ಕಾಸರಗೋಡು: ಜಿಲ್ಲಾ ಪಕ್ಷಿಯಾದ ಬಿಳಿಹೊಟ್ಟೆಯ ಸಮುದ್ರ ಗಿಡುಗ ಮತದಾನದ ಸಂದೇಶದೊಂದಿಗೆ ಜಿಲ್ಲಾಧಿಕಾರಿ ಕಚೇರಿ ಹಾಗೂ ಸುತ್ತಮುತ್ತಲಿನ ಪರಿಸರದಲ್ಲಿ ಸಂಚರಿಸಿತು. ಸ್ವೀಪ್ ಮತದಾರರ ಜಾಗೃತಿ ಕಾರ್ಯಕ್ರಮದ ಭಾಗವಾಗಿ ಬಿಳಿಹೊಟ್ಟೆಯ ಕಡಲಗಿಡುಗನ ವೇಷ ಜಿಲ್ಲಾ ಕಛೇರಿಗೆ ಬಂದಿರುವುದು ಆಕರ್ಷಣೀಯವಾಯಿತು. ಲೋಕಸಭಾ ಚುನಾವಣೆಯ ನಿಮಿತ್ತ ಜಿಲ್ಲಾಧಿಕಾರಿ ಕಚೇರಿಗೆ ಬಿಳಿಹೊಟ್ಟೆಯ ಸಮುದ್ರ ಗಿಡುಗ ಬಂದಿಳಿದಿರುವುದು ಗಮನಾರ್ಹವಾಯಿತು.
ಜಿಲ್ಲಾಧಿಕಾರಿ ಕೆ.ಇನ್ಬಾಶೇಖರ್ ಉದ್ಘಾಟಿಸಿದರು. ಕಾಸರಗೋಡು ಸಹಾಯಕ ಜಿಲ್ಲಾಧಿಕಾರಿ ದಿಲೀಪ್ ಕೆ ಕೈನಿಕರ ಮತ್ತು ಸ್ವೀಪ್ ಜಿಲ್ಲಾ ನೋಡಲ್ ಅಧಿಕಾರಿ ಟಿ.ಟಿ.ಸುರೇಂದ್ರನ್ ಅಭಿಯಾನದ ನೇತೃತ್ವ ವಹಿಸಿದ್ದರು. ಜಿಲ್ಲಾಧಿಕಾರಿ ಕಛೇರಿ ಹಾಗು ಪರಿಸರ ಪ್ರದೇಶದಲ್ಲಿ ಸ್ವೀಪ್ ನೇತೃತ್ವದಲ್ಲಿ ಮತದಾರರ ಜಾಗೃತಿ ಮೂಡಿಸಲಾಯಿತು.