HEALTH TIPS

ಎಣ್ಮಕಜೆ ಪಂಚಾಯತಿನಲ್ಲಿ ಜಲಪೂರೈಕೆ ಅಯೋಮಯಕ್ಕೆ: ವಾಟರ್ ಅಥೋರಿಟಿ ಅನಾಸ್ಥೆ ಕಾರಣ: ಪಂಚಾಯತಿ ಅಧ್ಯಕ್ಷ

               ಪೆರ್ಲ. ಬೇಸಿಗೆ ಉಷ್ಣ ತೀವ್ರಗೊಂಡು ಕುಡಿಯುವ ನೀರಿಗಾಗಿ ಜನರು ಪರದಾಡುವ ಸನ್ನಿವೇಶ ಎದುರಾದ ಆತಂಕದ ನಡುವೆ ಎಣ್ಮಕಜೆ ಪಂಚಾಯತ್ ವ್ಯಾಪ್ತಿಯಲ್ಲಿ ಜಲಪೂರೈಕೆ ಅಸ್ತವ್ಯಸ್ತಗೊಂಡಿದೆ. ಪೂರೈಕೆಗೆ ಬೇಕಾಗುವಷ್ಟು ಜಲ ಲಭ್ಯವಿದ್ದರೂ ವಿವಿಧ ಪ್ರದೇಶಗಳಲ್ಲಿ ಪೈಫ್ ಲೈನ್  ಹೊಡೆದು ಹೋದ ಕಾರಣ ವ್ಯವಸ್ಥಿತವಾಗಿ ನೀರು ಪೂರೈಕೆ ಸಾಧ್ಯವಾಗುತ್ತಿಲ್ಲ. ಪೈಪ್ ದುರಸ್ತಿಗಾಗಿ ಇಲಾಖೆಗೆ ದೂರು ನೀಡಿದರೂ ಬೇಕಾದಷ್ಟು ನೌಕರರು ಇಲ್ಲವೆಂಬ ಹಾರಿಕೆಯ  ಉತ್ತರ ಇಲಾಖೆಯ ಅನಾಸ್ಥೆಯನ್ನು ಸೂಚಿಸುತ್ತದೆ. ಇದರಿಂದಾಗಿ ಹೆಚ್ಚಿನ ಪ್ರಮಾಣದಲ್ಲಿ ಶುದ್ಧ ನೀರು ಪೆÇೀಲಾಗುತ್ತಿದೆ. ಇದರ ಬಗ್ಗೆ ಜಲ ಸಂಪನ್ಮೂಲ ಇಲಾಖೆಯು ಎಚ್ಚೆತ್ತಕೊಳ್ಳಬೇಕೆಂದು ಎಣ್ಮಕಜೆ ಪಂಚಾಯತ್ ಅಧ್ಯಕ್ಷ ಸೋಮಶೇಖರ ಜೆ  ಎಸ್ ಒತ್ತಾಯಿಸಿದ್ದಾರೆ. 


          ಪ್ರತಿ ಮನೆಗಳಿಗೆ ಪೈಪ್ ಲೈನ್ ಅಳವಡಿಸಲಾಗಿದೆ. ವಿತರಣೆಗೆ ಬೇಕಾದಷ್ಟು ನೀರು ಲಭ್ಯವಿದ್ದೂ ಅದನ್ನು ಸರಿಯಾಗಿ ವಿತರಿಸಲು ಸಾಧ್ಯವಾಗದಿರುವುದು ಜಲ ಸಂಪನ್ಮೂಲ ಇಲಾಖೆಯ ಬೇಜವಾಬ್ದಾರಿ.ಪೈಪ್ ಲೈನ್ ನೀರು ತಲುಪದ ಗ್ರಾಹಕರಿಗೆ ಬಿಲ್ ಕಳುಹಿಸಿ ಜನಸಾಮಾನ್ಯರು ಕಛೇರಿಗಳನ್ನು ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಸಮಯಕ್ಕೆ ಸರಿಯಾಗಿ ಬಿಲ್ ಕಳುಹಿಸಿಕೊಡಲು  ವಾಟರ್ ಅಥೋರಿಟಿ ತೋರುವ ಕಾಳಜಿ ನೀರಿನ ವಿತರಣೆಯಲ್ಲಿಲ್ಲವೆಂದು ಅವರು ಆರೋಪಿಸಿದ್ದಾರೆ. ಪಂಚಾಯತ್ ಅಧೀನದಲ್ಲಿರುವ ಅಂಗನವಾಡಿ ಕೇಂದ್ರಗಳಿಗೂ ಇದೇ ರೀತಿ ಬಿಲ್ ಗಳನ್ನು ನೀಡಿದ್ದಾರೆ.ಸಮರ್ಪಕವಾಗಿ ನೀರು ವಿತರಿಸಲು ಹಾಗೂ ಉಪಯೋಗಿಸಿದ ನೀರಿಗೆ ಮಾತ್ರ ಬಿಲ್ ನೀಡಲು ಜಲ ಅಥೋರಿಟಿ  ಕ್ರಮ ಕೈಗೊಳ್ಳಲು ಪಂಚಾಯತ್ ಅಧ್ಯಕ್ಷ  ಸೋಮಶೇಖರ ಜೆ ಎಸ್ ಇಲಾಖೆಗೆ ನೀಡಿದ ಮನವಿಯಲ್ಲಿ ಒತ್ತಾಯಿಸಿದ್ದಾರೆ. ಪೂರಕ ಕ್ರಮ ಕೈಗೊಳ್ಳದಿದ್ದರೆ ಜನಸಾಮಾನ್ಯರ ಸಹಭಾಗಿತ್ವದಲ್ಲಿ ಹೋರಾಟಕ್ಕೆ ಇಳಿಯಲಿದ್ದೇವೆ ಎಂದು ಅವರು ತಿಳಿಸಿದ್ದಾರೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries