ಪ್ರತಿಯೊಬ್ಬರಿಗೂ ತಾವು ಸುಂದರವಾಗಿ ಕಾಣಬೇಕು, ಯವ್ವನದ ತ್ವಚೆಯೂ ಇರಬೇಕು ಎಂಬ ಆಸೆಗಳು ಇರುತ್ತದೆ. ಮುಖದ ತ್ವಚೆಯ ಮೇಲೆ ಹೆಚ್ಚು ಕಾಳಜಿ ವಹಿಸುತ್ತೇವೆ. ಆದರೂ ಚರ್ಮದಲ್ಲಿ ಸುಕ್ಕು, ನೆರೆ, ಮೊಡವೆ, ಚರ್ಮ ಕಾಂತಿಹೀನವಾಗುವಂತಹ ಸಮಸ್ಯೆಗಳನ್ನು ಎದುರಿಸುತ್ತೇವೆ. ಸಾಮಾನ್ಯವಾಗಿ ಭಾರತೀಯರು ಚರ್ಮದ ಸೌಂದರ್ಯ ಕಾಪಾಡಿಕೊಳ್ಳಲು ಮನೆಮದ್ದುಗಳಿಗೆ ಪ್ರಾಮುಖ್ಯತೆ ಕೊಡುತ್ತಾರೆ.
ನೈಸರ್ಗಿಕ ಪದಾರ್ಥಗಳಿಂದ ನಮ್ಮ ಚರ್ಮದ ಆರೋಗ್ಯ ವೃದ್ಧಿಸುತ್ತದೆ ಎಂದು ಆಯುರ್ವೇದದಲ್ಲೂ ತಿಳಿಯಬಹುದು.
ಇತ್ತೀಚೆಗೆ ಯಾವ ಪದಾರ್ಥಗಳನ್ನು ತ್ವಚೆಗೆ ಬಳಸಿದರೆ ಒಳ್ಳೆಯದು ಎಂಬ ಮಾಹಿತಿ ನಮಗೆ ಸೋಶಿಯಲ್ ಮೀಡಿಯಾಗಳಲ್ಲಿ ಸಿಗುತ್ತಿದೆ. ಅಡುಗೆ ಮನೆಯಲ್ಲಿರುವ ಪದಾರ್ಥಗಳಿಂದಲೇ ನಮ್ಮ ತ್ವಚೆಯ ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು ಎಂದು ಆಹಾರ ತಜ್ಞೆ ಸೋನಿಯಾ ನಾರಂಗ್ ಅವರು ವಿವರಿಸಿದ್ದಾರೆ.
ಹುಣಸೆ ಹಣ್ಣು-ಕೊತ್ತಂಬರಿ ಸೊಪ್ಪು
ಆಹಾರ ತಜ್ಞೆ ಸೋನಿಯಾ ನಾರಂಗ್ ಅವರ ಇನ್ ಸ್ಟಾಗ್ರಾಂ ಪೋಸ್ಟ್ ನಲ್ಲಿ ನಮ್ಮ ಚರ್ಮದ ಆರೈಕೆ ಬಗ್ಗೆ ಕೆಲ ಮಾಹಿತಿ ಹಂಚಿಕೊಂಡಿದ್ದಾರೆ. ತ್ವಚೆಯ ಸಮಸ್ಯೆಗಳಿಗೆ ಹುಣಸೆಹಣ್ಣು-ಕೊತ್ತಂಬರಿಸೊಪ್ಪು ರಾಮಬಾಣ ಎನ್ನಲಾಗಿದೆ. ಹುಣಸೆ ಹಣ್ಣು-ಕೊತ್ತಂಬರಿ ಸೊಪ್ಪಿನಿಂದ ಮಾಡುವ ಪಾನೀಯವು ತ್ವಚೆ ತಾಜಾತನವಾಗಿ ಇಡುವುದ್ದಕ್ಕೆ ಸಹಾಯ ಮಾಡುತ್ತದೆ. ಹುಣಸೇಹಣ್ಣಿನಲ್ಲಿರುವ ಹುಳಿ, ಕೊತ್ತಂಬರಿಸೊಪ್ಪಲ್ಲಿರುವ ತಾಜಾತನ ನಮ್ಮ ದೇಹಕ್ಕೆ ಹಿತ ನೀಡುತ್ತದೆ.
ಹುಣಸೇಹಣ್ಣಿನಲ್ಲಿ ಹೈಯಲುರೋನಿಕ್ ಆಯಸಿಡ್ ನಮ್ಮ ದೇಹಕ್ಕೆ ತುಂಬಾ ಉಪಯುಕ್ತವಾಗಿದ್ದು ಇದರಿಂದ ಚರ್ಮವನ್ನು ರಕ್ಷಿಸಿಕೊಳ್ಳಬಹುದು. ಹುಣಸೇಹಣ್ಣಿನ ರಸವನ್ನು ನಿಮ್ಮ ಮುಖದ ಮೇಲಿರುವ ಸುಕ್ಕು, ಕಪ್ಪು ಕಲೆಗಳ ಮೇಲೆ ಹಾಕುತ್ತಿದ್ದರೆ ಕ್ರಮೇಣ ಈ ಸಮಸ್ಯೆಗಳು ಕಡಿಮೆಯಾಗುತ್ತದೆ ಎಂದು ಸೋನಾಲಿ ತಿಳಿಸಿದ್ದಾರೆ.
ಹುಣಸೆ ಹಣ್ಣು
ಹುಣಸೇಹಣ್ಣಿನಲ್ಲಿರುವ ಅಪಾರವಾದ ವಿಟಮಿನ್ ಸಿ ಮತ್ತು ಕೆ, ಸೂರ್ಯನ ರಶ್ಮಿಯಿಂದ ಏರ್ಪಡುವ ತ್ವಚೆಯ ಸಮಸ್ಯೆಗಳನ್ನು ದೂರ ಮಾಡುವ ಜೊತೆಗೆ ಮೊಡವೆಗಳನ್ನು ನಿವಾರಿಸುತ್ತದೆ. ಇದರಲ್ಲಿರುವ ಪೊಟ್ಯಾಸಿಯಮ್ ಬಿಟಾರ್ಟ್ರೇಟ್, ಮಾಲಿಕ್ ಮತ್ತು ಟಾರ್ಟಾರಿಕ್ ಆಯಸಿಡ್ ಮನುಷ್ಯನಿಗೆ ಉತ್ತಮ ಜೀರ್ಣಕ್ರಿಯೆ, ಕರುಳಿನ ಆರೋಗ್ಯ ಕಾಪಾಡುತ್ತದೆ.
ಹುಣಸೇರಸದಿಂದ ತ್ವಚೆಯ ಸಮಸ್ಯೆಗಳು ದೂರವಾಗುತ್ತಾ?
ಈ ಬಗ್ಗೆ ಚರ್ಮರೋಗ ತಜ್ಞರಾದ ಡಾ.ರಿಂಕಿ ಕಪೂರ್ ಹೇಳುವ ಪ್ರಕಾರ, ಹುಣಸೇರಸ, ಕೊತ್ತಂಬರಿ ಸೊಪ್ಪಿನಿಂದ ಮಾಡುವ ನೀರು ಕುಡಿಯುವುದರಿಂದ ನಿಜಕ್ಕೂ ನಿಮ್ಮ ಚರ್ಮ ಆರೋಗ್ಯವಾಗಿರುತ್ತದೆ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲ ಇದರಿಂದ ಯವ್ವನದ ತ್ವಚೆ ಸಹ ನಿಮ್ಮದಾಗಿಸಿಕೊಳ್ಳಬಹುದು. ಕೊತ್ತಂಬರಿಸೊಪ್ಪಿನಲ್ಲಿರುವ ಗುಣಗಳು ನಮ್ಮನ್ನು ತಾಜಾತನವಾಗಿ ಇಡುವುದರ ಜೊತೆಗೆ ಚರ್ಮಕ್ಕೆ ಶಕ್ತಿ ನೀಡುವ ಟಾನಿಕ್ ಆಗಿ ಪ್ರಭಾವ ಬೀರುತ್ತದೆ ಎಂದು ತಜ್ಞರು ಹೇಳುತ್ತಾರೆ.
ಕೊತ್ತಂಬರಿ
ಹುಣಸೇರಸದಲ್ಲಿರುವ ಆಂಟಿಆಕ್ಸಿಡೆಂಟ್ ಗಳು ಚರ್ಮ ಸುಕ್ಕುಗಳ ವಿರುದ್ಧ ಹೋರಾಡುವುದರ ಜೊತೆಗೆ ಚರ್ಮದ ಮೇಲಿನ ನೆರೆಗಳು ಮಾಯವಾಗುವಂತೆ ಮಾಡುತ್ತದೆ. ಇದರಲ್ಲಿರುವ ಆಲ್ಫಾ ಹೈಡ್ರೋಕ್ಸಿ ಆಯಸಿಡ್ ಚರ್ಮದ ಕಾಂತಿಯನ್ನು ಹೆಚ್ಚಿಸಿ, ತ್ವಚೆ ಮೃದುವಾಗುವಂತೆ ಮಾಡುತ್ತದೆ. ಇದು ಮತ್ತಷ್ಟು ನಿಮ್ಮನ್ನು ಯವ್ವವಾಗಿರಿಸಲು ಸಹಾಯ ಮಾಡುತ್ತದೆ. ಚರ್ಮದ ಮೇಲಿರುವ ಕಲೆಗಳು, ಕಾಂತಿಹೀನ ಸಮಸ್ಯೆಗಳಿಗೂ ಹುಣಸೇರಸದಿಂದ ಮುಕ್ತಿ ಸಿಗುತ್ತದೆ ಎಂದು ಚರ್ಮರೋಗ ತಜ್ಞರಾದ ಡಾ.ರಿಂಕಿ ಕಪೂರ್ ವಿವರಿಸಿದ್ದಾರೆ.
ಕೊತ್ತಂಬರಿ ಸೊಪ್ಪಿನ ಚಮತ್ಕಾರ
ಕೊತ್ತಂಬರಿಸೊಪ್ಪು ನಾವು ಆಹಾರದಲ್ಲಿ ಬಳಸುತ್ತೇವೆ. ಆಹಾರದಲ್ಲಿ ಅಲಂಕಾರಿಕವಾಗಿ ಕಾಣುವ ಕೊತ್ತಂಬರಿಸೊಪ್ಪು ನಮ್ಮ ಚರ್ಮದ ಅಲಂಕಾರಕ್ಕೂ ಸಹಾಯ ಮಾಡುತ್ತದೆ. ಕೊತ್ತಂಬರಿಸೊಪ್ಪಿನಲ್ಲಿರುವ ಖನಿಜಾಂಶ, ವಿಟಮಿನ್ ಗಳು ಹಾಗೂ ಅಗತ್ಯವಿರುವ ಎಣ್ಣೆಯಂಶಗಳು ನಮ್ಮ ಮುಖದಲ್ಲಿರುವ ಮೊಡವೆಗಳ ನಿವಾರಣೆಗೆ ಸಹಾಯ ಮಾಡುತ್ತದೆ. ಅಷ್ಟೇ ಅಲ್ಲ ಚರ್ಮದಲ್ಲಿನ ಉರಿಯೂತ, ಬಿರುಕಿನಂತಹ ತೊಂದರೆಗಳಿಗೆ ಪರಿಹಾರವಾಗುತ್ತದೆ. ನೈಸರ್ಗಿಕವಾದ ಕೊತ್ತಂಬರಿಸೊಪ್ಪಿನಲ್ಲಿರುವ ಗುಣಗಳು ಚರ್ಮದಕಾಂತಿ, ರಂಧ್ರಗಳನ್ನು ಬಿಗಿಗೊಳಿಸಲು, ಚರ್ಮದ ಆರೋಗ್ಯ ಕಾಪಾಡಲು ಸಹಕಾರಿಯಾಗಿದೆ ಎನ್ನಲಾಗಿದೆ.