ಕಣ್ಣೂರು: ವಡಗರ ಗಡಿ ದಾಟಿ ಮಾಹಿ ತಲುಪಿದರೆ ಸಿಪಿಎಂ ಹಾಗೂ ಕಾಂಗ್ರೆಸ್ ಒಂದೇ ಬಟ್ಟಲಲ್ಲಿ ದೋಸೆ-ಆಹಾರ ಸೇವಿಸುವುದನ್ನು ಕಾಣಬಹುದು. ವಡಗÀರದಲ್ಲಾದರೋ ಭಾರೀ ಪೈಪೋಟಿ.ರಾಜಕೀಯ ಪಕ್ಷಗಳ ಇಂತಹ ಇಬ್ಬಗೆ ನೀತಿಗಳು ಅಚ್ಚರಿ ಮತ್ತು ದುರೂಹತೆಯನ್ನೂ ಬಿಂಬಿಸುತ್ತದೆ.
ಎರಡೂ ಪಕ್ಷಗಳ ದ್ವಂದ್ವ ನಿಲುವು ಚರ್ಚೆಯಾಗಿದೆ. ಮಾಹಿ ಒಳಗೊಂಡ ಪುದುಚೇರಿ ಲೋಕಸಭಾ ಕ್ಷೇತ್ರದಲ್ಲಿ ಎನ್‍ಡಿಎ ವಿರುದ್ಧ ಎರಡೂ ಪಕ್ಷಗಳು ಕೈಜೋಡಿಸಿವೆ.
ಪುದುಚೇರಿಯಲ್ಲಿ ಎನ್‍ಡಿಎ ಅಭ್ಯರ್ಥಿಯಾಗಿ ರಾಜ್ಯದ ಗೃಹ ಸಚಿವ ಹಾಗೂ ಬಿಜೆಪಿ ನಾಯಕ ಎ.ನಮಶಿವಾಯ ಅಭ್ಯರ್ಥಿ. ಕಾಂಗ್ರೆಸ್ ಅಭ್ಯರ್ಥಿ ವಿ. ವೈದ್ಯಲಿಂಗ ಸ್ಪರ್ಧಿಸುತ್ತಿದ್ದು, ಸಿಪಿಎಂ ಬೆಂಬಲ ನೀಡಿದೆ. ನಾಪತ್ರಗಳನ್ನು ಸಲ್ಲಿಸುವಾಗ, ಸಿಪಿಎಂ ಮತ್ತು ಸಿಪಿಐ ಮುಖಂಡರೊಂದಿಗೆ ಮುಸ್ಲಿಂ ಲೀಗ್ ಮತ್ತು ಕಾಂಗ್ರೆಸ್ ಡಿಎಂಕೆ ನಾಯಕರು ಸಹ ಹಾಜರಿದ್ದರು.
ಮಾಹಿಯಲ್ಲಿರುವ ಪಕ್ಷದ ಘಟಕವು ಸಿಪಿಎಂ ಕಣ್ಣೂರು ಜಿಲ್ಲಾ ಸಮಿತಿಯ ಒಂದು ಭಾಗವಾಗಿದೆ. ಜಿಲ್ಲಾ ಸಮಿತಿಯಡಿ ಕಣ್ಣೂರಿನಲ್ಲಿ ಒಂದು ನಿಲುವು, ಮಾಹಿಯಲ್ಲಿ ಮತ್ತೊಂದು ನಿಲುವು ತಳೆದಿರುವುದು ಪಕ್ಷದ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.
ಕಣ್ಣೂರು, ವಡಕರದಲ್ಲಿ ಹೋರಾಟ ನಡೆಸುತ್ತಿರುವಾಗ ಮಾಹಿಯಲ್ಲಿ ಕಾಂಗ್ರೆಸ್‍ಗೆ ಬೆಂಬಲ ನೀಡುವುದು ಹೇಗೆ ಎಂದು ನಾಯಕತ್ವ ಗೊಂದಲದಲ್ಲಿ ಸಿಲುಕಿದೆ. ಕಾಂಗ್ರೆಸ್ ಅಭ್ಯರ್ಥಿಯನ್ನು ವಿರೋಧಿಸದಂತೆ ಸಿಪಿಎಂ ಪುದುಚೇರಿ ರಾಜ್ಯ ನಾಯಕತ್ವವು ಮಾಹಿ ನಾಯಕತ್ವಕ್ಕೆ ಸೂಚನೆ ನೀಡಿದ್ದು, ಕಣ್ಣೂರು ಜಿಲ್ಲಾ ನಾಯಕತ್ವಕ್ಕೆ ಹೊಡೆತ ಬಿದ್ದಿದೆ.