ತಿರುವನಂತಪುರಂ: ರಾಜ್ಯ ಪೋಲೀಸ್ ಇಲಾಖೆ ತೀವ್ರ ಆರ್ಥಿಕ ಸಂಕಷ್ಟದಲ್ಲಿದೆ. ಸರ್ಕಾರ ನಿಗದಿಪಡಿಸಿದ ಹಣವನ್ನೂ ನೀಡದ ಕಾರಣ ವಾಹನಗಳ ಬಳಕೆ ಸೇರಿದಂತೆ ದೈನಂದಿನ ಚಟುವಟಿಕೆಗಳು ಸ್ಥಗಿತಗೊಂಡಿವೆ.
ಹೆಚ್ಚಿನ ಹಣ ನೀಡುವಂತೆ ಡಿಜಿಪಿ ಅವರು ಸರ್ಕಾರಕ್ಕೆ ಪತ್ರ ಬರೆದಿದ್ದರೂ ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂಬ ಟೀಕೆ ವ್ಯಕ್ತವಾಗಿದೆ.
ರಾಜ್ಯ ಸರ್ಕಾರ ಅತ್ಯಂತ ಆರ್ಥಿಕ ಮುಗ್ಗಟ್ಟು ಎದುರಿಸುತ್ತಿದೆ. ಪಂಪ್ ಮಾಲೀಕರಿಗೆ ಬರಬೇಕಾಗಿದ್ದ ಮೊತ್ತ ಸುಮಾರು 200 ಕೋಟಿ ರೂ. ಈ ಹಣವನ್ನು ತುರ್ತಾಗಿ ಪಾವತಿಸಬೇಕು ಎಂದು ಮಾಲೀಕರು ಸರ್ಕಾರ ಹಾಗೂ ಮುಖ್ಯ ಕಾರ್ಯದರ್ಶಿಗಳಿಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ. ಇದರೊಂದಿಗೆ ಪಂಪ್ ಮಾಲೀಕರ ಸಂಘವು ಇಂಧನ ನೀಡುವುದಿಲ್ಲ ಎಂದು ರಾಜ್ಯ ಪೋಲೀಸ್ ಮುಖ್ಯಸ್ಥರಿಗೆ ಲಿಖಿತವಾಗಿ ತಿಳಿಸಿದೆ.
ಇದರೊಂದಿಗೆ ಪೋಲೀಸ್ ಮುಖ್ಯಸ್ಥರು ಮತ್ತೆ ಸರ್ಕಾರವನ್ನು ಸಂಪರ್ಕಿಸಿದರು. ಆದರೆ ಸರ್ಕಾರ ಹಣ ಬಿಡುಗಡೆಗೆ ಸಿದ್ಧವಿರಲಿಲ್ಲ. ಶೇ.15ರಷ್ಟು ಮಾತ್ರ ಸರ್ಕಾರ ಮಂಜೂರು ಮಾಡಿದೆ. ಚುನಾವಣೆ ವ್ಯವಸ್ಥೆಗಾಗಿ ತುರ್ತಾಗಿ 160 ಕೋಟಿ ನೀಡಬೇಕು ಎಂದು ಸರಕಾರಕ್ಕೆ ಮತ್ತೊಂದು ಪತ್ರ ರವಾನಿಸಲಾಗಿದೆ. ಆದರೆ ಸರ್ಕಾರ ಕೇವಲ ಐದು ಕೋಟಿ ರೂ.ನೀಡಲಾಗುವುದೆಂದು ತಿಳಿಸಿದೆ.
ಆದರೆ ಸರ್ಕಾರ ಇನ್ನೂ ಐದು ಕೋಟಿ ಮಂಜೂರು ಮಾಡಿಲ್ಲ. ಸದ್ಯ ಅಧಿಕಾರಿಗಳು ತಾವಾಗಿಯೇ ಪೋಲೀಸ್ ವಾಹನಗಳಿಗೆ ಇಂಧನ ತುಂಬಿಸಿಕೊಳ್ಳುತ್ತಿದ್ದಾರೆ. ಅಲ್ಲದೆ ವಾಹನಗಳ ನಿರ್ವಹಣೆ ಸಂಪೂರ್ಣ ಸ್ಥಗಿತಗೊಂಡಿದೆ. ಪೆÇಲೀಸ್ ಕೇಂದ್ರ ಕಚೇರಿಯ ದೈನಂದಿನ ಖರ್ಚಿಗೂ ಹಣ ಹುಡುಕಲು ಹರಸಾಹಸ ಪಡುತ್ತಿದ್ದಾರೆ. ಚುನಾವಣಾ ಕಾರ್ಯಕ್ಕೆ ನಿಯೋಜನೆಗೊಂಡಿರುವ ಅಧಿಕಾರಿಗಳಿಗೆ ಸರ್ಕಾರ ಇನ್ನೂ ಟಿಎ ಮತ್ತು ಡಿಎ ನೀಡಿಲ್ಲ.