ಕೊಚ್ಚಿ: ರಸ್ತೆಗೆ ಅಡ್ಡಲಾಗಿ ಕಟ್ಟಿದ್ದ ಹಗ್ಗಕ್ಕೆ ಸಿಲುಕಿ ಸ್ಕೂಟರ್ ಸವಾರ ಮೃತಪಟ್ಟ ಘಟನೆ ನಡೆದಿದೆ. ಕೊಚ್ಚಿ ವಡುತಾಳ ಮೂಲದ ಮನೋಜ್ ಉಣ್ಣಿ ಮೃತರು. ಪ್ರಧಾನಿ ನರೇಂದ್ರ ಮೋದಿ ಅವರ ಭೇಟಿಯ ನಿಮಿತ್ತ ನಡೆದ ಭದ್ರತಾ ವ್ಯವಸ್ಥೆಗಳ ಭಾಗವಾಗಿ ಹಗ್ಗವನ್ನು ಕಟ್ಟಲಾಗಿತ್ತು.
ಎಸ್.ಎ.ರಸ್ತೆಯಿಂದ ಬಂದು ಎಂ.ಜಿ.ರಸ್ತೆವರೆಗೆ ಹೋಗುತ್ತಿದ್ದ ರಸ್ತೆಗೆ ಅಡ್ಡಲಾಗಿ ಕಟ್ಟಿದ್ದ ಹಗ್ಗದಲ್ಲಿ ಮನೋಜ್ ಸಿಲುಕಿ ಕೆಳಬಿದ್ದರು. ಮನೋಜ್ ತಲೆಗೆ ಪೆಟ್ಟು ಬಿದ್ದು ರಸ್ತೆಯಲ್ಲಿ ಬಿದ್ದಿದ್ದು, ತಕ್ಷಣ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಮೃತಪಟ್ಟಿದ್ದಾನೆ. ನಿನ್ನೆ ರಾತ್ರಿ ಹತ್ತು ಗಂಟೆಗೆ ಈ ಘಟನೆ ನಡೆದಿದೆ. ಮಧ್ಯರಾತ್ರಿ ಒಂದೂವರೆ ಗಂಟೆ ಸುಮಾರಿಗೆ ಮನೋಜ್ ಸಾವಿಗೆ ಶರಣಾಗಿದ್ದಾನೆ.
ಪೋಲೀಸರ ಪ್ರಕಾರ ಮನೋಜ್ ಗಎ ಕೈ ತೋರಿಸಿದರೂ ನಿಲ್ಲಿಸಲಿಲ್ಲ. ಆದರೆ ವರದಿಗಳ ಪ್ರಕಾರ ಅಲ್ಲಿ ಪೋಲೀಸರು ಇರಲಿಲ್ಲ ಎನ್ನಲಾಗಿದೆ.