ಬದಿಯಡ್ಕ: ಕುಂಟಿಕಾನ ಮಠ ಶ್ರೀ ಶಂಕರನಾರಾಯಣ ದೇವಸ್ಥಾನದ ಬ್ರಹ್ಮಕಲಶೋತ್ಸವದ ಪ್ರಯುಕ್ತ ಕ್ಷೇತ್ರಕ್ಕೆ ಸಂಬಂಧಪಟ್ಟ ಮುಂಡಿಗೆ ವನದಲ್ಲಿ ಭಾನುವಾರ ಕುಂಟಿಕಾನ ದೂಮಾವತೀ ದೈವಕ್ಕೆ ಪುದ್ವಾರು ಮೆಚ್ಚಿನ ನೇಮ ಅರಸಿನಹುಡಿ ಪ್ರಸಾದ ವಿತರಣೆ, ರಾತ್ರಿ ಕುಂಟಿಕಾನಮಠದಲ್ಲಿ ಶ್ರೀದೇವರಿಗೆ ಕಾರ್ತಿಕಪೂಜೆ, ಅನ್ನಸಂತರ್ಪಣೆ ನಡೆಯಿತು.
ಶನಿವಾರ ರಾತ್ರಿ ಶ್ರೀಕ್ಷೇತ್ರದಿಂದ ಭಂಡಾರ ಹೊರಟು ಮುಂಡಿಗೆ ವನದಲ್ಲಿ ತೊಡಂಗಲ್, ರಾತ್ರಿ ಕ್ಷೇತ್ರದಲ್ಲಿ ಅನ್ನಸಂತರ್ಪಣೆ ನಡೆಯಿತು. ಏ.29 ಇಂದು ಬೆಳಗ್ಗೆ 9 ಕ್ಕೆ ಶ್ರೀಕ್ಷೇತ್ರದ ಬಡಗುಬಾಗಿಲಿನಲ್ಲಿ ರಾಜ್ಯದೈವದ ನೇಮ, ರಾತ್ರಿ ಕಾರ್ತಿಕ ಪೂಜೆ ನಡೆಯಿತು. ಮಂಗಳವಾರ ಬೆಳಗ್ಗೆ 6 ಕ್ಕೆ ಇರ್ವೆರ್ ಉಳ್ಳಾಕುಲು, ಕುಂಟಿಕಾನ ಧೂಮಾವತಿ ದೈವಗಳ ನೇಮ, ಅರಸಿನಹುಡಿ ಪ್ರಸಾದ ವಿತರಣೆ ನಡೆಯಲಿದೆ. ಏ.26ರಂದು ಶ್ರೀದೇವರಿಗೆ ಬ್ರಹ್ಮಕಲಶೋತ್ಸವವು ಜರಗಿತ್ತು.