ಜಲಪಾಈಗುಡಿ: ಪಶ್ಚಿಮ ಬಂಗಾಳದ ಜಲಪಾಈಗುಡಿ ಜಿಲ್ಲೆಯಲ್ಲಿ ಕೆಲವೆಡೆ ಸುರಿದ ಬಿರುಗಾಳಿ ಸಹಿತ ಮಳೆಯಿಂದ ಆತಂಕಗೊಂಡಿರುವ ಇಲ್ಲಿನ ನಿವಾಸಿಗಳು ಮೂರು ರಾತ್ರಿಗಳಿಂದ ನಿದ್ದೆಯಿಲ್ಲದೆ ಹೊರಾಂಗಣದಲ್ಲಿ ಕಳೆದಿದ್ದಾರೆ. ಅಲ್ಲದೆ ಪರಿಹಾರ ಸಾಮಗ್ರಿ ಸರಿಯಾಗಿ ತಮ್ಮನ್ನು ತಲುಪುತ್ತಿಲ್ಲ ಎಂದೂ ದೂರಿದ್ದಾರೆ.

ಬಿರುಗಾಳಿ ಮಳೆಯು ಐವರನ್ನು ಬಲಿ ತೆಗೆದುಕೊಂಡಿದ್ದು, 200ಕ್ಕೂ ಹೆಚ್ಚು ಜನರನ್ನು ನಿರಾಶ್ರಿತರನ್ನಾಗಿಸಿದೆ.
ಪರಿಹಾರ ಸಾಮಗ್ರಿಗಳನ್ನು ಸರಿಯಾಗಿ ವಿತರಿಸಲಾಗಿಲ್ಲ. ಕುಡಿಯುವ ನೀರಿನ ಕೊರತೆ, ಶಿಶುಗಳಿಗೆ ಆಹಾರದ ಸಮಸ್ಯೆ ತೀವ್ರವಾಗಿದೆ ಎಂದು ನಿರಾಶ್ರಿತರು ಅಳಲು ತೋಡಿಕೊಂಡಿದ್ದಾರೆ. ಆದರೆ, ಪರಿಹಾರ ಸಾಮಗ್ರಿಗಳ ಕೊರತೆಯಿಲ್ಲ. ಬಿಕ್ಕಟ್ಟನ್ನು ಎದುರಿಸಲು ಸರ್ಕಾರ ಶ್ರಮಿಸುತ್ತಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.