ತಿರುವನಂತಪುರಂ: ಅಂತಾರಾಜ್ಯ ಮಾದಕ ವಸ್ತು ಕಳ್ಳಸಾಗಣೆ ತಂಡದ ಇಬ್ಬರನ್ನು ಕೇರಳ ಪೊಲೀಸರು ಬಂಧಿಸಿದ್ದಾರೆ.
ಮಲಪ್ಪುರಂ ಒರಕಂ ನೆಲ್ಲಿಪರಂ ನಿವಾಸಿ ತಪ್ಸೀನಾ(33) ಮತ್ತು ಆಕೆಯ ಸ್ನೇಹಿತ ಕೊಂಡೊಟ್ಟಿ ಪುಲಿಕಲ್ ನ ಮುಬಾಶಿರ್ (36) ಬಂಧಿತರು.
ಬಂಧಿತರು ಬೆಂಗಳೂರಿನಿಂದ ಮಲಪ್ಪುರಂ ಜಿಲ್ಲೆಗೆ ಮಾದಕ ವಸ್ತು ಕಳ್ಳಸಾಗಣೆ ಮಾಡುವ ದಂಧೆ ತಂಡದ ಪ್ರಮುಖರು. ಪ್ರಯಾಣದ ವೇಳೆ ತಪಾಸಣೆ ತಪ್ಪಿಸಲು ದಂಪತಿ ಪ್ರಯಾಣ ಬೆಳೆಸುವ ಸೋಗಿನಲ್ಲಿ ಡ್ರಗ್ಸ್ ಸಾಗಾಟ ಮಾಡಲಾಗುತ್ತಿತ್ತು. ಇವರಿಂದ ಈ ಹಿಂದೆಯೂ ಹಲವು ಬಾರಿ ಮಾದಕ ದ್ರವ್ಯ ಸಾಗಾಟ ಮಾಡಿರುವುದು ತಿಳಿದು ಬಂದಿದೆ. ಇವರು ಸೇರಿರುವ ಗ್ಯಾಂಗ್ ಬಗ್ಗೆ ಸ್ಪಷ್ಟ ಸೂಚನೆ ಸಿಕ್ಕಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇವರ ಮೇಲೆ ನಿಗಾ ಇಡಲಾಗಿದೆ. ಕೊಂಡೋಟಿ ಡಿವೈಎಸ್ಪಿ ಸಿದ್ದಿಕ್ ಅರಿಕೋಟ್ ಮತ್ತು ಇನ್ಸ್ ಪೆಕ್ಟರ್ ಆದಂ ಖಾನ್ ನೇತೃತ್ವದಲ್ಲಿ ಮಲಪ್ಪುರಂ ಜಿಲ್ಲಾ ಪೊಲೀಸ್ ವರಿಷ್ಠ ಶಶಿಕುಮಾರ್ ಅವರಿಗೆ ದೊರೆತ ಖಚಿತ ಮಾಹಿತಿಯ ಮೇರೆಗೆ ಸಬ್ ಇನ್ಸ್ ಪೆಕ್ಟರ್ ಅಲ್ಪಿ ಥಾಮಸ್ ವರ್ಕಿ ದನ್ಸಾಫ್ ತಂಡದ ಸದಸ್ಯರು ಹಾಗೂ ಅರಿಕೋಟ್ ಠಾಣೆಯ ಅಧಿಕಾರಿಗಳಾದ ಬಿಜು, ವಿನೋದ್ ಕುಮಾರ್, ಫಾಸಿಲಾ, ಕಬೀರ್. ಆರೋಪಿಗಳನ್ನು ಬಂಧಿಸಿ ತನಿಖೆ ಕೈಗೊಂಡಿದ್ದಾರೆ.