ಜೆರುಸಲೇಂ: ಅಲ್ ಜಜೀರಾ ಸುದ್ದಿವಾಹಿನಿಯ ಕಾರ್ಯಾಚರಣೆಯನ್ನು ದೇಶದಲ್ಲಿ ಸ್ಥಗಿತಗೊಳಿಸುವುದಾಗಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಸೋಮವಾರ ತಿಳಿಸಿದ್ದಾರೆ.
ಜೆರುಸಲೇಂ: ಅಲ್ ಜಜೀರಾ ಸುದ್ದಿವಾಹಿನಿಯ ಕಾರ್ಯಾಚರಣೆಯನ್ನು ದೇಶದಲ್ಲಿ ಸ್ಥಗಿತಗೊಳಿಸುವುದಾಗಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಸೋಮವಾರ ತಿಳಿಸಿದ್ದಾರೆ.
ಸುದ್ದಿವಾಹಿನಿಯನ್ನು ಸ್ಥಗಿತಗೊಳಿಸುವುದಕ್ಕೆ ಸಂಸತ್‌ನಲ್ಲಿ ಕಾನೂನು ಅಂಗೀಕಾರವಾದ ಬಳಿಕ ಬೆಂಜಮಿನ್ ಅವರು ಈ ಹೇಳಿಕೆ ನೀಡಿದ್ದಾರೆ.
'ಅಲ್ ಜಜೀರಾ ಭಯೋತ್ಪಾದಕ ಸುದ್ದಿವಾಹಿನಿಯಾಗಿದ್ದು, ಅದು ಜನರನ್ನು ಪ್ರಚೋದಿಸುವ ಕೆಲಸವನ್ನು ಮಾಡುತ್ತಿದೆ' ಎಂದು ಆರೋಪಿಸಿದ್ದಾರೆ.
ಬೆಂಜಮಿನ್ ಅವರ ಹೇಳಿಕೆಯನ್ನು ಖಂಡಿಸಿರುವ ಅಲ್ ಜಜೀರಾ, 'ನಮ್ಮ ವಿರುದ್ಧ ಇಸ್ರೇಲ್ ಪ್ರಧಾನಿ ಮಾಡಿರುವ ಪ್ರಚೋದನಾಕಾರಿ ಆರೋಪವು ಅಪಾಯಕಾರಿ ಮತ್ತು ಹಾಸ್ಯಾಸ್ಪದ ಸುಳ್ಳು' ಎಂದು ಪ್ರತಿಕ್ರಿಯಿಸಿದೆ.
'ನಮ್ಮ ಸುದ್ದಿವಾಹಿನಿಯು ವೃತ್ತಿಪರವಾಗಿ ವರದಿಗಳನ್ನು ಪ್ರಸಾರ ಮಾಡುವುದನ್ನು ಮುಂದುವರಿಸುತ್ತದೆ. ಹೀಗಾಗಿ, ನಮ್ಮ ಸಿಬ್ಬಂದಿ ಮತ್ತು ಕಚೇರಿಗಳ ಸುರಕ್ಷತೆಗೆ ಬೆಂಜಮಿನ್ ಅವರೇ ಜವಾಬ್ದಾರರಾಗಿರುತ್ತಾರೆ' ಎಂದೂ ಅಲ್ ಜಜೀರಾ ತಿಳಿಸಿದೆ.