ಮಧೂರು: ರಾಮರಾಜ ಕ್ಷತಿಯ ಯಾನೆ ಕೋಟೆಯಾರ್ ಸೇವಾಸಂಘ ಕಾಸರಗೋಡು ಉಪಸಂಘ ಕೂಡ್ಲು ಇದರ ವಾರ್ಷಿಕ ಮಹಾಸಭೆ ನಿವೃತ್ತ ಎ.ಎಸ್.ಐ ಪುರುಷೋತ್ತಮ ಕೂಡ್ಲು ಅವರ ಮನೆಯಲ್ಲಿ ಉಪಸಂಘದ ಅಧ್ಯಕ್ಷ ಬಿ.ಸತೀಶ ರವರ ಅಧ್ಯಕ್ಷತೆಯಲ್ಲಿ ಜರಗಿತು.
ಜಿಲ್ಲಾ ಸಂಘದ ಅಧ್ಯಕ್ಷ ಕಮಲಾಕ್ಷ ಕಲ್ಲುಗದ್ದೆ ಅವರು ಮಹಾಸಭೆ ಉದ್ಘಾಟಿಸಿ ಮಾತನಾಡಿ ಸಮಾಜದ ಅವಶ್ಯಕತೆ ಕುರಿತು ತಿಳಿಸಿದರು. ಕೋಟೆಯಾರ್ ಸಮಾಜದವರನ್ನು ಒಬಿಸಿ ಯ ಎಸ್‍ಇಬಿಸಿ ಪಟ್ಟಿಗೆ ಸೇರಿಸುವ ಕೆಲಸವು 2016 ರಿಂದ ಸತೀಶ್ ಮಾಸ್ತರ್ ಮತ್ತಿತರರ ಪ್ರಯತ್ನದ ಫಲವಾಗಿ ಯಶಸ್ಸು ಕಾಣುವ ದಾರಿಯಲ್ಲಿದೆ. ಮುಖ್ಯ ಮಂತ್ರಿಯವರ ಸಹಿಗಾಗಿ ಕಡತವು ಅವರ ಮೇಜಿನ ಮೇಲಿದೆ ಎಂದು ತಿಳಿಸಿದರು.
ಜಿಲ್ಲಾ ಸಂಘದ ಕೋಶಾಧಿಕಾರಿ ಸತೀಶ್ ಮಾಸ್ತರ್ ಜಿಲ್ಲಾ ಸಂಘವು ಕೊಡುವ ಸೌಲಭ್ಯಗಳ ಕುರಿತು ವಿವರಣೆ ನೀಡಿದರು. ಈ ಸೌಲಭ್ಯ ಪಡೆಯುವುದರಲ್ಲಿ ಕೂಡ್ಲು ಉಪಸಂಘವು ಮುಂಚೂಣಿಯಲ್ಲಿದೆ ಎಂದರು. ಉಪ ಸಂಘದ ಕಾರ್ಯದರ್ಶಿ ಚಂದ್ರಶೇಖರ ಗತ ವರ್ಷದ ವರದಿಯನ್ನು ಮಂಡಿಸಿದರು. ಕೋಶಾಧಿಕಾರಿ ಸತೀಶ್ ಕೆ. ಅವರು 2023-24 ನೇ ವರ್ಷದ ಲೆಕ್ಕಪತ್ರ ಮಂಡಿಸಿದರು. ಚರ್ಚಿಸಿದ ಬಳಿಕ ಅಂಗೀಕರಿಸಲಾಯಿತು. ವೆಂಕಟೇಶ, ರಾಜೇಂದ್ರ, ಪುಷ್ಪಲತ, ಸ್ವರ್ಣಲತಾ ಮತ್ತಿತರರು ಸಂಘಟನೆಯ ಕುರಿತು ತಿಳಿಸಿದರು
ಜಿಲ್ಲಾ ಸಂಘದಿಂದ ಕೊಡಮಾಡಿದ ಯುಗಾದಿಯ ಉಡುಗೊರೆಯನ್ನು ಜಿಲ್ಲಾ ಸಂಘದ ಅಧ್ಯಕ್ಷ ಕಮಲಾಕ್ಷ ಕಲ್ಲುಗದ್ದೆ ವಿತರಿಸಿದರು. ರಾಷ್ಟ್ರೀಯ ಪ್ರಶಸ್ತಿಗೆ ಭಾಜನರಾದ ಸಿಪಿಸಿಆರ್‍ಐಯ ಪಾಂಡುರಂಗ ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ ಮಕ್ಕಳಿಗೆ ಬಹುಮಾನ ವಿತರಿಸಿದರು.