ತಿರುವನಂತಪುರಂ: ಕೇರಳದಲ್ಲಿ ಮತದಾನ ಮಾಡಲು ಬೆಂಗಳೂರಿನ ಮತದಾರರಿಗೆ ಕೆಎಸ್‍ಆರ್‍ಟಿಸಿ ಸೌಲಭ್ಯ ಕಲ್ಪಿಸಿದೆ.
ಪ್ರಯಾಣಿಕರ ಬೇಡಿಕೆಯನ್ನು ಪರಿಗಣಿಸಿ, ಕೆಎಸ್‍ಆರ್‍ಟಿಸಿಯು ಕೇರಳದ ವಿವಿಧ ಕೇಂದ್ರಗಳಿಂದ ಬೆಂಗಳೂರು ಮತ್ತು ಮೈಸೂರಿಗೆ ಏಪ್ರಿಲ್ 20 ರಿಂದ 30 ರವರೆಗೆ ಹೆಚ್ಚುವರಿ ಸೇವೆಗಳನ್ನು ನಡೆಸುವುದಾಗಿ ಘೋಷಿಸಿದೆ.
ಏಪ್ರಿಲ್ 20 ರಿಂದ 30 ರವರೆಗೆ ಕೇರಳಕ್ಕೆ ಹೆಚ್ಚುವರಿ ಸೇವೆಗಳು:
07.46 ಪಿಎಂ ಬೆಂಗಳೂರು - ಕೋಝಿಕ್ಕೋಡ್ (ಸೂಪರ್ ಡಿಲಕ್ಸ್) - ಮೈಸೂರು, ಕುಟ್ಟ, ಮಾನಂತವಾಡಿ ಮೂಲಕ
08.16 ಪಿಎಂ ಬೆಂಗಳೂರು - ಕೋಝಿಕ್ಕೋಡ್ (ಸೂಪರ್ ಎಕ್ಸ್‍ಪ್ರೆಸ್) - ಮೈಸೂರು, ಕುಟ್ಟ, ಮಾನಂತವಾಡಿ ಮೂಲಕ
09.15 ಪಿಎಂ ಬೆಂಗಳೂರು - ಕೋಝಿಕ್ಕೋಡ್ (ಸೂಪರ್ ಎಕ್ಸ್‍ಪ್ರೆಸ್) - ಮೈಸೂರು, ಕುಟ್ಟ, ಮಾನಂತವಾಡಿ ಮೂಲಕ
06.45 ಪಿಎಂ ಬೆಂಗಳೂರು - ಎರ್ನಾಕುಳಂ (ಸೂಪರ್ ಡಿಲಕ್ಸ್) - ಸೇಲಂ, ಕೊಯಮತ್ತೂರು, ಪಾಲಕ್ಕಾಡ್ ಮೂಲಕ
07.30 ಪಿಎಂ ಬೆಂಗಳೂರು - ಎರ್ನಾಕುಳಂ (ಸೂಪರ್ ಡಿಲಕ್ಸ್) - ಸೇಲಂ, ಕೊಯಮತ್ತೂರು, ಪಾಲಕ್ಕಾಡ್ ಮೂಲಕ
06.10 ಪಿಎಂ ಬೆಂಗಳೂರು - ಕೊಟ್ಟಾಯಂ (ಸೂಪರ್ ಡಿಲಕ್ಸ್) - ಸೇಲಂ, ಕೊಯಮತ್ತೂರು, ಪಾಲಕ್ಕಾಡ್ ಮೂಲಕ
07.15 ಪಿಎಂ ಬೆಂಗಳೂರು - ಕೊಟ್ಟಾಯಂ (ಸೂಪರ್ ಡಿಲಕ್ಸ್) - ಸೇಲಂ, ಕೊಯಮತ್ತೂರು, ಪಾಲಕ್ಕಾಡ್ ಮೂಲಕ
09.45 ಪಿಎಂ ಬೆಂಗಳೂರು - ಕಣ್ಣೂರು (ಸೂಪರ್ ಡಿಲಕ್ಸ್) - ಇರಿಟ್ಟಿ ಮೂಲಕ
10.30 ಪಿಎಂ ಬೆಂಗಳೂರು - ಕಣ್ಣೂರು (ಸೂಪರ್ ಡಿಲಕ್ಸ್) - ಇರಿಟ್ಟಿ ಮೂಲಕ
08.45 ಪಿಎಂ ಬೆಂಗಳೂರು - ಮಲಪ್ಪುರಂ ಮೂಲಕ ಬೆಂಗೂರು - ಕಣ್ಣೂರು (ಸೂಪರ್ ಡಿಲಕ್ಸ್) - ಮೈಸೂರು ಮೂಲಕ ಕುಟ್ಟ
ಏಪ್ರಿಲ್ 20 ರಿಂದ 28 ರವರೆಗೆ ಕೇರಳದಿಂದ ಹೆಚ್ಚುವರಿ ಸೇವೆಗಳು:
09.15 ಪಿಎಂ ಕೋಝಿಕ್ಕೋಡ್ - ಬೆಂಗಳೂರು (ಸೂಪರ್ ಡಿಲಕ್ಸ್) - ಮನಂತವಾಡಿ, ಕುಟ್ಟ ಮೂಲಕ
10.30 ಪಿಎಂ ಕೋಝಿಕ್ಕೋಡ್ - ಬೆಂಗಳೂರು (ಸೂಪರ್ ಡಿಲಕ್ಸ್) - ಕುಟ್ಟ ಮೂಲಕ ಮಾನಂತವಾಡಿ
08.45 ಪಿಎಂ ಕೋಝಿಕ್ಕೋಡ್ - ಬೆಂಗಳೂರು (ಸೂಪರ್ ಎಕ್ಸ್‍ಪ್ರೆಸ್) - ಕುಟ್ಟ ಮೂಲಕ ಮಾನಂತವಾಡಿ
06.35 ಪಿಎಂ ಎರ್ನಾಕುಲಂ - ಬೆಂಗಳೂರು (ಸೂಪರ್ ಡಿಲಕ್ಸ್) - ಪಾಲಕ್ಕಾಡ್, ಕೊಯಮತ್ತೂರು, ಸೇಲಂ ಮೂಲಕ
07.05 ಪಿಎಂ ಎರ್ನಾಕುಳಂ - ಬೆಂಗಳೂರು (ಸೂಪರ್ ಡಿಲಕ್ಸ್) - ಪಾಲಕ್ಕಾಡ್, ಕೊಯಮತ್ತೂರು, ಸೇಲಂ ಮೂಲಕ
06.10 ಪಿಎಂ ಕೊಟ್ಟಾಯಂ - ಬೆಂಗಳೂರು (ಸೂಪರ್ ಡಿಲಕ್ಸ್) - ಪಾಲಕ್ಕಾಡ್, ಕೊಯಮತ್ತೂರು, ಸೇಲಂ ಮೂಲಕ
07.10 ಪಿಎಂ ಕೊಟ್ಟಾಯಂ - ಬೆಂಗಳೂರು (ಸೂಪರ್ ಡಿಲಕ್ಸ್) - ಪಾಲಕ್ಕಾಡ್, ಕೊಯಮತ್ತೂರು, ಸೇಲಂ ಮೂಲಕ
10.10 ಪಿಎಂ ಕಣ್ಣೂರು - ಬೆಂಗಳೂರು (ಸೂಪರ್ ಡಿಲಕ್ಸ್) - ಇರಿಟಿ ಮೂಲಕ
09.50 ಪಿಎಂ ಕಣ್ಣೂರು - ಬೆಂಗಳೂರು (ಸೂಪರ್ ಡಿಲಕ್ಸ್) - ಇರಿಟಿ ಮೂಲಕ
08.00 ಪಿಎಂ ಮಲಪ್ಪುರಂ - ಬೆಂಗಳೂರು (ಸೂಪರ್ ಡಿಲಕ್ಸ್) - ಕುಟ್ಟ, ಮೈಸೂರು ಮೂಲಕ
ಪ್ರಯಾಣಿಕರ ದಟ್ಟಣೆ ಹಾಗೂ ಬೇಡಿಕೆಯನ್ನು ಅರಿತು ನಿಗಮದ ಆದಾಯ ವೃದ್ಧಿ ಹಾಗೂ ಸಾಮಥ್ರ್ಯವನ್ನು ಗಮನದಲ್ಲಿಟ್ಟುಕೊಂಡು ಹೆಚ್ಚುವರಿ ಸೇವೆಗಳನ್ನು ನಡೆಸಬೇಕು ಎಂದು ಕಾರ್ಯನಿರ್ವಾಹಕ ನಿರ್ದೇಶಕರು (ಕಾರ್ಯಾಚರಣೆ) ಹೊರಡಿಸಿರುವ ಆದೇಶದಲ್ಲಿ ತಿಳಿಸಲಾಗಿದೆ. ಸೇವೆಯ ಅವಶ್ಯಕತೆಗೆ ಸಂಬಂಧಿಸಿದಂತೆ ಘಟಕದ ಅಧಿಕಾರಿಗಳು ಪ್ರತಿದಿನವೂ ಬೆಂಗಳೂರು ಐಸಿ ಯೊಂದಿಗೆ ಸಂವಹನ ನಡೆಸಬೇಕು. ಎಲ್ಲಾ ಹೆಚ್ಚುವರಿ ಸೇವೆಗಳಿಗೆ ಆನ್‍ಲೈನ್ ಕಾಯ್ದಿರಿಸುವಿಕೆ ಸೌಲಭ್ಯವನ್ನು ಪರಿಚಯಿಸಬೇಕು. ಎಂಡ್ ಟು ಎಂಡ್ ಫ್ಲಕ್ಸ್ ದರಗಳನ್ನು ಅಳವಡಿಸಲು ಘಟಕದ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಕಾಸರಗೋಡಿಗಿಲ್ಲ ಸೇವೆ::
ಆದರೆ, ಕೇರಳದ ಅತ್ಯುತ್ತರದ ಜಿಲ್ಲೆಯಾದ ಕಾಸರಗೋಡಿಗೆ ಯಾವುದೇ ವಿಶೇಷ ಬಸ್ ಸೌಕರ್ಯ ಏರ್ಪಡಿಸದಿರುವುದು ಅಚ್ಚರಿಮೂಡಿಸಿದೆ. ಈ ನಿಟ್ಟಿನಲ್ಲಿ ಜನರು ಧ್ವನಿಯೆತ್ತಬೇಕಿದೆ.