ಕಲ್ಪಟ್ಟ: ವೆಲ್ಲಮುಂಡ ಮಾವೋವಾದಿ ಪ್ರಕರಣದಲ್ಲಿ ಆರೋಪಿ ರೂಪೇಶ್‍ಗೆ 10 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ. ನಾಲ್ಕನೇ ಆರೋಪಿ ಕನ್ಯಾಕುಮಾರಿ, ಎಂಟನೇ ಆರೋಪಿ ಬಾಬು ಇಬ್ರಾಹಿಂಗೆ ಆರು ವರ್ಷ ಮತ್ತು ಏಳನೇ ಆರೋಪಿ ಅನೂಪ್ ಮ್ಯಾಥ್ಯೂಗೆ ಎಂಟು ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ. ಕೊಚ್ಚಿ ಎನ್‍ಐಎ ನ್ಯಾಯಾಲಯದ ಈ ತೀರ್ಪು ನೀಡಿದೆ.
ಕೊಚ್ಚಿ ಎನ್‍ಐಎ ನ್ಯಾಯಾಲಯ ನಾಲ್ವರು ಆರೋಪಿಗಳನ್ನು ತಪ್ಪಿತಸ್ಥರೆಂದು ಘೋಷಿಸಿತ್ತು. ರೂಪೇಶ್, ಕನ್ಯಾಕುಮಾರಿ, ಅನೂಪ್ ಮತ್ತು ಬಾಬು ಇಬ್ರಾಹಿಂ ಅವರಿಗೆ ಎನ್‍ಐಎ ವಿಶೇಷ ನ್ಯಾಯಾಧೀಶ ಕೆ ಕಾಮೆಣಿಸೆನ್ ಶಿಕ್ಷೆ ವಿಧಿಸಿದ್ದಾರೆ.
ವಯನಾಡ್ ವೆಲ್ಲಮುಂಡಾದಲ್ಲಿ ಹಿರಿಯ ಸಿವಿಲ್ ಪೋಲೀಸ್ ಅಧಿಕಾರಿ ಎ.ಬಿ.ಪ್ರಮೋದ್ ಅವರಿಗೆ ಶಸ್ತ್ರಸಜ್ಜಿತ ತಂಡವೊಂದು ಬೆದರಿಕೆ ಹಾಕಿ, ಮಾವೋವಾದಿಗಳ ಕರಪತ್ರಗಳನ್ನು ಹಂಚಿ, ಪೋಸ್ಟರ್ ಅಂಟಿಸಿದ ಪ್ರಕರಣದಲ್ಲಿ ನಾಲ್ವರು ಆರೋಪಿಗಳಿಗೆ ಕೊಚ್ಚಿ ಎನ್‍ಐಎ ನ್ಯಾಯಾಲಯ ಶಿಕ್ಷೆ ವಿಧಿಸಿದೆ. ಎಂಟು ಜನರಿದ್ದ ಪ್ರಕರಣದಲ್ಲಿ ಉಳಿದ ಮೂವರು ಆರೋಪಿಗಳನ್ನು ಇನ್ನೂ ಬಂಧಿಸಬೇಕಿದೆ.
ರೂಪೇಶ್ ಮತ್ತು ಕನ್ಯಾಕುಮಾರಿ ವಿರುದ್ಧ ಪಿತೂರಿ ಮತ್ತು ಭಯೋತ್ಪಾದಕ ಚಟುವಟಿಕೆಗಳು ಸಾಬೀತಾಗಿದೆ ಎಂದು ನ್ಯಾಯಾಲಯ ಹೇಳಿದೆ. ಅನೂಪ್ ಮತ್ತು ಬಾಬು ಇಬ್ರಾಹಿಂ ವಿರುದ್ಧ ಯುಎಪಿಎ ಕಾಯ್ದೆಯ ಸೆಕ್ಷನ್ 38 ಮತ್ತು 39 ಕಲಮಿನಡಿ ಸಹಾಯಮಾಡಿದ ಪ್ರಕರಣದ ಮೇಲೆ ಶಿಕ್ಷೆ ವಿಧಿಸಲಾಗಿದೆ.