HEALTH TIPS

ಪ್ರಚಾರ ಸಮಾರೋಪ: ರಾಜ್ಯದ ಹಲವೆಡೆ ಸಂಘರ್ಷ

              ತಿರುವನಂತಪುರ: ಲೋಕಸಭಾ ಚುನಾವಣೆಯ ಬಹಿರಂಗ ಪ್ರಚಾರದ ಅಂತ್ಯದ ದಿನವಾದ ನಿನ್ನೆ ಸಂಜೆ ರಾಜ್ಯದ ವಿವಿಧೆಡೆ ಘರ್ಷಣೆ ನಡೆದಿದೆ. ಹಲವೆಡೆ ಪೋಲೀಸರ ಸಕಾಲಿಕ ಮಧ್ಯಪ್ರವೇಶದಿಂದ ಘಟನಾ ಸ್ಥಳ ಶಾಂತವಾಯಿತು.

ನೆಯ್ಯಾಟಿಂಗರದಲ್ಲಿ ಘರ್ಷಣೆ, ಲಾಠಿ ಚಾರ್ಜ್:

            ನೆಯ್ಯಾಟಿಂಗರಾದಲ್ಲಿ, ಪ್ರಚಾರ ಅಂತ್ಯದ ವೇಳೆ ಘರ್ಷಣೆಯ ನಂತರ ಪೋಲೀಸರು ಲಾಠಿಚಾರ್ಜ್ ಮಾಡಿದರು. ಎಲ್‍ಡಿಎಫ್ ಕಾರ್ಯಕರ್ತರು ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿದ ಬೆನ್ನಲ್ಲೇ ಯುಡಿಎಫ್ ಕಾರ್ಯಕರ್ತರ ಮೇಲೂ ಹಲ್ಲೆ ನಡೆದಿದೆ.

             ಲಾಠಿ ಬೀಸಿದ ನಂತರ ಕಾಂಗ್ರೆಸ್ ಕಾರ್ಯಕರ್ತರು ಪೆÇಲೀಸರ ವಿರುದ್ಧ ಹಿಂಸಾಚಾರ ನಡೆಸಿದರುಷೀ ವೇಳೆ ಮಳೆ ಸುರಿಯುತ್ತಿದ್ದ ಕಾರಣ ಕಾಂಗ್ರೆಸ್ ಕಾರ್ಯಕರ್ತರು ಕೆಎಸ್‍ಆರ್‍ಟಿಸಿ ಬಸ್ ಮೇಲೆ ಹತ್ತಿ ಘೋಷಣೆ ಕೂಗಿದರು. ಕೆಎಸ್‍ಆರ್‍ಟಿಸಿ ಬಸ್‍ಗೂ ಹಾನಿಯಾಗಿದೆ. ಬಸ್ ನಿಲ್ಲಿಸಿದ್ದೇ ಸಂಘರ್ಷಕ್ಕೆ ಕಾರಣ.

ಕರುನಾಗಪಳ್ಳಿಯಲ್ಲಿ ಸಂಘರ್ಷ:

            ಕರುನಾಗಪಳ್ಳಿಯ ಪ್ರಚಾರ ಸಮಾರೋಪದಲ್ಲಿ ಎಡಪಕ್ಷಗಳ ಕಾರ್ಯಕರ್ತರು ಮತ್ತು ಯುಡಿಎಫ್ ಕಾರ್ಯಕರ್ತರ ನಡುವೆ ಘರ್ಷಣೆ ನಡೆದಿದೆ. ಶಾಸಕ ಸಿ.ಆರ್.ಮಹೇಶ್  ಗಾಯಗೊಂಡಿದ್ದಾರೆ. ಸಿಐ ಸೇರಿದಂತೆ ನಾಲ್ವರು ಪೋಲೀಸರಿಗೂ ಗಾಯಗಳಾಗಿವೆ. ಆಗ ಪೆÇಲೀಸರು ಅಶ್ರುವಾಯು ಸಿಡಿಸಿದ್ದು, ಘರ್ಷಣೆ ವೇಳೆ ಸಿಪಿಎಂ ರಾಜ್ಯ ಸಮಿತಿ ಸದಸ್ಯೆ ಸೂಸನ್ ಕೋಡಿ ಕೂಡ ಗಾಯಗೊಂಡಿದ್ದಾರೆ. ಕರುನಾಗಪಳ್ಳಿ ಎಸಿಪಿ ಕೂಡ ಗಾಯಗೊಂಡಿದ್ದಾರೆ.

ಪತ್ತನಾಪುರಂನಲ್ಲಿ : 

             ಕೊಲ್ಲಂ ಪತ್ತನಾಪುರಂನಲ್ಲಿ ಯುಡಿಎಫ್ ಮತ್ತು ಎಲ್ ಡಿಎಫ್ ಕಾರ್ಯಕರ್ತರ ನಡುವೆ ಘರ್ಷಣೆ. ಧ್ವನಿವರ್ಧಕ ನಿಲ್ಲಿಸುವ ಬಗ್ಗೆ ವಾಗ್ವಾದ ನಡೆಯಿತು. 

ಮಲಪ್ಪುರಂನಲ್ಲಿ ಸಂಘರ್ಷ:

             ಮಲಪ್ಪುರಂನಲ್ಲಿ ನಡೆದ ಸಮಾರೋಪ ವೇಳೆ ಎಲ್‍ಡಿಎಫ್ ಮತ್ತು ಯುಡಿಎಫ್ ಕಾರ್ಯಕರ್ತರು ಹೊಡೆದಾಡಿಕೊಂಡಿದ್ದಾರೆ. ಪೋಲೀಸರು ಮಧ್ಯ ಪ್ರವೇಶಿಸಿ ಪರಿಸ್ಥಿತಿಯನ್ನು ಹತೋಟಿಗೆ ತಂದರು.


              ಕಲ್ಪಟ್ಟಾದಲ್ಲಿ ಎಲ್‍ಡಿಎಫ್ ಮತ್ತು ಡಿಎಂಕೆ ನಡುವೆ ಘರ್ಷಣೆ:

        ಕಲ್ಪಟ್ಟಾದಲ್ಲಿ ಎಲ್‍ಡಿಎಫ್ ಕಾರ್ಯಕರ್ತರು ಮತ್ತು ಡಿಎಂಕೆ ಕಾರ್ಯಕರ್ತರ ನಡುವೆ ಘರ್ಷಣೆ ನಡೆದಿದೆ. ಡಿಎಂಕೆ ಕಾರ್ಯಕರ್ತರ ಧ್ವಜ ಹರಿದಿದೆ. ಪೋಲೀಸರು ಮಧ್ಯ ಪ್ರವೇಶಿಸಿ ಡಿಎಂಕೆ ಕಾರ್ಯಕರ್ತರನ್ನು ವಾಪಸ್ ಕಳುಹಿಸಿದರು. ಯುಡಿಎಫ್‍ನ ಸಮಾರೋಪ ಸಮಾವೇಶದಲ್ಲಿ  ಡಿಎಂಕೆ ಕಾರ್ಯಕರ್ತರು ಭಾಗವಹಿಸಿ ವಾಹನದೊಂದಿಗೆ ಎಲ್‍ಡಿಎಫ್ ರ್ಯಾಲಿ ತಲುಪಿದ್ದು ಸಂಘಷರ್Àಕ್ಕೆ ಕಾರಣವಾಗಿತ್ತು.

ತೊಡುಪುಳದಲ್ಲಿ ಸಂಘರ್ಷ:

               ತೊಡುಪುಳದಲ್ಲಿ ನಡೆದ ಚುನಾವಣೆ ಪ್ರಚಾರ ಸಮಾರೋಪದಲ್ಲಿ ಎಲ್‍ಡಿಎಫ್ ಮತ್ತು ಯುಡಿಎಫ್ ಕಾರ್ಯಕರ್ತರ ನಡುವೆ ಸ್ವಲ್ಪ ಘರ್ಷಣೆ ಉಂಟಾಗಿದ್ದು, ಯುಡಿಎಫ್ ಅಭ್ಯರ್ಥಿ ಡೀನ್ ಕುರಿಯಾಕೋಸ್ ಪರ ತಂದಿದ್ದ ಮಣ್ಣು ತೆಗೆಯುವ ಯಂತ್ರದ ಮುಂಗಡ ವಿಚಾರಕ್ಕೆ ಸಂಬಂಧಿಸಿ ಸಂಘರ್ಷ ಸೃಷ್ಟಿಯಾಯಿತು.  ಇದನ್ನು ಪೆÇಲೀಸರು ಶಾಂತಗೊಳಿಸಿದರು. ಧ್ವಜ ಅಭಿಯಾನದ ಸಮಾರೋಪದಲ್ಲಿ ಡೀನ್ ಕುರಿಯಾಕೋಸ್ ಅವರ ಪ್ರಚಾರ ವಾಹನದ ಮೇಲೆ ಎಲ್ ಡಿಎಫ್ ಕಾರ್ಯಕರ್ತರು ಧ್ವಜ ನೆಟ್ಟಿದ್ದರಿಂದ ಮತ್ತೂಂದು ವಾಗ್ವಾದ ನಡೆಯಿತು. ಎರಡೂ ಪಕ್ಷಗಳ ಮುಖಂಡರು ಹಾಗೂ ಪೆÇಲೀಸರು ಕಾರ್ಯಕರ್ತರನ್ನು ಹಿಂದಕ್ಕೆ ಕಳಿಸಿದರು. .

 ರೋಡ್ ಶೋ ವೇಳೆ ಕಾಂಗ್ರೆಸ್-2020 ಘರ್ಷಣೆ: 

       ಎರ್ನಾಕುಳಂ ಕೊಳಂಚೇರಿಯಲ್ಲಿ, ಟ್ವೆಂಟಿಟ್ವೆಂಟಿಯ ರೋಡ್ ಶೋ ಹಾದುಹೋಗುವಾಗ ತಳ್ಳಾಟ ನಡೆಯಿತು.  ಕಾಂಗ್ರೆಸ್ ಕಾರ್ಯಕರ್ತರು ರೋಡ್ ಶೋ ಪ್ರವೇಶಿಸಲು ಯತ್ನಿಸಿದ ಪರಿಣಾಮ ಪರಿಸ್ಥಿತಿ ಹದಗೆಟ್ಟಿತು. ಪೆÇಲೀಸರು ಮಧ್ಯ ಪ್ರವೇಶಿಸಿದಾಗ ಕಾರ್ಯಕರ್ತರು ಚದುರಿದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries