ಕೊಚ್ಚಿ: ಸಾರಿಗೆ ಸಚಿವ ಕೆ.ಬಿ.ಗಣೇಶ್ ಕುಮಾರ್ ವಿರುದ್ಧ ಹೈಕೋರ್ಟ್ ವಕೀಲರೊಬ್ಬರು ದೂರು ದಾಖಲಿಸಿದ್ದಾರೆ. ಸ್ಟೇಜ್ ಕ್ಯಾರಿಯರ್ ಸಮವಸ್ತ್ರ ಧರಿಸದೆ 20 ಕಿ.ಮೀ.ಗೂ ಹೆಚ್ಚು ದೂರ ಸಚಿವರು ವಾಹನ ಚಲಾಯಿಸಿದ್ದಾರೆ ಎಂದು ಹೈಕೋರ್ಟ್ ವಕೀಲ ಆದರ್ಶ್ ಅವರು ಸಾರಿಗೆ ಆಯುಕ್ತರಿಗೆ ದೂರು ಸಲ್ಲಿಸಿದ್ದಾರೆ.
ಕೆಎಸ್‍ಆರ್‍ಟಿಸಿಯ ಹೊಸ ಅಶೋಕ್ ಲೈಲ್ಯಾಂಡ್ ಬಸ್‍ನ ಪ್ರಾಯೋಗಿಕ ಸಂಚಾರದ ವೇಳೆ ಈ ಘಟನೆ ನಡೆದಿದೆ. ಕೆಎಸ್‍ಆರ್‍ಟಿಸಿ ಎಂಡಿ ಹಾಗೂ ಸಾರಿಗೆ ಇಲಾಖೆ ಅಧಿಕಾರಿಗಳ ಸಮ್ಮುಖದಲ್ಲಿ ಸಚಿವರು ವಾಹನಕ್ಕೆ ಚಾಲನೆ ನೀಡಿ ಪರಿಶೀಲನೆ ನಡೆಸಿದರು. ಸಚಿವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಹಾಗೂ ಕೆಎಸ್‍ಆರ್‍ಟಿಸಿಯ ಅಧಿಕೃತ ಫೇಸ್‍ಬುಕ್ ಪೇಜ್‍ನಲ್ಲಿ ಹಾಕಿರುವ ವಿಡಿಯೋವನ್ನು ತೆಗೆದುಹಾಕುವಂತೆ ಆಗ್ರಹಿಸಿ ಆದರ್ಶ್ ದೂರು ಸಲ್ಲಿಸಿದ್ದಾರೆ.