ನವದೆಹಲಿ: ಹೊಸದಾಗಿ ರಾಜ್ಯಸಭೆಗೆ ಆಯ್ಕೆ ಆಗಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಮತ್ತು ಇತರ ಐವರು ಶನಿವಾರ ಪ್ರಮಾಣ ವಚನ ಸ್ವೀಕರಿಸಿದರು.
ರಾಜ್ಯಸಭೆ ಸಭಾಪತಿ ಜಗದೀಪ್ ಧನಕರ್ ಅವರು ಅವರಿಗೆ ಪ್ರಮಾಣ ವಚನ ಬೋಧಿಸಿದರು.
ನಡ್ಡಾ ಅವರ ಜೊತೆ ಅಶೋಕ್‌ರಾವ್ ಶಂಕರ್‌ರಾವ್ ಚವ್ಹಾಣ್ (ಮಹಾರಾಷ್ಟ್ರ), ಚುನ್ನೀಲಾಲ್ ಗರಾಸಿಯಾ (ರಾಜಸ್ಥಾನ), ಅನಿಲ್ ಕುಮಾರ್ ಯಾದವ್ ಮಂದಡಿ (ತೆಲಂಗಾಣ), ಸುಶ್ಮಿತಾ ದೇವ್ ಮತ್ತು ಮೊಹಮ್ಮದ್ ನದಿಮುಲ್ ಹಕ್ (ಪಶ್ಚಿಮ ಬಂಗಾಳ) ಅವರೂ ಪ್ರಮಾಣ ವಚನ ಸ್ವೀಕರಿಸಿದರು.