ಉಪ್ಪಳ: ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ಮಂಗಲ್ಪಾಡಿ ಪ್ರತಾಪನಗರ ನಿವಾಸಿ, ಕೊಲ್ಲಿ ಉದ್ಯೋಗಿ ಬದ್ರುಲ್ ಮುನೀರ್ ಅವರ ಮನೆಯಿಂದ ನಾಲ್ಕು ಪವನ್ ಚಿನ್ನಾಭರಣ ಮತ್ತು 35 ಸಾವಿರ ರೂ. ಕಳವು ಮಾಡಲಾಗಿದೆ. ಇದೇ ವೇಳೆ ಮನೆಗೆ ಕಳ್ಳರು ನುಗ್ಗಿದ ವಿಷಯ ತಿಳಿದು ಅಲ್ಲಿಗೆ ಬಂದ ಯುವಕನಿಗೆ ಕೋವಿ ತೋರಿಸಿ ಹಲ್ಲೆ ಮಾಡಿ ಬೆದರಿಕೆಯೊಡ್ಡಿದ ಘಟನೆ ನಡೆದಿದೆ.
ಈ ಮನೆಯ ಮುಂದೆ ಎರಡು ಬೈಕ್‍ಗಳು ನಿಂತಿರುವುದು ಕಂಡು ಬಂದ ಹಿನ್ನೆಲೆಯಲ್ಲಿ ಮೊಹಮ್ಮದ್ ರಮೀಸ್ ಗೇಟ್ ಬಳಿ ಬಂದಾಗ ಮನೆಯೊಳಗೆ ಸದ್ದು ಕೇಳಿ ಬಂತು. ಈ ಹಿನ್ನೆಲೆಯಲ್ಲಿ ಮೊಹಮ್ಮದ್ ರಮೀಸ್ ಬೊಬ್ಬೆ ಹಾಕಿದ್ದರು. ಅಷ್ಟರಲ್ಲಿ ಮನೆಯೊಳಗಿದ್ದ ಇಬ್ಬರು ಮನೆಯಿಂದ ಹೊರ ಬಂದು ಮೊಹಮ್ಮದ್ ರಮೀಸ್‍ಗೆ ಹಲ್ಲೆ ಮಾಡಿ ಕೋವಿ ತೋರಿಸಿ ಬೆದರಿಕೆಯೊಡ್ಡಿದ್ದರು. ಬೊಬ್ಬೆ ಕೇಳಿ ಸ್ಥಳೀಯರು ಬಂದಾಗ ಕಳ್ಳರು ಬೈಕ್‍ನಲ್ಲಿ ಪರಾರಿಯಾಗಿದ್ದಾರೆ. ಸ್ಥಳೀಯರು ಕಳ್ಳರನ್ನು ಹಿಂಬಾಲಿಸಿದರೂ ಪತ್ತೆಹಚ್ಚಲು ಸಾಧ್ಯವಾಗಲಿಲ್ಲ. ಸೋಂಕಾಲು ದಾರಿಯಾಗಿ ಕೈಕಂಬ ಭಾಗಕ್ಕೆ ಪರಾರಿಯಾಗಿದ್ದಾರೆ. ಮನೆಯ ಸಿಸಿ ಟಿವಿಯ ಹಾರ್ಡ್ ಡಿಸ್ಕ್‍ನ್ನು ಕಳ್ಳರು ಕೊಂಡೊಯ್ದದ್ದಾರೆ. ಟಿ.ವಿ.ಯನ್ನು ಕೊಂಡೊಯ್ಯಲು ತೆರೆದಿಟ್ಟ ಸ್ಥಿತಿಯಲ್ಲಿತ್ತು. ಕುಂಬಳೆ ಪೆÇಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.