ಕಾಸರಗೋಡು: ಚಿತ್ತಾರಿ ಕುದ್ರು ಶ್ರೀ ಮೂಕಾಂಬಿಕಾ ದೇವಸ್ಥಾನದ ನವೀಕರಣ ಪುನ:ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಅಂಗವಾಗಿ ಕೀಕಾನ ಶ್ರೀ ಮಹಾಮಾಯಾ ದೇವಳದಿಂದ ಹೊರೆ ಕಾಣಿಕೆ ಸಮರ್ಪಣೆ ನಡೆಯಿತು.
ಏ.21 ರಂದು ಸಂಜೆ ಆಚಾರ್ಯವರಣ, ಪಶುದಾನ ಪುಣ್ಯಾಹ, ಅಂಕುರಾರೋಪಣೆ, ಪ್ರಾಸಾದ ಶುದ್ಧಿ, ಅಸ್ತ್ರ ಕಲಶ, ರಾಕ್ಷೋಘ್ನ ಹೋಮ, ವಾಸ್ತು ಕಲಶ ಪೂಜೆ, ವಾಸ್ತು ಹೋಮ, ವಾಸ್ತು ಬಲಿ, ವಾಸ್ತು ಕಲಶಾಭಿಷೇಕ, ವಾಸ್ತು ಪುಣ್ಯಾಹ, ಅತ್ತಾಯ ಪೂಜೆ, ಕುಂಡ ಶುದ್ಧಿ ನಡೆಯಿತು. ಎ.22 ರಂದು ಬೆಳಗ್ಗೆ ಗಣಪತಿ ಹೋಮ, ಉಷ:ಪೂಜೆ, ಅಂಕುರ ಪೂಜೆ, ದ್ವಾರ ಪ್ರಾಯಶ್ಚಿತ್ತ ಹೋಮ, ಬಿಂಬ ಶುದ್ಧಿ, ಕಲಶ ಪೂಜೆ, ಕಲಶಾಭಿಷೇಕ, ಹೋಮ ಕಲಶಾಭಿಷೇಕ, ಮಧ್ಯಾಹ್ನ ಪೂಜೆ, ಭಜನೆ, ಭಕ್ತಿಗಾನ ಸುಧಾ, ತಿರುವಾದಿರ, ರಾಮಾಯಣ ದಶಾವತಾರ ನಡೆಯಿತು. ಸಂಜೆ ಕುಂಡ ಶುದ್ಧಿ, ಭಗವತೀ ಸೇವೆ, ಅಂಕುರ ಪೂಜೆ, ಅತ್ತಾಯ ಪೂಜೆ ಜರಗಿತು.