ಪಾಲಕ್ಕಾಡ್: ಮಾರಾಟಕ್ಕೆ ತರಲಾಗಿದ್ದ ಕಾಡುಕೋಳಿಯ ಮೊಟ್ಟೆ ತನ್ನಿಂದತಾನೆ ಒಡೆದು ಮರಿಗಳು ಹೊರಬಂದ ವಿದ್ಯಮಾನ ಪಡೆದಿದೆ. ತಮಿಳುನಾಡಿನ ನಲ್ಲೇಪಿಲ್ಲಿ ಕಂಬಳಿಚುಂಗಂನಿಂದ ಅಂಗಡಿಗೆ ತಂದಿದ್ದ ಕಾಡುಕೋಳಿ ಮೊಟ್ಟೆಗಳಲ್ಲಿ ಎರಡು ಪ್ರಾಕೃತಿಕ ಬಿಸಿಗೆ ಒಡೆದು ಮರಿ ಹೊರಬಂದಿದೆ.
ಪಾಲಕ್ಕಾಡ್ ನಲ್ಲಿ ತಾಪಮಾನ 45 ಡಿಗ್ರಿ ತಲುಪಿದ್ದರಿಂದ ಮೊಟ್ಟೆಗಳನ್ನು ಫ್ರಿಡ್ಜ್ ನÀಲ್ಲಿ ಇರಿಸಬೇಕಾದೀತು ಎನ್ನುತ್ತಾರೆ ವ್ಯಾಪಾರಿಗಳು. ಮಾರಾಟಕ್ಕೆ ಬಂದಿದ್ದ ಕಾಡುಕೋಳಿಯ ಮೊಟ್ಟೆಗಳು ಕವರ್ ನೊಳಗೆ ಚಲಿಸುತ್ತಿರುವುದನ್ನು ಜನರು ಗಮನಿಸಿದ್ದಾರೆ.
ಅದನ್ನು ತೆರೆದು ನೋಡಿದಾಗ ಪ್ಯಾಕೆಟ್‍ನೊಳಗೆ ಮೊಟ್ಟೆಯ ಬದಲು ಮರಿಗಳು ಕಂಡವು. ಬಿಸಿಲಿನ ತಾಪ ಹೆಚ್ಚಾದಂತೆ ಅಚ್ಚರಿ ಎನಿಸಿದ್ದ ಹಲವು ಅನುಭವಗಳನ್ನು ಅನುಭವಿಸಬೇಕಾಗುತ್ತದೆ ಎನ್ನುತ್ತಾರೆ ಸ್ಥಳೀಯರು.