ನವದೆಹಲಿ: ಎಂಥದ್ದೇ ಸಂದರ್ಭ ಎದುರಾದರೂ ನ್ಯಾಯಕ್ಕಾಗಿ ದನಿ ಎತ್ತಲು ಸಿದ್ಧನಿದ್ದಾನೆಯೇ ಎಂಬುದು ನೀತಿವಂತ ವ್ಯಕ್ತಿಯ ಪಾಲಿನ ಅತಿದೊಡ್ಡ ಪರೀಕ್ಷೆ ಎಂದು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ.ವೈ. ಚಂದ್ರಚೂಡ್ ಹೇಳಿದರು. ಹಿರಿಯ ನ್ಯಾಯಶಾಸ್ತ್ರಜ್ಞ ಫಾಲಿ ಎಸ್.

ನರೀಮನ್ ಗೌರವಾರ್ಥವಾಗಿ ಸುಪ್ರೀಂ ಕೋರ್ಟ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಜೆಐ, ಅಂತಮ ದಿನದವರೆಗೂ ನರೀಮನ್ ಅವರು ಕಾನೂನಿಗೆ ಬದ್ಧತೆ ತೋರುವ ವಿಚಾರದಲ್ಲಿ, ಕೆಲಸದ ಮೇಲಿನ ಶ್ರದ್ಧೆಯ ವಿಚಾರವಾಗಿ ರಾಜಿ ಮಾಡಿಕೊಳ್ಳಲಿಲ್ಲ ಎಂದು ಶ್ಲಾಘಿಸಿದರು.
ನ್ಯಾಯದ ಪರವಾಗಿ ಮಾತನಾಡಲು ನರೀಮನ್ ಯಾವತ್ತೂ ಸಿದ್ಧರಿರುತ್ತಿದ್ದರು ಎಂದು ಸಿಜೆಐ ಹೇಳಿದರು. 1975ರಲ್ಲಿ ತುರ್ತು ಪರಿಸ್ಥಿತಿ ಹೇರಿದಾಗ ನರೀಮನ್ ಅವರು ಹೆಚ್ಚುವರಿ ಸಾಲಿಸಿಟರ್ ಜನರಲ್ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದರು ಎಂದು ನೆನಪಿಸಿಕೊಂಡರು.