ಕಾಸರಗೋಡು: ವಿಧಾನಸಭಾ ಕ್ಷೇತ್ರದ ವಿವಿಧ ಮತಗಟ್ಟೆಗಳು, ಬೂತ್‍ಗಳು, ಸ್ಟ್ರಾಂಗ್ ರೂಂ, ಮತಯಂತ್ರ ವಿತರಣಾ ಕೇಂದ್ರ ಹಾಗೂ ಗಡಿಭಾಗದಲ್ಲಿ ಚಟುವಟಿಕೆ ನಡೆಸುತ್ತಿರುವ ಚುನಾವಣಾ ಚೆಕ್‍ಪೆÇೀಸ್ಟ್‍ಗಳಿಗೆ ಭಾರತ ಚುನಾವಣಾ ಆಯೋಗ ನೇಮಿಸಿರುವ ಜನರಲ್ ಒಬ್ಸರ್ವರ್ ರಿಷಿರೇಂದ್ರ ಕುಮಾರ್ ಭೇಟಿ ನೀಡಿದರು.
ಕಾಸರಗೋಡು ವಿಧಾನಸಭಾ ಕ್ಷೇತ್ರದಲ್ಲಿ ಮತಯಂತ್ರಗಳ ವಿತರಣಾ ಕೇಂದ್ರಗಳಾದ ಕಾಸರಗೋಡು ಸರ್ಕಾರಿ ಕಾಲೇಜು, ಸರ್ಕಾರಿ ಕಾಲೇಜಿನಲ್ಲಿ ಜ್ಜುಗೊಳಿಸಲಾಗಿರುವ ಸ್ಟ್ರಾಂಗ್ ರೂಂ, ಸರ್ಕಾರಿ ಕಾಲೇಜಿನಲ್ಲಿ ಎರಡು ಬೂತ್‍ಗಳು, ಕಾಸರಗೋಡು ಸರ್ಕಾರಿ ಫಿಶರೀಸ್ ಯುಪಿ ಶಾಲೆ, ಕೂಡ್ಲು ಗೋಪಾಲಕೃಷ್ಣ ಹೈಯರ್ ಸೆಕೆಂಡರಿ ಶಾಲೆ, ಚೆರ್ಕಳ ಸರ್ಕಾರಿ ಪ.ಪೂ. ಹೈಯರ್ ಸೆಕೆಂಡರಿ ಶಾಲೆ, ಮುಳ್ಳೇರಿಯ ಕಾರಡ್ಕ ಸರ್ಕಾರಿ ವೊಕೇಶನಲ್ ಹೈಯರ್ ಸೆಕೆಂಡರಿ ಶಾಲೆ, ಕೇರಳ-ಕರ್ನಾಟಕ ಗಡಿ ಪ್ರದೇಶ ಆದೂರಿನಲ್ಲಿ ಸ್ಟ್ಯಾಟಿಕ್ ಸರ್ವೆಲೆನ್ಸ್ ತಂಡ ಕಾರ್ಯಾಚರಿಸುವ ಚೆಕ್‍ಪೆÇೀಸ್ಟ್‍ಗಳಿಗೆ ರಿಶಿರೇಂದ್ರ ಕುಮಾರ್ ಭೇಟಿ ನೀಡಿದರು. ಮತಯಂತ್ರ ವಿತರಣಾ ಕೇಂದ್ರ, ಬೂತ್‍ಗಳು ಚೆಕ್‍ಪೋಸ್ಟ್‍ಗಳಲ್ಲಿ ನಡೆಸಲಾಗಿರುವ ಸಿದ್ಧತೆಗಳ ಬಗ್ಗೆ , ಸಹಾಯಕ ಚುನಾವಣಾಧಿಕಾರಿ ಆರ್‍ಡಿಒ ಪಿ.ಬಿನುಮೋನ್ ಮಾಹಿತಿ ನೀಡಿದರು. ಹಿರಿಯ ಅಧೀಕ್ಷಕ ವಿ.ದೀಪು ವೀಕ್ಷಕರ ಸಂಪರ್ಕಾಧಿಕಾರಿ ವಿಶಾಖ್ ನಾರಾಯಣ್ ಉಪಸ್ಥಿತರಿದ್ದರು.
ಪೊಲೀಸ್ ವೀಕ್ಷಕರಿಂದ ಅವಲೋಕನ:
ಕಾಸರಗೋಡು ಲೋಕಸಭಾ ಕ್ಷೇತ್ರದಲ್ಲಿ ಕೇಂದ್ರ ಚುನಾವಣಾ ಆಯೋಗದಿಂದ ನೇಮಕಗೊಂಡ ಪೆÇಲೀಸ್ ವೀಕ್ಷಕ ಸಂತೋಷ್ ಸಿಂಗ್ ಗೌರ್ ಅವರು ಕಾಸರಗೋಡು ಜಿಲ್ಲೆಯ ಕಾನೂನು ಸುವ್ಯವಸ್ಥೆ ಹಾಗೂ ಭದ್ರತಾ ವ್ಯವಸ್ಥೆಗಳ ಬಗ್ಗೆ ಖುದ್ದು ಪರಿಶೀಲನೆ ನಡೆಸಿದರು. ಈ ಸಂದರ್ಭ ತಲಪ್ಪಾಡಿ ಪೆÇಲೀಸ್ ಚೆಕ್ ಪೆÇೀಸ್ಟ್ ಮತ್ತು ಮಂಜೇಶ್ವರಂ ಪೆÇಲೀಸ್ ಠಾಣೆಗೆ ಭೇಟಿ ನೀಡಿ ಕಾನೂನು ಸುವ್ಯವಸ್ಥೆ ಬಗ್ಗೆ ಮಾಹಿತಿ ಪಡೆದುಕೊಂಡರು.