ಬ್ಯಾಂಕಾಕ್: ಮ್ಯಾನ್ಮಾರ್‌ನ ವಿಮಾನ ನಿಲ್ದಾಣ ಮತ್ತು ರಾಜಧಾನಿ ನೈಪಿಡೊವ್‌ನಲ್ಲಿರುವ ಸೇನಾ ಪ್ರಧಾನ ಕಚೇರಿಯ ಮೇಲೆ ಗುರುವಾರ ಡ್ರೋನ್ ದಾಳಿ ನಡೆಸಲಾಗಿದೆ ಎಂದು ಪ್ರಜಾಪ್ರಭುತ್ವ ಪರ ಪ್ರಮುಖ ಹೋರಾಟಗಾರರ ಗುಂಪು ತಿಳಿಸಿದೆ.
ಬ್ಯಾಂಕಾಕ್: ಮ್ಯಾನ್ಮಾರ್‌ನ ವಿಮಾನ ನಿಲ್ದಾಣ ಮತ್ತು ರಾಜಧಾನಿ ನೈಪಿಡೊವ್‌ನಲ್ಲಿರುವ ಸೇನಾ ಪ್ರಧಾನ ಕಚೇರಿಯ ಮೇಲೆ ಗುರುವಾರ ಡ್ರೋನ್ ದಾಳಿ ನಡೆಸಲಾಗಿದೆ ಎಂದು ಪ್ರಜಾಪ್ರಭುತ್ವ ಪರ ಪ್ರಮುಖ ಹೋರಾಟಗಾರರ ಗುಂಪು ತಿಳಿಸಿದೆ.
'ಪೀಪಲ್ಸ್ ಡಿಫೆನ್ಸ್ ಫೋರ್ಸ್'ನ ವಿಶೇಷ ಘಟಕಗಳು, ರಾಜಧಾನಿಯಲ್ಲಿ ಏಕಕಾಲಕ್ಕೆ ಹಲವು ಸ್ಥಳಗಳ ಮೇಲೆ ದಾಳಿ ನಡೆಸಲು ಡ್ರೋನ್‌ಗಳನ್ನು ಬಳಸಲಾಯಿತು ಎಂದು ವಿರೋಧ ಪಕ್ಷಗಳ ರಾಷ್ಟ್ರೀಯ ಏಕತಾ ಸರ್ಕಾರದ (ಎನ್‌ಯುಜಿ) 'ರಕ್ಷಣಾ ಸಚಿವಾಲಯ' ಹೇಳಿಕೆಯಲ್ಲಿ ತಿಳಿಸಿದೆ.
ಏಳು ಡ್ರೋನ್‌ಗಳನ್ನು ಹೊಡೆದುರುಳಿಸಲಾಗಿದೆ. ಯಾವುದೇ ಸಾವುನೋವುಗಳು ವರದಿಯಾಗಿಲ್ಲ ಎಂದು ದೇಶದ ಮಿಲಿಟರಿ ಆಡಳಿತ ಹೇಳಿದೆ. ಇದನ್ನು ಸ್ವತಂತ್ರವಾಗಿ ಪರಿಶೀಲಿಸಲು ಸುದ್ದಿಸಂಸ್ಥೆಗೆ ಸಾಧ್ಯವಾಗಿಲ್ಲ.
ಆಡಳಿತ ಸೇನಾ ಮಂಡಳಿಯ ಮುಖ್ಯಸ್ಥ ಹಿರಿಯ ಜನರಲ್ ಮಿನ್ ಆಂಗ್ ಹ್ಲೈಂಗ್ ಅವರ ಮನೆ ಹಾಗೂ ಸೇನಾ ಪ್ರಧಾನ ಕಚೇರಿ ಹಾಗೂ ವಾಯುನೆಲೆ ಗುರಿಯಾಗಿಸಿಕೊಂಡು ಈ ದಾಳಿ ನಡೆಸಲಾಗಿದೆ ಎಂದು ದಾಳಿಯ ಹೊಣೆ ಹೊತ್ತಿರುವ ಪ್ರತಿರೋಧದ ಗುಂಪು ಕ್ಲೌಡ್ ತಂಡ (ಶಾರ್ ಹ್ಟೂ ವಾವ್) ಹೇಳಿಕೊಂಡಿದೆ.