ಕಾಸರಗೋಡು: ಜಿಲ್ಲಾ ಸಾಕ್ಷರತಾ ಮಿಶನ್‍ನ ಆಶ್ರಯದಲ್ಲಿ ಕೇಂದ್ರ ಚುನಾವಣಾ ಆಯೋಗದ ರಚನೆ, ಅಧಿಕಾರ ಮತ್ತು ಕರ್ತವ್ಯಗಳ ಕುರಿತು ಹೈಯರ್ ಸೆಕೆಂಡರಿ ವಿದ್ಯಾರ್ಥಿಗಳಿಗಾಗಿ ಪ್ರಬಂಧ ಸ್ಪರ್ಧೆಯನ್ನು ನಡೆಸಲಾಗುವುದು.
ಕೇರಳ 'ಸಂಪೂರ್ಣ ಸಾಕ್ಷರತೆ' ಯನ್ನು ಗಳಿಸಿದ 33ನೇ ವರ್ಷವನ್ನು ಹಲವಾರು ಕಾರ್ಯಕ್ರಮಗಳೊಂದಿಗೆ ಆಚರಿಸುವುದರ ಭಾಗವಾಗಿ ಕಾಂಞಂಗಾಡ್ ಮಾವುಂಗಲ್ ರಾಮನಗರ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಇಂದು ಎಪ್ರಿಲ್ 18 ರಂದು ಬುಧವಾರ ಬೆಳಗ್ಗೆ 10.30 ರಿಂದ ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಿದೆ.
ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಹಿಂದಿನ ಸಾಕ್ಷರತಾ ಕಾರ್ಯಕರ್ತರನ್ನು ಮತ್ತು ಸಮತ್ವ ತರಗತಿಯ ಹಿರಿಯ ಸಾಕ್ಷರತಾ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಗುವುದು. ಸಮತ್ವ ಸಾಕ್ಷರತೆ ಕಲಿಯುವವರ ಕಲಾ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಕೂಡ ಆಯೋಜಿಸಲಾಗುವುದು.
10ನೇ ತರಗತಿಯ ಸಮತ್ವ ವಿದ್ಯಾರ್ಥಿಗಳಿಗಾಗಿ ಪ್ರಬಂಧ ಸ್ಪರ್ಧೆಯನ್ನು ಸಹ ನಡೆಸಲಾಗುವುದು. 'ಕೇಂದ್ರ ಚುನಾವಣಾ ಆಯೋಗದ ರಚನೆ, ಅಧಿಕಾರಗಳು ಮತ್ತು ಕರ್ತವ್ಯಗಳು' ಸಮತ್ವ ಹೈಯರ್ ಸೆಕೆಂಡರಿ ಕಲಿಯುವವರಿಗೆ ಇರುವ ವಿಷಯವಾಗಿದೆ. 'ಭಾರತದ ರಾಷ್ಟ್ರಪತಿಯನ್ನು ಹೇಗೆ ಆಯ್ಕೆ ಮಾಡುವುದು ಮತ್ತು ಅವರ ಅಧಿಕಾರಗಳು ಮತ್ತು ಕರ್ತವ್ಯಗಳು' ಎಂಬುದು 10 ನೇ ತರಗತಿಯ ಸಮತ್ವ ವಿದ್ಯಾರ್ಥಿಗಳಿಗೆ ವಿಷಯವಾಗಿದೆ.
ಕಾರ್ಯಕ್ರಮದಲ್ಲಿ ಪ್ರಮುಖರಾದ ಹಿರಿಯ( ಹಿಂದಿನ) ಸಾಕ್ಷರತಾ ಕಾರ್ಯಕರ್ತರು ಭಾಗವಹಿಸುವರು ಎಂದು ಸಾಕ್ಷರತಾ ಮಿಶನ್ ಸಂಯೋಜಕ ಪಿ ಎನ್ ಬಾಬು ಮಾಹಿತಿ ನೀಡಿದ್ದಾರೆ.