ನವದೆಹಲಿ :ಪ್ರಧಾನಿ ಮೋದಿ ಮೂರನೇ ಅವಧಿಯಲ್ಲಿ ದೇಶದಲ್ಲಿ ಎನ್‌ಆರ್‌ಸಿ ಜಾರಿಯಾಗಲಿದೆ ಎಂದು ಅನ್ನೋ ಮಾತುಗಳು ಚರ್ಚೆಯಾಗುತ್ತಿದೆ. ಇದರ ಬೆನ್ನಲ್ಲೇ ಪಾಕಿಸ್ತಾನದ ಲಷ್ಕರ್ ಇ ತೈಬಾ ಉಗ್ರ ಸಂಘಟನೆ ಕೇಂದ್ರ ಸಚಿವ ಶಂತನು ಠಾಕೂರ್‌ಗೆ ಬೆದರಿಕೆ ಹಾಕಿದೆ.
ನವದೆಹಲಿ :ಪ್ರಧಾನಿ ಮೋದಿ ಮೂರನೇ ಅವಧಿಯಲ್ಲಿ ದೇಶದಲ್ಲಿ ಎನ್‌ಆರ್‌ಸಿ ಜಾರಿಯಾಗಲಿದೆ ಎಂದು ಅನ್ನೋ ಮಾತುಗಳು ಚರ್ಚೆಯಾಗುತ್ತಿದೆ. ಇದರ ಬೆನ್ನಲ್ಲೇ ಪಾಕಿಸ್ತಾನದ ಲಷ್ಕರ್ ಇ ತೈಬಾ ಉಗ್ರ ಸಂಘಟನೆ ಕೇಂದ್ರ ಸಚಿವ ಶಂತನು ಠಾಕೂರ್‌ಗೆ ಬೆದರಿಕೆ ಹಾಕಿದೆ.
ಪಶ್ಚಿಮ ಬಂಗಾಳದಲ್ಲಿ ಎನ್‌ಆರ್‌ಸಿ ಜಾರಿಯಾದರೆ ಬಂಗಾಳ ಮಾತ್ರವಲ್ಲ ಇಡೀ ಭಾರತಕ್ಕೆ ಬೆಂಕಿ ಇಡುತ್ತೇವೆ ಎಂದು ಎಚ್ಚರಿಸಿದೆ.
ಕೇಂದ್ರದ ರಾಜ್ಯ ಖಾತೆ ಸತಿವ ಶಂತನು ಠಾಕೂರ್‌ಗೆ ಉಗ್ರ ಸಂಘಟನೆ ಲಷ್ಕರ್ ಇ ತೋಯ್ಬಾ ಪತ್ರದ ಮೂಲಕ ಬೆದರಿಕೆ ಹಾಕಿದೆ. ಪಶ್ಚಿಮ ಬಂಗಾಳದಲ್ಲಿ ಮುಸ್ಲಿಮ್ ಸಮುದಾಯಕ್ಕೆ ತೊಂದರೆ ಕೊಟ್ಟರೆ ಲಷ್ಕರ್ ಪ್ರತೀಕಾರ ತೀರಿಸಲಿದೆ. ಬಂಗಾಳ ಮಾತ್ರವಲ್ಲ, ಇಡೀ ದೇಶವನ್ನೇ ಉರಿಸುತ್ತೇವೆ ಎಂದು ಪತ್ರದಲ್ಲಿ ಬೆದರಿಕೆ ಹಾಕಲಾಗಿದೆ.
ಶಂತನು ಠಾಕೂರ್ ಇತ್ತೀಚೆಗೆ ಟಿಎಂಸಿ ನಾಯಕರಿಗೆ ನೇರ ಸವಾಲು ಹಾಕಿದ್ದರು. ಗೂಂಡಾಗಳಂತೆ ವರ್ತಿಸುವ ಟಿಎಂಸಿ ಕಾರ್ಯಕರ್ತರಿಗೆ ಪೌರತ್ವ ನೀಡುವುದಿಲ್ಲ ಎಂದು ಬೆದರಿಸಿದ್ದರು.ಈ ಹೇಳಿಕೆ ಭಾರಿ ವೈರಲ್ ಆಗಿತ್ತು. ಇದರ ಬೆನ್ನಲ್ಲೇ ಇದೀಗ ಲಷ್ಕರ್ ಇ ತೈಬಾ ಹೆಸರಿನಲ್ಲಿ ಬೆದರಿಕೆ ಪತ್ರ ಬಂದಿದೆ.