ಕಾಸರಗೋಡು : ಲೋಕಸಭಾ ಚುನಾವಣೆಯ ಕ್ಷೇತ್ರದ ಪೋಸ್ಟಲ್ ಬ್ಯಾಲೆಟ್ ಚಟುವಟಿಕೆ ಸುಗಮಗೊಳಿಸುವ ನಿಟ್ಟಿನಲ್ಲಿ ತಯಾರಿಸಲಾದ ಅಬ್ಸೆಂಟಿ ವೋಟರ್ಸ್ ಮೋನಿಟರಿಂಗ್ ಸಿಸ್ಟಂ(ಎವಿಎಂಎಸ್)ಆ್ಯಪನ್ನು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಕೆ. ಇನ್ಬಾಶೇಖರ್ ಬಿಡುಗಡೆಗೊಳಿಸಿದರು. ಸಹಾಯಕ ಜಿಲ್ಲಾಧಿಕಾರಿ ಆರ್.ಆರ್.ಪಿ. ಶಾಜು ಎವಿಎಂಎಸ್ ಅ್ಯಪ್ ಅಭಿವೃದ್ಧಿಪಡಿಸಿದ್ದಾರೆ.
ಜಿಲ್ಲಾಧಿಕಾರಿ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಕಾಞಂಗಾಡು ಮಂಡಲದ ಎಆರ್‍ಒ ಆಗಿರುವ ಅಪರ ಜಿಲ್ಲಾಧಿಕಾರಿ ಸುಫಿಯಾನ್ ಅಹಮದ್, ತೃಕ್ಕರಿಪುರ ಮಂಡಲದ ಎಆರ್‍ಒ ಆಗಿರುವ ಸಹಾಯಕ ಜಿಲ್ಲಾಧಿಕಾರಿ ಆರ್.ಆರ್.ಪಿ.ಶಾಜು, ಸಹಾಯಕ ಜಿಲ್ಲಾಧಿಕಾರಿ ದಿಲೀಪ್ ಕೈನಿಕರ, ಅಂಚೆ ಮತಯಂತ್ರ ನೋಡಲ್ ಅಧಿಕಾರಿ ಎಂಡೋಸಲ್ಫಾನ್ ಸೆಲ್ ಡೆಪ್ಯುಟಿ ಕಲೆಕ್ಟರ್ ಪಿ. ಸುರ್ಜಿತ್ ಉಪಸ್ಥಿತರಿದ್ದರು.