ಕೊಚ್ಚಿ: ಚಿತ್ರ ನಿರ್ದೇಶಕ ಜೋಶಿ ಅವರ ಕೊಚ್ಚಿಯ ಮನೆಯಲ್ಲಿ ಕಳ್ಳತನ ಮಾಡಿದ್ದ ಬಿಹಾರ ಮೂಲದ ಮೊಹಮ್ಮದ್ ಇರ್ಫಾನ್ ನನ್ನು ತನಿಖಾ ತಂಡ ವಶಕ್ಕೆ ತೆಗೆದುಕೊಂಡಿದೆ.
ಕಳ್ಳತನಕ್ಕೆ ಸ್ಥಳೀಯರ ನೆರವು ಸಿಕ್ಕಿದೆಯೇ, ಜೋಶಿ ಅವರ ಮನೆಯಲ್ಲಿದ್ದ ಚಿನ್ನಾಭರಣಗಳ ಬಗ್ಗೆ ಅವರಿಗೆ ಮಾಹಿತಿ ಇತ್ತೇ ಎಂಬ ಬಗ್ಗೆ ತನಿಖೆ ನಡೆಸಲಾಗುವುದು ಎಂದು ನಗರ ಪೋಲೀಸ್ ಆಯುಕ್ತರು ತಿಳಿಸಿದ್ದಾರೆ. ಬಂಧಿತ ಮುಹಮ್ಮದ್ ಇರ್ಫಾನ್ 6 ರಾಜ್ಯಗಳಲ್ಲಿ 19 ಕಳ್ಳತನ ಪ್ರಕರಣಗಳಲ್ಲಿ ಆರೋಪಿಯಾಗಿದ್ದಾನೆ.
ಮೊಹಮ್ಮದ್ ಇರ್ಫಾನ್ ತಿರುವನಂತಪುರದ ಭೀಮಾ ಜ್ಯುವೆಲ್ಲರಿ ಮಾಲೀಕನ ಮನೆಯ ದರೋಡೆ ಪ್ರಕರಣದ ಆರೋಪಿ. ಮುಹಮ್ಮದ್ ಇರ್ಫಾನ್ ಬಿಹಾರದ ಸೀತಾ ಮುರ್ಸಿ ಜಿಲ್ಲಾ ಪಂಚಾಯತಿ ಅಧ್ಯಕ್ಷೆಯ ಪತಿ. ಜೋಶಿ ಅವರ ಮನೆಯಲ್ಲಿ ದರೋಡೆ ನಡೆಸಿದ ಬಳಿಕ ಕಾರಿನಲ್ಲಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಎಂಬ ಬೋರ್ಡ್ ಹಾಕಿಕೊಂಡು ಪರಾರಿಯಾಗಿದ್ದ. ಆದರೆ 16 ಗಂಟೆಯೊಳಗೆ ಕರ್ನಾಟಕದ ಉಡುಪಿಯಿಂದ ಬಂಧಿಸಲಾಯಿತು.
ಆರೋಪಿಯನ್ನು ಬಂಧಿಸುವಲ್ಲಿ ಉಡುಪಿ ನಗರ ಪೆÇಲೀಸ್ ಆಯುಕ್ತ ರಮಣ್ ಗುಪ್ತಾ ಅವರ ಸಹಾಯವು ನಿರ್ಣಾಯಕವಾಗಿದೆ ಎಂದು ಕೊಚ್ಚಿ ನಗರ ಪೋಲೀಸ್ ಆಯುಕ್ತರು ತಿಳಿಸಿದ್ದಾರೆ. ಇಂದು ಬೆಳಗ್ಗೆ ಕೊಚ್ಚಿಗೆ ಕರೆತಂದ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ವಶಕ್ಕೆ ಪಡೆಯಲಾಗಿದೆ. ಆತನಿಗೆ ಮೂರು ದಿನಗಳ ಕಾಲ ರಿಮಾಂಡ್ ನೀಡಲಾಗಿದೆ.