ತಿರುವನಂತಪುರಂ: ಸೋಲಿನ ಭೀತಿಯಿಂದ ಚುನಾವಣೆಗೂ ಮುನ್ನವೇ ಸಿಪಿಎಂ ಹಿಂಸಾಚಾರ ಆರಂಭಿಸಿದೆ. ಬಹಿರಂಗ ಪ್ರಚಾರ ಮುಗಿದ ನಂತರ ಸಿಪಿಎಂ ಉದ್ದೇಶಪೂರ್ವಕವಾಗಿ ಹಲವೆಡೆ ಹಿಂಸಾಚಾರ ನಡೆಸಿದೆ ಎಂದು ವಿ.ಡಿ.ಸತೀಶನ್ ಆರೋಪಿಸಿದ್ದಾರೆ.
ಕರುನಾಗಪಲ್ಲಿ ಶಾಸಕ ಸಿ.ಆರ್. ಮಹೇಶ್ ಮೇಲೆ ಸಿಪಿಎಂ ದಾಳಿಕೋರರು ಕಲ್ಲು ತೂರಾಟ ನಡೆಸಿದ್ದರಿಂದ ಮಹೇಶ್ ಅವರ ತಲೆ ಮತ್ತು ಎದೆಗೆ ಗಾಯವಾಗಿದೆ.
ಹಲವಾರು ಕಾಂಗ್ರೆಸ್ ಯುಡಿಎಫ್ ಕಾರ್ಯಕರ್ತರೂ ಗಾಯಗೊಂಡಿದ್ದಾರೆ. ಶಾಸಕ ಹಾಗೂ ಕಾರ್ಯಕರ್ತರ ಮೇಲಿನ ಹಲ್ಲೆ ವಿರುದ್ಧ ಚುನಾವಣಾ ಆಯೋಗ ಕಠಿಣ ಕ್ರಮ ಕೈಗೊಳ್ಳಬೇಕು. ಸೋಲಿನ ಭೀತಿಯಿಂದ ಪಿಪಿಎಂ ಹಿಂಸಾಚಾರಕ್ಕೆ ತಿರುಗಿದೆ ಎಂದು ಅವರು ಹೇಳಿದರು.
ಮತದಾನ ಮುಗಿಯುವವರೆಗೂ ಹಿಂಸಾಚಾರ ಮುಂದುವರಿಯುವ ಸಾಧ್ಯತೆ ಇದೆ. ರಾಜ್ಯಾದ್ಯಂತ ಪೋಲೀಸರು ಕಟ್ಟೆಚ್ಚರ ವಹಿಸಬೇಕು. ಸಿಪಿಎಂನ ಹಿಂಸಾತ್ಮಕ ರಾಜಕಾರಣಕ್ಕೆ ಕೇರಳದ ಜನತೆ ಚುನಾವಣೆಯಲ್ಲಿ ತಕ್ಕ ಉತ್ತರ ನೀಡಲಿದ್ದಾರೆ ಎಂದು ವಿ.ಡಿ. ಸತೀಶನ್ ಹೇಳಿದರು.