ಮುಳ್ಳೇರಿಯ: ಪ್ರೆಂಡ್ಸ್ ಕ್ಲಬ್ (ರಿ.) ಮುಕ್ಕೂರು ಕ್ಲಬ್ ನಲ್ಲಿ ತುಲು ಲಿಪಿ ನಾಮಫಲಕವನ್ನು ಜೈ ತುಲುನಾಡ್ ಸಂಘಟನೆ ಕಾಸರಗೋಡು ವಲಯದ ಸಹಕಾರದಲ್ಲಿ ಕ್ಲಬ್ ನ ಗೌರವಾದ್ಯಾಕ್ಷ ಜಯಕರ ರೈ ಮುಕ್ಕೂರು ಗುತ್ತು ಅನಾವರಣಗೊಳಿಸಿ ಉದ್ಘಾಟಿಸಿದರು. ಈ ವೇಳೆಯಲ್ಲಿ ಕ್ಲಬ್ ನ ಅಧ್ಯಕ್ಷ ದಿನೇಶ್ ಸುವರ್ಣ, ಚನಿಯಪ್ಪ ಪೂಜಾರಿ, ಅರಸಪ್ಪ ಪೂಜಾರಿ ಹಾಗೂ ಜೈ ತುಲುನಾಡ್(ರಿ.) ಕಾಸ್ರೋಡ್ ಘಟಕದ ಮಾಜಿ ಅಧ್ಯಕ್ಷ ಹರಿಕಾಂತ್ ಸಾಲ್ಯಾನ್, ಕಾರ್ಯದರ್ಶಿ ಜಗನ್ನಾಥ ಕಂಡತ್ತೋಡಿ, ತುಲು ಸಾಹಿತಿ ವಿಜಯರಾಜ್ ಪುಣಿಂಚಿತ್ತಾಯ, ಕೋಶಾಧಿಕಾರಿ ಉತ್ತಮ್ ಹಾಗೂ ಇನ್ನಿತರ ಕಾರ್ಯಕರ್ತರು ಉಪಸ್ಥಿತರಿದ್ದರು.
ಕಾರ್ಯಕ್ರಮದ ನಿರೂಪಣೆಯನ್ನು ನಡೆಸಿಕೊಟ್ಟ ಕ್ಲಬ್ ನ ಪದಾಧಿಕಾರಿ ಅಮೃತ್ ರಾಜ್ ರೈ ತಾವು ಕ್ಲಬ್ ನ ನಾಮಫಲಕವನ್ನು ತುಲು ಲಿಪಿಯಲ್ಲಿ ಬರೆಯುವ ಆಸೆಯು ನಮ್ಮ ಬಹುದಿನಗಳ ಕನಸಾಗಿತ್ತು, ಆದರೆ ಅದಕ್ಕೆ ಬೇಕಾದ ಮಾರ್ಗದರ್ಶನ ಲಭ್ಯವಾಗದೆ ಅಸೆಯಾಗಿಯೇ ಉಳಿದಿತ್ತು. ಕಳೆದ ತಿಂಗಳು ಕಜಮಲೆ ದೇವಸ್ಥಾನದಲ್ಲಿ ಜೈ ತುಲುನಾಡ್(ರಿ.) ಕಾಸ್ರೋಡ್ ಘಟಕದ ಸಹಕಾರದಿಂದ ಅಳವಡಿಸ ತುಲು ನಾಮಫಲಕವನ್ನು ನೋಡಿ, ನಮಗೂ ಕೂಡಾ ಅದೇ ಸಂಘಟನೆಯ ಮೂಲಕ ಕ್ಲಬ್ ನ ತುಲು ನಾಮಫಲಕ ಅಳವಡಿಸುವಲ್ಲಿ ಯಶಸ್ವಿಯಾದೆವು. ಹಾಗು ಇನ್ನುಮುಂದೆ ನಮ್ಮ ಫ್ರೆಂಡ್ಸ್ ಕ್ಲಬ್ (ರಿ.) ಮುಕ್ಕೂರು ಸದಸ್ಯರು ತುಲು ಭಾμÉ, ಲಿಪಿ ಮತ್ತು ಸಾಹಿತ್ಯ ಉಳಿವಿಕೆಗಾಗಿ ನಾವು ಪರಿಶ್ರಮಿಸುತ್ತೇವೆ ಎಂದರು.
ಈ ವೇಳೆಯಲ್ಲಿ ಕಾಸ್ರೋಡ್ ನ ಖ್ಯಾತ ಮೈಕ್ರೋ ಆರ್ಟಿಸ್ಟ್ ವೆಂಕಟೇಶ್ ಪುಟ್ಟ ಇವರಿಗೆ ಜೈ ತುಲುನಾಡ್ (ರಿ.) ಕಾಸ್ರೋಡ್ ಘಟಕದ ವತಿಯಿಂದ ಸನ್ಮಾನ ಮಾಡಲಾಯಿತು. ಕಾರ್ಯಕ್ರಮಕ್ಕೆ ಫ್ರೆಂಡ್ಸ್ ಕ್ಲಬ್ (ರಿ.) ಮುಕ್ಕೂರು ಕ್ಲಬ್ ನ ಪದಾಧಿಕಾರಿ ದೀಪಕ್ ರೈ ವಂದಿಸಿದರು.