ಕಾಸರಗೋಡು : ಬಿಎಂಎಸ್ ಕಾಸರಗೋಡು ಜಿಲ್ಲಾ ಸಮಿತಿ ಉಪಾಧ್ಯಕ್ಷರಾಗಿದ್ದ ವಕೀಲ, ಸುಹಾಸ್ ಸಂಸ್ಮರಣಾ ದಿನವನ್ನು ಕಾಸರಗೋಡಿನಲ್ಲಿ ಆಚರಿಸಲಾಯಿತು. ಬಿಎಂಎಸ್ ಕಾಸರಗೋಡು ಜಿಲ್ಲಾ ಸಮಿತಿ ವತಿಯಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು. 2008 ಎಪ್ರಿಲ್ 17 ರಂದು ಕಾಸರಗೋಡು ಪೇಟೆಯಲ್ಲಿರುವ ಕಛೇರಿಯ ಮುಂಭಾಗದಲ್ಲಿ ಕಿಡಿಗೇಡಿಗಳ ತಂಡವೊಂದು ಸುಹಾಸ್ ಅವರನ್ನು ಬರ್ಬರವಾಗಿ ಕೊಲೆ ನಡೆಸಿತ್ತು.
ಬಿಎಂಎಸ್ ಜಿಲ್ಲಾ ಕಚೇರಿ ವಠಾರದಲ್ಲಿ ನಡೆದ ಸಮಾರಂಭದಲ್ಲಿ ಆರೆಸ್ಸೆಸ್ ಜಿಲ್ಲಾ ಕಾರ್ಯವಾಹ ಪವಿತ್ರನ್ ಕೆ. ಕೆ. ಅವರು ಸುಹಾಸ್ ಸ್ಮøತಿಮಂಟಪಕ್ಕೆ ಪುಷ್ಪಾರ್ಚನೆ ನಡೆಸಿ, ಸಂಸ್ಮರಣಾ ಭಾಷಣ ಮಾಡಿದರು. ಬಿ. ಎಂ. ಎಸ್. ಜಿಲ್ಲಾ ಕಾರ್ಯದರ್ಶಿ ಕೆ. ವಿ. ಬಾಬು, ಬಿಎಂಎಸ್ ರಾಜ್ಯ ಉಪಾಧ್ಯಕ್ಷ ವಕೀಲ ಪಿ. ಮುರಳೀಧರನ್, ಸಂಘ ಪರಿವಾರದ ಮುಖಂಡರಾದ ರವೀಶ ತಂತ್ರಿ, ಪಿ. ರಮೇಶ್, ವಿ. ವಿ. ಬಾಲಕೃಷ್ಣನ್, ದಿನೇಶ್ ಬಂಬ್ರಾಣ, ಲೀಲಾಕೃಷ್ಣನ್ ಮುಳ್ಳೇರಿಯಾ, ಹರೀಶ್ ಕುದ್ರೆಪ್ಪಾಡಿ, ಉಪೇಂದ್ರನ್ ಕೋಟೆಕಣಿ ಮೊದಲಾದವರು ಉಪಸ್ಥಿತರಿದ್ದರು.