ಕೋಲ್ಕತಾ: ಸರ್ಕಾರಿ ಸ್ವಾಮ್ಯದ ವಿಶ್ವವಿದ್ಯಾಲಯಗಳ ಕಾರ್ಯನಿರ್ವಹಣೆಗೆ ಸಂಬಂಧಿಸಿದ ಗೊಂದಲದ ನಡುವೆ ಪಶ್ಚಿಮ ಬಂಗಾಳದ ಶಿಕ್ಷಣ ಸಚಿವ ಬ್ರಾತ್ಯ ಬಸು ಅವರು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ನನ್ನ ಸಂಬಂಧ ಹಾಳು ಮಾಡಲು ಯತ್ನಿಸುತ್ತಿದ್ದಾರೆ ಎಂದು ಪಶ್ಚಿಮ ಬಂಗಾಳ ರಾಜ್ಯಪಾಲ ಆನಂದ ಬೋಸ್ ಅವರು ಗುರುವಾರ ಆರೋಪಿಸಿದ್ದಾರೆ.
ಸಚಿವ ಬ್ರತ್ಯಾ ಬಸು ಅವರು ರಾಜ್ಯಪಾಲರನ್ನು ಹುಚ್ಚ ಮತ್ತು ಮತ್ತು ಆಲ್ಝೈಮರ್ ಕಾಯಿಲೆಯಿಂದ ಬಳಲುತ್ತಿದ್ದಾರೆ ಎಂದು ಹೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಆನಂದ್ ಬೋಸ್ ಅವರು, ಬಸು ಅವರ ಆರೋಪಗಳು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರೊಂದಿಗಿನ ಸಂಬಂಧವನ್ನು ಹಾಳುಮಾಡುವ ಪ್ರಯತ್ನವಾಗಿದೆ ಎಂದು ತಿರುಗೇಟು ನೀಡಿದ್ದರು.
"ಸಚಿವ ಬ್ರತ್ಯಾ ಬಸು ಅವರು ರಾಜ್ಯಪಾಲರನ್ನು ಹುಚ್ಚರು ಮತ್ತು ಆಲ್ಝೈಮರ್‌ನಿಂದ ಬಳಲುತ್ತಿದ್ದಾರೆ ಎಂದು ಹೇಳಿದ್ದಾರೆ. ಆದರೆ ಇದು ಮುಖ್ಯಮಂತ್ರಿಗಳು ಬಯಸಿದ ಸಮಯದಲ್ಲಿ, ಖಾಲಿ ಇರುವ ವಿಶ್ವವಿದ್ಯಾಲಯಗಳ ಹಂಗಾಮಿ ವಿಸಿಗಳಾಗಿ ನೇಮಕ ಮಾಡಲು ಸಚಿವರು ಸೂಚಿಸಿದ ಎಲ್ಲಾ 4 ಹೆಸರುಗಳನ್ನು ರಾಜ್ಯಪಾಲರು ಒಪ್ಪಿಕೊಂಡಿದ್ದಾರೆ" ಎಂದು ರಾಜಭವನ X ನಲ್ಲಿ ಪೋಸ್ಟ್ ಮಾಡಿದೆ.
"ರಾಜ್ಯಪಾಲರು ಮತ್ತು ಮುಖ್ಯಮಂತ್ರಿಗಳ ನಡುವಿನ ಸಂಬಂಧವನ್ನು ಸಚಿವರು ಹಾಳು ಮಾಡುತ್ತಿದ್ದಾರೆ ಎಂದು ಆನಂದ್ ಬೋಸ್" ಎಂದು ಪೋಸ್ಟ್ ನಲ್ಲಿ ತಿಳಿಸಲಾಗಿದೆ.
ರಾಜ್ಯ ವಿಶ್ವವಿದ್ಯಾನಿಲಯಗಳ ಕಾರ್ಯನಿರ್ವಹಣೆಗೆ ಸಂಬಂಧಿಸಿದಂತೆ ರಾಜ್ಯಪಾಲರು "ತರ್ಕಬದ್ಧವಲ್ಲದ ಮತ್ತು ಅಸಮಂಜಸ ಕ್ರಮಗಳನ್ನು" ತೆಗೆದುಕೊಳ್ಳುತ್ತಿದ್ದಾರೆ ಎಂದು ಬಸು ಆರೋಪಿಸಿದ್ದರು.