ಸಮರಸ ಚಿತ್ರಸುದ್ದಿ: ಕಾಸರಗೋಡು: ಕಾಸರಗೋಡು ಲೋಕಸಭಾ ಕ್ಷೇತ್ರ ಎನ್‍ಡಿಎ ಸಮಾವೇಶ ಬಿಜೆಪಿ ಕಾಸರಗೋಡು ಜಿಲ್ಲಾ ಸಮಿತಿ ಕಚೇರಿ ಸಭಾಂಗಣದಲ್ಲಿ ಜರುಗಿತು. ಬಿಜೆಪಿ ಕೇರಳ ಸಹ ಪ್ರಭಾರಿ ನಳಿನ್ ಕುಮಾರ್ ಕಟೀಲ್ ಸಮಾವೇಶ ಉದ್ಘಾಟಿಸಿದರು. ಸುರೇಶ್ ಕುಮಾರ್ ಶೆಟ್ಟಿ, ಸವಿತಾ ಟೀಚರ್, ವಿಜಯ್ ಕುಮಾರ್ ರೈ, ಸುಧಾಮ ಗೋಸಾಡ ಮೊದಲಾದವರು ಉಪಸ್ಥಿತರಿದ್ದರು.