ಉನ್ನಾವ್: ಪ್ರಧಾನಿ ನರೇಂದ್ರ ಮೋದಿ ಅವರ 'ಮಂಗಳಸೂತ್ರ' ಹೇಳಿಕೆ ಕುರಿತು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿರುವ ಸಮಾಜವಾದಿ ಪಕ್ಷದ ನಾಯಕಿ ಡಿಂಪಲ್ ಯಾದವ್, 'ಪುಲ್ವಾಮಾದಲ್ಲಿ ಹತರಾದ ಸೈನಿಕರ ಪತ್ನಿಯರ ಮಂಗಳಸೂತ್ರವನ್ನು ಯಾರು ಕಿತ್ತುಕೊಂಡರು ಎಂಬುದಕ್ಕೆ ಬಿಜೆಪಿ ಉತ್ತರಿಸಬೇಕು' ಎಂದು ಆಗ್ರಹಿಸಿದರು.

'ಮಂಗಳಸೂತ್ರ ಬಗ್ಗೆ ಮಾತನಾಡುವವರು ಪುಲ್ವಾಮಾ ಘಟನೆ ಬಗ್ಗೆಯೂ ಮಾತನಾಡಬೇಕು. ಆ ಘಟನೆಯ ಹಿಂದೆ ಯಾವ ಕೈವಾಡವಿದೆ, ಘಟನೆಗೆ ಸಂಬಂಧಿಸಿದಂತೆ ಸರ್ಕಾರವು ಏನು ಕ್ರಮ ಕೈಗೊಂಡಿದೆ' ಎಂಬ ಬಗ್ಗೆ ಉತ್ತರಿಸಬೇಕು ಎಂದು ಒತ್ತಾಯಿಸಿದರು.
2019ರ ಫೆಬ್ರುವರಿಯಲ್ಲಿ ಪುಲ್ವಾಮಾದಲ್ಲಿ ಸೈನಿಕರ ವಾಹನದ ಮೇಲೆ ನಡೆದಿದ್ದ ದಾಳಿಯಲ್ಲಿ ಸಿಆರ್‌ಪಿಎಫ್‌ನ 40ಕ್ಕೂ ಅಧಿಕ ಯೋಧರು ಮೃತಪಟ್ಟಿದ್ದರು.