ಉಪ್ಪಳ: ಕೊಂಡೆವೂರಿನ ಶ್ರೀ ನಿತ್ಯಾನಂದ ಯೋಗಾಶ್ರಮದಲ್ಲಿ ಮಾ. 23ರಂದು ಸೂಯಾಸ್ತಕ್ಕೆ ಆರಂಭಗೊಂಡ ಅಖಂಡ ಭಜನಾ ಸಪ್ತಾಹ ಭಾನುವಾರ ಸಮಾರೋಪಗೊಂಡಿತು. ಉಪ್ಪಳ ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ ಅವರ ದಿವ್ಯ ಉಪಸ್ಥಿತಿಯಲ್ಲಿ ಮಂಗಳಾಚರಣೆ ನಡೆಯಿತು. ಈ ಸಂದರ್ಭ ನೂರಾರು ಮಂದಿ ಭಜಕರು, ಭಕ್ತಾದಿಗಳು ಪಾಲ್ಗೊಮಡಿದ್ದರು. 170 ಕ್ಕೂ ಹೆಚ್ಚಿನ ಭಜನಾ ತಂಡಗಳು ಭಜನಾಸಪ್ತಾಹದಲ್ಲಿ ಭಾಗವಹಿಸಿ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ್ದರು.