ಕಾಸರಗೋಡು: ಎಡನೀರಿನ ಕಲ್ಲುಗದ್ದೆ ಶ್ರೀ ದುರ್ಗಾಂಬಿಕಾ ಪ್ರಸನ್ನ ಸನ್ನಿಧಿಯಲ್ಲಿ ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರ ಕೃಪಾಶೀರ್ವಾದಗಳೊಂದಿಗೆ ಬ್ರಹ್ಮಶ್ರೀ ವೇದಮೂರ್ತಿ ಬಳ್ಳಪದವು ಡಾ.ಮಾಧವ ಉಪಾಧ್ಯಾಯ ಅವರ ನೇತೃತ್ವದಲ್ಲಿ, ಶ್ರೀ ಸನ್ನಿಧಿಯ ಪುರೋಹಿತರಾದ ಗಣೇಶ್ ಭಟ್ ಮುಂಡೋಡು ಅವರ ಆಚಾರ್ಯತ್ವದಲ್ಲಿ ಸಾಮೂಹಿಕ ಬ್ರಹ್ಮೋಪದೇಶ ಹಾಗು ಲೋಕ ಕಲ್ಯಾಣಾರ್ಥವಾಗಿ ಭಾನುವಾರ ನವಗ್ರಹ ಯಜ್ಞ ನಡೆಯಿತು.
ಪ್ರಾತ: ಪ್ರಾರ್ಥನೆ, ಪುಣ್ಯಾಹವಾಚನ, ಉಪನಯನ ಸಂಸ್ಕಾರ ಪ್ರಾರಂಭ, ಸಾಮೂಹಿಕ ಬ್ರಹ್ಮೋಪದೇಶ, ಯಜ್ಞ ಸಂಕಲ್ಪ, ನವಗ್ರಹ ಯಜ್ಞ, ಮಧ್ಯಾಹ್ನ ನವಗ್ರಹ ಯಜ್ಞದ ಪೂರ್ಣಾಹುತಿ, ಶ್ರೀ ದುರ್ಗಾಂಬಿಕಾ ಮಹಾಮಾತೆಯ ಸರ್ವಾಲಂಕಾರ ಮಹಾಪೂಜೆ, ಪ್ರಸನ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಅರವಿಂದ ಆಚಾರ್ಯ ಮಾಣಿಲ ಮತ್ತು ಬಳಗದವರಿಂದ `ದಾಸವಾಣಿ' ನಡೆಯಿತು.