ್ಟರ್ ಸಂಡೆ'ಯನ್ನು ಯೇಸುವಿನ ಪುನರುತ್ಥಾನ ದಿನವಾಗಿ ಆಚರಿಸುತ್ತಾರೆ. ಅವರ ನಂಬಿಕೆಗಳಿಗೆ ಪೆಟ್ಟುಬಿದ್ದಿದೆ. ಇದಕ್ಕಾಗಿ ಕ್ಷಮೆ ಕೇಳಲಿ' ಎಂದು ಪ್ರಚಾರ ತಂಡದ ಕಾರ್ಯದರ್ಶಿ ಕರೊಲೈನ್ ಲೀವಿಟ್ ಆಗ್ರಹಿಸಿದ್ದಾರೆ.
ವ್ಯಾಟಿಕನ್‌ನ ಸೇಂಟ್ ಪೀಟರ್ ಸ್ಕ್ವೈರ್‌ನಲ್ಲಿ ನಡೆದ ಈಸ್ಟರ್ ಸಂಡೆ ಪ್ರಾರ್ಥನೆಯ ಬಳಿಕ ಪೋಪ್ ಫ್ರಾನ್ಸಿಸ್ ಅವರು ಸಭಿಕರತ್ತ ಕೈಬೀಸಿ ಹರ್ಷ ವ್ಯಕ್ತಪಡಿಸಿದರು -ಎಎಫ್‌ಪಿ ಚಿತ್ರ