ಕಾಸರಗೋಡು: ಲೋಕಸಭಾ ಚುನಾವಣೆಯ ಚುನಾವಣಾ ವೆಚ್ಚ ನಿರೀಕ್ಷಕರಾಗಿ ನಿಯುಕ್ತಿಗೊಂಡಿರುವ ಆನಂದ್‍ರಾಜ್ ಅವರು ವಿದ್ಯಾನಗರ ಸಿವಿಲ್‍ಸ್ಟೇಶನ್‍ನಲ್ಲಿರುವ ಜಿಲ್ಲಾ ಮಾಹಿತಿ ಕಛೇರಿಯಲ್ಲಿ ಕಾರ್ಯಾಚರಿಸುತ್ತಿರುವ ಜಿಲ್ಲಾ ಮಟ್ಟದ ಮಾಧ್ಯಮ ಕೇಂದ್ರಕ್ಕೆ ಭೇಟಿ ನೀಡಿದರು.
ಸಾಮಾಜಿಕ ಜಾಲತಾಣಗಳ ಮೇಲೆ ನಿರಂತರ ನಿಗಾ ಇರಿಸುವುದರ ಜತೆಗೆ ವಿವಿಧ ಮುದ್ರಣ, ದೃಶ್ಯ ಮತ್ತು ಡಿಜಿಟಲ್ ಮಾಧ್ಯಮ ಮತ್ತು ಸಾಮಾಜಿಕ ಮಾಧ್ಯಮಗಳನ್ನು ನಿರಂತರ ಗಮನಿಸುವಂತೆ ಸಂಬಂಧಪಟ್ಟವರಿಗೆ ಸೂಚಿಸಿದರು. ಮುದ್ರಣ, ದೃಶ್ಯ ಮತ್ತು ಡಿಜಿಟಲ್ ಮಾಧ್ಯಮ ಮತ್ತು ಸಾಮಾಜಿಕ ಮಾಧ್ಯಮಗಳನ್ನು ಮೇಲ್ವಿಚಾರಣೆ ಮಾಡುವ ಜಿಲ್ಲಾ ಮಾಧ್ಯಮ ಕೇಂದ್ರದ ಸಿಬ್ಬಂದಿಯಿಂದ ನಿರೀಕ್ಷಕ ಆನಂದರಾಜ್ ಅವರು ಮಾಹಿತಿ ಪಡೆದುಕೊಮಡರು. ಎಂಸಿಎಂಸಿ ಸದಸ್ಯ ಕಾರ್ಯದರ್ಶಿ ಹಾಗೂ ಜಿಲ್ಲಾ ಮಾಹಿತಿ ಅಧಿಕಾರಿಯೂ ಆದ ಎಂ.ಮಧುಸೂದನನ್ ಅವರು ಮಾಧ್ಯಮ ಕೇಂದ್ರ, ಮಾಧ್ಯಮ ಪ್ರಮಾಣೀಕರಣ ಮತ್ತು ಮೇಲ್ವಿಚಾರಣಾ ಸಮಿತಿ ಮತ್ತು ಸಾಮಾಜಿಕ ಮಾಧ್ಯಮ ಕೋಶದ ಚಟುವಟಿಕೆಗಳನ್ನು ವಿವರಿಸಿದರು.
ಚುನಾವಣಾ ವೆಚ್ಚದ ನೋಡಲ್ ಅಧಿಕಾರಿಯಾಗಿರುವ ವಿ.ಚಂದ್ರನ್, ಎಂ ಸಿ ಎಂ ಸಿ ಸದಸ್ಯರಾದ ಪೆÇ್ರ.ವಿ.ಗೋಪಿನಾಥನ್, ನಿರೀಕ್ಷಕರ ನೋಡಲ್ ಅಧಿಕಾರಿ ಲಿಜೋ ಜೋಸೆಫ್, ಎಂಸಿಎಂಸಿ ವಿಭಾಗದ ಅನುವಾದಕ ಶಿಕ್ಷಕರು, ಹಾಗೂ ಎಂಸಿಎಂಸಿ ಸಿಬ್ಬಂದಿ ಉಪಸ್ಥಿತರಿದ್ದರು.